ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಈ ವರ್ಷದ ಆರಂಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದ ನೈತಿಕ ಪೊಲೀಸ್​ಗಿರಿ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬೀದರ್​ನ ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ
ನೈತಿಕ ಪೊಲೀಸ್​ಗಿರಿ
Edited By:

Updated on: May 12, 2024 | 11:04 AM

ಬೀದರ್, ಮೇ 10: ಹಾವೇರಿಯ (Haveri) ಘಟನೆ ಮಾಸವ ಮುನ್ನವೇ ಬೀದರನ (Bidar) ಬಸವಕಲ್ಯಾಣದಲ್ಲಿ (Basavakalyan) ಮತ್ತೊಂದು ನೈತಿಕ ಪೊಲೀಸ್​ಗಿರಿ (Moral Policing) ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ ಧರ್ಮೀಯ ಮಹಿಳೆ ಮೇಲೆ ಅದೇ ಧರ್ಮದ ಕೆಲ ಯುವಕರು ಹಲ್ಲೆ ಮಾಡಿದ್ದಾರೆ. ವ್ಯಕ್ತಿ ಆಟೋ ಚಾಲಕನಾಗಿದ್ದು, ಈತನ ಜೊತೆಗೆ ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ, ಮುಸ್ಲಿಮರ ಹೆಸರು ಹಾಳು ಮಾಡುತ್ತೀಯಾ ಎಂದು ಕೆಲ ಮುಸ್ಲಿಂ ಯುವಕರು ಅದೇ ಧರ್ಮದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾವೇರಿಯಲ್ಲಿ ನೈತಿಕ ಪೊಲೀಸ್​ಗಿರಿ

ಜನವರಿ 08ರಂದು ಸೋಮವಾರ ಅನ್ಯಕೋಮಿನ ಹಿಂದೂ ಧರ್ಮದ ವ್ಯಕ್ತಿ ಮತ್ತು ಮುಸ್ಲಿಂ ಧರ್ಮದ ಮಹಿಳೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದರು. ಈ ವಿಚಾರ ತಿಳಿದ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್​ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈ ಘಟನೆಯ ಎರಡು ವಿಡಿಯೋ ವೈರಲ್ ಆಗಿತ್ತು.

ಈ ದುರುಳರು ಹಿಂದೂ ಹುಡಗರ ಜೊತೆ ಕಾಣಿಸಿಕೊಂಡ ಮುಸ್ಲಿಂ ಹುಡುಗಿಯರು, ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದರು. ಜೋಡಿ ಹಕ್ಕಿಗಳ ಮೇಲೆ‌ ಅಟ್ಯಾಕ್ ಮಾಡಿ ಹುಡುಗಿಯರನ್ನು ಎಳೆದೊಯ್ಯುತ್ತಿದ್ದರು. ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್​ಗಿರಿ: ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ 

7 ಮುಸ್ಲಿಂ ಯುವಕರಿಂದ ಗ್ಯಾಂಗ್ ರೇಪ್ ?

ಹೋಟೆಲ್​ನಲ್ಲಿ ಹಲ್ಲೆ ಮಾಡಿದ ಬಳಿಕ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು 7 ಮುಸ್ಲಿಂ ಯುವಕರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಹಿಂದೂ ಪುರುಷನ ಜೊತೆ ಲಾಡ್ಜ್​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ ಎನ್ನಲಾಗುತ್ತಿದೆ. ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದರು. ಮತ್ತೊಂದೆಡೆ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆಯ ಪತಿ ಕೂಡ ಹೇಳಿಕೆ ನೀಡಿದ್ದರು. ಅರಣ್ಯದಲ್ಲಿ ರೇಪ್ ಮಾಡಿದ್ದ ವಿಡಿಯೋ ಇದೆ ಎಂದು ಮಹಿಳೆಯ ಪತಿ ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 am, Sun, 12 May 24