ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​​ಗೆ ಭಾರಿ ಡಿಮ್ಯಾಂಡ್, ಬೀದರ್​ನಲ್ಲಿ ಮಡಿಕೆಗಾಗಿ ಸರತಿ ಸಾಲಿನಲ್ಲಿ ನಿಂತ ಜನ

ಬೀದರ್​ನಲ್ಲಿ ಕಳೆದೆರಡು ವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಕುಡಿಯುವ ನೀರು ಕೂಡ ಬಿಸಿಯಾಗುತ್ತಿದ್ದು ಜನರು ತಮ್ಮ ತಮ್ಮ ಮನೆಯಲ್ಲಿ ತಂಪು ನೀರು ಇಡಲು ಬಡವರ ಫ್ರಿಡ್ಜ್ ಅಂದರೆ ಕುಂಬಾರ ಮಾಡಿದ ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ.

ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​​ಗೆ ಭಾರಿ ಡಿಮ್ಯಾಂಡ್, ಬೀದರ್​ನಲ್ಲಿ ಮಡಿಕೆಗಾಗಿ ಸರತಿ ಸಾಲಿನಲ್ಲಿ ನಿಂತ ಜನ
ಮಡಿಕೆ ವ್ಯಾಪಾರ
Edited By: ವಿವೇಕ ಬಿರಾದಾರ

Updated on: Mar 10, 2024 | 9:51 AM

ಬೀದರ್​, ಮಾರ್ಚ್​ 10: ಬಿಸಿಲಿನ ತಾಪಮಾನ (Temperature) ಏರುತ್ತಿದಂತೆ ಬಡವರ ಫ್ರಿಡ್ಜ್​ಗೆ ಬಾರಿ ಡಿಮ್ಯಾಂಡ್ ಬಂದಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ ಕುಂಬಾರರಿಗೆ (Potter) ಭರ್ಜರಿ ವ್ಯಾಪಾರವಾಗಿದೆ. ಎರಡು ವರ್ಷದಿಂದ ಆಗದ ವ್ಯಾಪಾರ ಬೇಸಿಗೆಯಲ್ಲಿ ಆಗಿದ್ದು ಕುಂಬಾರರು ಖಷಿಯಲ್ಲಿದ್ದಾರೆ. ಕೊರೊನಾ (Covid) ಸಂಕಷ್ಟ ಬೆಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದವರಿಗೆ ಈ ವರ್ಷ ಬಂಪರ್ ವ್ಯಾಪಾರವಾಗಿದೆ. ಮಡಿಕೆಯಲ್ಲಿನ‌ (Pot) ನೀರು ಆರೋಗ್ಯಕ್ಕೆ ಒಳ್ಳೆಯದೆಂದು ಜನ ಮಡಿಕೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಗಡಿ ಜಿಲ್ಲೆ ಬೀದರ್ ಅಂದರೆ ಬಿಸಿಲಿನ ನಗರವೆಂದು ಕರೆಯುತ್ತಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಕೆಲವು ಕಿರಿಕ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವ ಬದಲು ನಿಮ್ಮನ್ನು ಬೀದರ್​ಗೆ ವರ್ಗಾವಣೆ ಮಾಡುತ್ತೇನೆ ನೋಡಿ ಎಂದರೆ ಸಾಕು ಅಧಿಕಾರಿ ಕುಂತಲೇ ಬೆವತು ಹೋಗಿರುತ್ತಾರೆ. ಇದಕ್ಕೆ ಕಾರಣ ಬೀದರ್​ನಲ್ಲಿರುವ ಕೆಂಡದಂತ ಬಿಸಿಲು. ಬೀದರ್​ನಲ್ಲಿ ಕಳೆದೆರಡು ವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಕುಡಿಯುವ ನೀರು ಕೂಡ ಬಿಸಿಯಾಗುತ್ತಿದ್ದು ಜನರು ತಮ್ಮ ತಮ್ಮ ಮನೆಯಲ್ಲಿ ತಂಪು ನೀರು ಇಡಲು ಬಡವರ ಫ್ರಿಡ್ಜ್ ಅಂದರೆ ಕುಂಬಾರ ಮಾಡಿದ ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ.

ಹೀಗಾಗಿ ಜನರು ಮಣ್ಣಿನ ಮಡಿಕೆಯನ್ನ ಖರೀದಿಸಲು ಮುಗಿಬಿದ್ದಿದ್ದು ಈಗಾಗಲೇ ಮಾಡಿಟ್ಟಿರುವ ಶೇ 90 ರಷ್ಟು ಮಣ್ಣಿನ ಮಡಿಕೆಗಳು ಕಾಲಿಯಾಗಿದ್ದು ಹೊಸದಾಗಿ ಮತ್ತೆ ಮಣ್ಣಿನ ಮಡಿಕೆಯನ್ನ ಕುಂಬಾರರು ಹಗಲು-ರಾತ್ರಿ ಎನ್ನದೆ ಮಾಡುತ್ತಿದ್ದಾರೆ. ಈ ವರ್ಷ ಮಣ್ಣಿನ ಮಡಿಕೆಗಳು ಭಾರಿ ಪ್ರಮಾಣದಲ್ಲಿ ಮಾರಟವಗಿದ್ದು, ಕುಂಬಾರರು ಖುಷಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮದ ಮಧ್ಯೆ ಕಲುಷಿತ ನೀರಿನ ಸಂಕಷ್ಟ; ಮಣ್ಣು, ತ್ಯಾಜ್ಯಮಿಶ್ರಿತ ನೀರಿನಿಂದ ಶಾಂತಿಲಾಲ್ ಲೇಔಟ್ ಜನರು ಹೈರಾಣು

ವಿವಿಧ ಆಕಾರಗಳ ಮಣ್ಣಿನ ಮಡಿಕೆಗಳು ಜನರನ್ನ ಆಕರ್ಷಿಸುತ್ತಿವೆ. ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನ ಕುಡಿಯುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಹೆಚ್ಚಿನ ಜನರು ಮಣ್ಣಿನ ಮಡಿಕೆಯಲ್ಲಿನ ನೀರನ್ನ ಕುಡಿಯುತ್ತಿದ್ದಾರೆ. ಇನ್ನೂ ಕೊರೊನಾ ಭಯ ಇರುವ ಕಾರಣ ವೈದ್ಯರು ಕೂಡ ಫ್ರಿಡ್ಜ್​​ನಲ್ಲಿಟ್ಟಿರುವ ನೀರುನ್ನು ಕುಡಿಯಬೇಡಿ ಎಂದು ಹೇಳಿರುವ ಕಾರಣ, ಜನರು ಫಿಡ್ಜ್​ನಲ್ಲಿನ ನೀರಿನ ಬದಲು ಮಣ್ಣಿನ ಮಡಿಕೆಯಲ್ಲಿ ನೀರನ್ನ ಕುಡಿಯುತ್ತಿದ್ದಾರೆ. ಇದರಿಂದಾಗಿ ಕುಂಬಾರರು ಮಾಡಿದ ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಪ್ರಮುಖ ರಸ್ತೆಯಲ್ಲಿಯೇ ಮಡಿಕೆಯ ವ್ಯಾಪಾರ ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಮಡಿವಾಳ ಚೌಕ್, ನೆಹರು ಸ್ಟೇಡಿಯಂ ರಸ್ತೆ, ನೌಬಾದ್ ಇನ್ನೂ ಕುಂಬಾರರು ವಾಸಿಸುವ ಗ್ರಾಮದಲ್ಲಿಯೂ ಕೂಡ ಜನರು ಹೋಗಿ ಮಡಿಕೆಯನ್ನ ಖರೀದಿಸುತ್ತಿದ್ದಾರೆ.

ಕಳೆದ ವರ್ಷ ಬೆಸಿಗೆಯಲ್ಲಿ ಅಕಾಲಿಕವಾಗಿ ಮಳೆಸುರಿದ ಪರಿಣಾಮ ಕುಂಬಾರರಿಗೆ ವ್ಯಾಪಾರವಾಗಿರಲಿಲ್ಲ. ಇದರ ಹಿಂದಿನ ವರ್ಷದಲ್ಲಿ ಕೊರೊನಾ ಕಾರಣದಿಂದ ವ್ಯಾಪಾರವಾಗಿರಲಿಲ್ಲ. ಆದರೆ ಈಗ ಭರ್ಜರಿ ವ್ಯಾಪಾರವಾಗಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ಖಾಲಿ ಕೈಯಲ್ಲಿದ್ದ ಕುಂಬಾರರು ಈಗ ಬರ್ಜರಿ ವ್ಯಾಪಾರದಿಂದಾಗಿ ಖುಷಿಯಾಗಿದ್ದಾರೆ. ಕೊರೊನಾ ಕಾಲದಲ್ಲಿ ವ್ಯಾಪಾರವಿಲ್ಲದ್ದಕ್ಕಾಗಿ ಅನೇಕ ಕುಂಬಾರರು ತಮ್ಮ ವಂಶಪರಂಪರಾಗತವಾಗಿ ಬಂದಿದ್ದ ಕುಂಬಾರ ವೃತ್ತಿಗೆ ಗುಡ್ ಬೈ ಹೇಳಿ ಕೂಲಿ ಕೆಲಸವನ್ನ ಮಾಡಿಕೊಂಡಿದ್ದರು. ಆದರೆ ಈ ವರ್ಷ ಉತ್ತಮ ವ್ಯಾಪಾರ ಆಗಿರುವುದರಿಂದ ಮತ್ತೆ ಕುಂಬಾರರು ಮೂಲ ವೃತ್ತಿಗೆ ಹಿಂದುರುಗುತ್ತಿರುವುದು ಖುಷಿಯ ವಿಚಾರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us