ಬೀದರ್: ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಆಕ್ರೋಶ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಭೀಮ್ ರೆಡ್ಡಿ ಅವರಿಗೆ ಸೇರಿದ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, 14 ಎಕರೆ ಕಬ್ಬು ಸುಟ್ಟು ಹೋಗಿದ್ದು ಅಂದಾಜಿ 15 ಲಕ್ಷ ರೂ. ರೈತನಿಗೆ ನಷ್ಟ ಉಂಟಾಗಿದೆ. ಜೆಸ್ಕಾಂ ಅಧಿಕಾರಿಗಳು ವಿರುದ್ಧ ರೈತ ಆಕ್ರೋಶ ವ್ಯಕ್ತಪಡಿಸಿದ್ದು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಬೀದರ್: ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಆಕ್ರೋಶ
ಕಬ್ಬಿಣ ಗದ್ದೆಗೆ ಬೆಂಕಿ
Follow us
ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on:Nov 03, 2023 | 1:05 PM

ಬೀದರ್​​​, ನವೆಂಬರ್​​​ 02: ಆ ರೈತ ಕಷ್ಟಪಟ್ಟು ಸಾವಯವ ರೀತಿಯಲ್ಲಿ ಕಬ್ಬು ಬೆಳೆಸಿದ್ದ. ಬರ್ಜರಿ ಇಳುವರಿ ಬರುವ ನಿರಿಕ್ಷೇಯೂ ಆ ರೈತನಲ್ಲಿತ್ತು. ಇನ್ನೊಂದು ವಾರದಲ್ಲಿ ಕಬ್ಬು ಕಟಾವು ಮಾಡುವ ಪ್ಲಾನ್ ಸಹ ಮಾಡಿಕೊಂಡಿದ್ದ, ಅಷ್ಟರಲ್ಲಾಗಲೇ ಶಾರ್ಟ್ ಸರ್ಕ್ಯೂಟ್​ (short circuit) ನಿಂದಾಗಿ ಕಬ್ಬು ಬೆಂಕಿಗಾಹುತಿಯಾಗಿದೆ. ಇದು ಸಹಜವಾಗಿಯೇ ಬಡ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಭೀಮ್ ರೆಡ್ಡಿ ಅವರಿಗೆ ಸೇರಿದ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಕಷ್ಟಪಟ್ಟು ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

14 ಎಕರೆ ಕಬ್ಬಿನ ಗದ್ದೆಗೆ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ಹತ್ತಿಕೊಂಡು ಸುಮಾರು 10 ಎಕರೆಯಷ್ಟು ಕಬ್ಬು ಸಂಪೂರ್ಣ ವಾಗಿ ಸುಟ್ಟು ಹೋಗಿದೆ. ಜೆಸ್ಕಾಂನವರು ಹೊಲಕ್ಕೆ ಬಂದು ನೋಡಿಕೊಂಡು ಹೋಗಿದ್ದಾರೆ. ಆದರೆ ಪರಿಹಾರ ಮಾತ್ರ ಕೊಟ್ಟಿಲ್ಲ ಎಂದು ರೈತ ಭೀಮ್ ರೆಡ್ಡಿ ಹೇಳುತ್ತಿದ್ದಾರೆ.

ಸಾವಯವ ಕೃಷಿ ಮೂಲಕ ಕಬ್ಬು ಬೆಳೆಸಿದ್ದ ರೈತ ಭೀಮ್ ರೆಡ್ಡಿ ಉತ್ತಮವಾಗಿ ಇಳುವರಿ ಬರುವ ನೀರಿಕ್ಷೆ ಇತ್ತು. ಆದರೆ ಜೆಸ್ಕಾಂನವರ ನಿರ್ಲಕ್ಷ್ಯಕ್ಕೆ 14 ಎಕರೆ ಕಬ್ಬು ಸುಟ್ಟು ಹೋಗಿದ್ದು ಅಂದಾಜಿ 15 ಲಕ್ಷ ರೂ. ರೈತನಿಗೆ ನಷ್ಟ ಸಂಭವಿಸಿದೆ. ಡ್ರಿಫ್ ಮೂಲಕ ಹನಿ ನೀರಾವರಿ ಪದ್ದತಿಯಲ್ಲಿ ಕಬ್ಬು ಬೆಳೆಸಿದ್ದರು. ಕೆವಲ ಹತ್ತು ತಿಂಗಳಲ್ಲಿ ಉತ್ತಮವಾಗಿ ಕಬ್ಬಿನ ಬೆಳೆ ಬಂದಿತ್ತು. ಇವರು ಬೆಳಸಿದ ಕಬ್ಬು ನೋಡಲು ಸಾಕಷ್ಟು ರೈತರು ಇವರ ಹೊಲಕ್ಕೆ ಭೇಟಿ ಕೊಟ್ಟು ಇವರ ಮಾರ್ಗದರ್ಶನ ಪಡೆಯುತ್ತಿದ್ದರು. ಆದರೆ ಆ ಕಬ್ಬು ಜೊತೆಗೆ ಡ್ರಿಫ್ ಕೂಡ ಬೆಂಕಿಯ ಕೆನ್ನಾಲಿಗೆ ಸುಟ್ಟು ಹೋಗಿದೆ.

ಇದನ್ನೂ ಓದಿ: ವರ್ಷಗಳೆ ಉರುಳಿದರು ಆರಂಭವಾಗದ 44.34 ಕೋಟಿ ರೂ. ವೆಚ್ಚದ ಸಿಇಟಿಪಿ ಘಟಕ: ವಿಷಕಾರಿ ನೀರೇ ಕುಡಿಯುತ್ತಿರುವ ಗ್ರಾಮಸ್ಥರು

ಇದು ಸಹಜವಾಗಿ ಯುವ ರೈತರನ ಬದುಕನ್ನ ಕಷ್ಟಕ್ಕೆ ತಳ್ಳಿದಂತಾಗಿದೆ. ಪ್ರತಿ ವರ್ಷವೂ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಾರು ಎಕೆರೆಯಷ್ಟು ಬೆಳೆಗಳು ಸುಟ್ಟು ಹೋಗುತ್ತಲೇ ಇರುತ್ತವೆ. ಆದರೆ ಆ ರೈತರಿಗೆ ಜೆಸ್ಕಾಂನಿಂದ ಯಾವುದೆ ರೀತಿಯ ಪರಿಹಾರ ಸಿಗೋದಿಲ್ಲ. ಇದರ ಜೊತೆಗೆ ಬಹುತೇಕ ರೈತರ ಹೊಲದಲ್ಲೆಲ್ಲ ವಿದ್ಯುತ್ ಕಂಬಳು ಬಾಗಿದ್ದು ಈಗಲೋ ಆಗಲೋ ಬಿಳುವ ಸ್ಥಿತಿಯಲ್ಲಿವೆ. ಇದರ ಜೊತೆಗೆ ವಿದ್ಯುತ್ ತಂತಿಗಳು ಕೂಡ ಕೈಗೆಟಕುವ ಹಾಗೆ ಹೊಲದಲ್ಲಿ ಜೋತು ಬಿದ್ದಿದ್ದು ಏನೋ ಆಯಾ ತಪ್ಪಿ ಹೊಲದಲ್ಲಿ ಓಡಾಡುವಾಗಿ ಕೈ ಮೇಲೇ ಮಾಡಿದರೇ ಅಷ್ಟೇ ಶಿವನ ಪಾದ ಸೇರೋದು ಗ್ಯಾರಂಟಿ.

ಇದನ್ನೂ ಓದಿ: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

ಇಂತಹ ವಿದ್ಯುತ್ ತಂತಿಗಳಿಂದ ಹತ್ತಾರು ರೈತರು ನೂರಾರು ಜಾನುವಾರುಗಳು ವಿದ್ಯುತ್ ತಂತಿ ಸ್ಫರ್ಶದಿಂದ ಸಾವಿಗೀಡಾದ ಘಟನೆಗಳು ಸಾಕಷ್ಟಿದ್ದು ಈ ವಿಚಾರ ಜೆಸ್ಕಾಂ ಅಧಿಕಾರಿಗಳಿಗೂ ಈ ವಿಚಾರ ಗೊತ್ತಿದ್ದರು ಅವರು ಕೂಡ ಬಾಗಿದ ಕಂಬಳನ್ನ ಸರಿ ಮಾಡಿ ಕೈಗೆಟುಕುವ ರೀತಿಯಲ್ಲಿರುವ ವಿದ್ಯುತ್ ತಂತಿಗಳನ್ನ ಮೇಲ್ಲಕ್ಕೆತ್ತುವ ಮನಸ್ಸು ಮಾಡದಿರುವುದು ರೈತರ ಅಸಮಾದಾನ ಹೆಚ್ಚಿಸುವಂತೆ ಮಾಡಿದೆ.

ರೈತರ ಬೆಳೆಗಳು ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿಗಾಹುತಿಯಾಗಿ ರೈತರ ಬೆಳೆಗಳು ಹಾನಿಯಾಗುತ್ತಿರುವ ಘಟನೆ ಜಿಲ್ಲೆಯಲ್ಲಿ ಪದೇ ಪದೇ ಜರುಗುತ್ತಲೇ ಇವೆ. ಇಷ್ಟಾದರೂ ಕೂಡ ನೆಲಕ್ಕೆ ಬಾಗಿರುವ ತಂತಿಯನ್ನ ಮೆಲ್ಲಕ್ಕೆತ್ತುವ ಕೆಲಸವನ್ನ ಅಧಿಕಾರಿಗಳು ಮಾಡುತ್ತಿಲ್ಲ. ಇದರ ಜೊತೆಗೆ ಗಾಯಗೊಂಡಿರುವ ರೈತನಿಗೆ ಪರಿಹಾರ ಕೊಡುವ ಪ್ರಯತ್ನವನ್ನ ಕೂಡ ಜೆಸ್ಕಾಂ ಮಾಡುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಬಾಗಿದ ವಿದ್ಯುತ್ ಲೈನ್ ಗಳನ್ನ ಸರಿಪಡಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ವಿನಂತಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:50 pm, Thu, 2 November 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು