ನೂರಾರು ವರ್ಷದಿಂದ ಅಲ್ಲಿ ಕಾಡು ಪ್ರಾಣಿಗಳು ವಾಸವಾಗಿದ್ದವು, ಈಗ ಸರ್ಕಾರವೇ ಅಲ್ಲಿ ಸೈಟ್ ಮಾಡಿ ಮಾರಾಟ ಮಾಡುತ್ತಿದೆ!
ಬೀದರ್ ನ ಹೊರವಲಯದಲ್ಲಿ ಬೆಳ್ಳೂರಾ ಗ್ರಾಮದ ಸುತ್ತಮುತ್ತ ಬಯಲು ಪ್ರದೇಶದಲ್ಲಿ ನೂರಾರು ವರ್ಷದಿಂದ ಕಾಡು ಪ್ರಾಣಿಗಳು ವಾಸವಿದ್ದವು. ಅಲ್ಲಿನ ಕೆರೆಯ ನೀರು ಕುಡಿದು, ಅಲ್ಲಿನ ಹುಲ್ಲನ್ನ ತಿಂದು ಯಾರದೂ ಭಯವಿಲ್ಲದೆ ಓಡಾಡಿಕೊಂಡಿದ್ದವು. ಆದರೆ ಈಗ ಆ ಜಾಗದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಸ್ವತಃ ಸರ್ಕಾರಿ ಸಂಸ್ಥೆಯೇ (ಕೆಐಡಿಬಿ) ಈ ಕೆಲಸಕ್ಕೆ ಕೈ ಹಾಕಿರುವುದು ವಿಪರ್ಯಾಸವೆನಿಸಿದೆ. ಇದರಿಂದಾಗಿ ಕೃಷ್ಣಮೃಗಳು, ಜಿಂಕೆಗಳು ಜಾಗ ಖಾಲಿ ಮಾಡುವ ಸಮಯ ಸನ್ನಿಹಿತವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ, ಜಿಲ್ಲಾಡಳಿತ ಕಂಡೂಕಾಣದಂತೆ ಕುಳಿತಿದೆ.
ನೂರಾರು ವರ್ಷದಿಂದ ಆ ಬಯಲು ಪ್ರದೇಶದಲ್ಲಿ ಕಾಡು ಪ್ರಾಣಿಗಳು (Wild Animals) ವಾಸವಾಗಿದ್ದವು. ಅಲ್ಲಿನ ಕೆರೆಯ ನೀರು ಕುಡಿದು, ಅಲ್ಲಿನ ಹುಲ್ಲನ್ನ ತಿಂದು ಯಾರದೂ ಭಯವಿಲ್ಲದೆ ಓಡಾಡಿಕೊಂಡಿದ್ದವು. ಆದರೆ ಈಗ ಆ ಜಾಗದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ (Karnataka Government). ಅಳವಿನಂಚಿನಲ್ಲಿರುವ ಜಿಂಕೆಗಳ ವಾಸಸ್ಥಾನದ ಜಾಗ ಕಬಳಿಕೆ… ಜಿಂಕೆ, ಕೃಷ್ಣಮೃಗ ವಾಸಿಸುತ್ತಿದ್ದ ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಸೈಟ್ ನಿರ್ಮಾಣ. ಇತ್ತ ಕೆಐಡಿಬಿಯಿಂದಲೂ ( KIADB) ಸೈಟ್ ನಿರ್ಮಾಣ ಮಾಡಿ ಮಾರಾಟ. ವನ್ಯ ಜೀವಿಗಳ ವಾಸಸ್ಥಾನಕ್ಕೆ ಧಕ್ಕೆ. ಐದಾರು ವರ್ಷಗಳ ಹಿಂದೆ ಐದು ಸಾವಿರಕ್ಕಿದ್ದ ಇವುಗಳ ಸಂಖ್ಯೆ ಒಂದು ಸಾವಿರಕ್ಕೆ ಇಳಿಕೆ… ನೂರಾರು ವರ್ಷದಿಂದ ಆ ಜಾಗೆಯಲ್ಲಿದ್ದ ಕೃಷ್ಣಮೃಗಳು, ಜಿಂಕೆಗಳು ಜಾಗ ಖಾಲಿ ಮಾಡುವ ಸಮಯ ಸನ್ನಿಹಿತವಾಗಿದೆ (Bidar News).
ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ, ಜಿಲ್ಲಾಡಳಿತ ಕಂಡೂಕಾಣದಂತೆ ಕುಳಿತಿದೆ. ಹೌದು ಬೀದರ್ (Bidar)ನ ಹೊರವಲಯದಲ್ಲಿ ಬೆಳ್ಳೂರಾ ಗ್ರಾಮದ ಸುತ್ತಮುತ್ತ 650 ಎಕರೆಯಷ್ಟು ವಿಶಾಲವಾದ ಬಯಲು ಪ್ರದೇಶವಿತ್ತು. ಈ ಜಾಗದಲ್ಲಿ ಸುಂದರವಾದ ಕೆರೆ, ಸಮೃದ್ಧ ಹುಲ್ಲುಗಾವಲು ಪ್ರದೇಶವಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಯಥೇಚ್ಚವಾಗಿ ಜಿಂಕೆ, ಕೃಷ್ಣಮೃಗಗಳು ವಾಸವಾಗಿದ್ದವು. ಆದರೆ ಈ ಜಾಗಕ್ಕೆ ಈಗ ಬಂಗಾರದ ಬೆಲೆ ಬಂದಿದ್ದು ಈ ಜಾಗದ ಮೇಲೆ ಭೂ ಮಾಫಿಯಾದ ಕಣ್ಣು ಬಿದ್ದಿದೆ. ಇದರ ಪರಿಣಾಮವಾಗಿ ಇಲ್ಲಿ ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಈಗಾಗಲೇ ಕೆಐಡಿಬಿಯವರು 250 ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶವನ್ನ ವಶಪಡಿಸಿಕೊಂಡು ಅಲ್ಲಿನ ಎಲ್ಲ ಜಾಗದಲ್ಲೂ ತಂತಿ ಬೆಲಿಯನ್ನ ಹಾಕಿದ್ದಾರೆ!
ಹೀಗಾಗಿ ಹತ್ತಾರು ವರ್ಷದಿಂದ ಆ ಜಾಗದಲ್ಲಿ ವಾಸವಾಗಿದ್ದ ಕಾಡು ಪ್ರಾಣಿಗಳು ಈಗ ಜಾಗ ಖಾಲಿ ಮಾಡುವ ಸಮಯ ಸನ್ನಿಹಿತವಾಗಿದೆ. ಲ್ಯಾಂಡ್ ಮಾಫಿಯಾದವರು ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಕಾಮಗಾರಿಗಳು ಪ್ರಾಣಿಗಳ ತುತ್ತಿನ ಚೀಲವನ್ನೇ ಕಿತ್ತುಕೊಳ್ಳುತ್ತಿವೆ. ಪ್ರತಿ ನಿತ್ಯ ಬೆಳ್ಳಂಬೆಳಗ್ಗೆ ಬರುವ ಜಿಂಕೆ, ಕೃಷ್ಣಮೃಗಗಳು ನಮ್ಮ ಕಾಲ ಮುಗಿಯಿತೇ…? ಎಂಬ ಆತಂಕವನ್ನ ಎದುರಿಸುವ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಕೂಡಲೇ ಪ್ರಾಣಿಗಳಿಗೆ ಕಂಟಕವಾಗಿರುವ ಈ ಕೆಲಸವನ್ನ ಬಂದ್ ಮಾಡಬೇಕು. ಪ್ರಾಣಿಗಳ ಸಂರಕ್ಷಣೆಗೆ ಒತ್ತುಕೊಡಬೇಕೆಂದು ಬೀದರ್ ನ ಪ್ರಾಣಿಪ್ರಿಯರು ಸರಕಾರಕ್ಕೆ ವಿನಂತಿಸಿದ್ದಾರೆ.
ನೂರಾರು ವರುಷಗಳಿಂದ ಇದೇ ಸ್ಥಳದಲ್ಲಿ ಕೃಷ್ಣ ಮೃಗ ಹಾಗೂ ಜಿಂಕೆಗಳು ವಾಸ ಮಾಡುತ್ತಿವೆ. ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ವನ್ಯ ಜೀವಿಗಳು ವಾಸ ಮಾಡುವ ಸ್ಥಳದಲ್ಲಿ ಕೆಐಡಿಬಿಯಿಂದ ಬೃಹತ್ ರಸ್ತೆಗಳು, ಹೈಮಾಸ್ಟ್ ವಿದ್ಯುತ್ ದೀಪಗಳು, ಚರಂಡಿ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಾಡಲಾಗಿದೆ. ಆದರೆ ಈಗ ಮತ್ತೆ ನೂರಾರು ಎಕರೆಯಷ್ಟೂ ವಿಶಾಲವಾದ ಸ್ಥಳದಲ್ಲಿ ಕೆಐಡಿಯವರು ಸಾರ್ವಜನಿಕರು ಸೈಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ವಾಹನಗಳ ಓಡಾಟ, ಜೆಸಿಬಿಗಳ ಘರ್ಜನೆಯಿಂದಾಗಿ ವಣ್ಯ ಜೀವಿಗಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಆದ್ರೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇಲ್ಲಿಯ ಅರಣ್ಯ ಪ್ರದೇಶ ಹಾಗೂ ಅರಣ್ಯದಲ್ಲಿ ಇರುವ ಕಾಡು ಪ್ರಾ ಣಿಗಳು ನಶಿಸಿ ಹೋಗುತ್ತಿವೆ ಎಂಬ ವಾದವನ್ನು ಪ್ರಾಣಿ ಪ್ರಿಯರು ಮಾಡುತ್ತಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಜಿಂಕೆ, ಕೃಷ್ಣಮೃಗಳು ವಾಸಿಸುವ ಇಲ್ಲಿನ ಬಯಲು ಪ್ರದೇಶದ ಸ್ಥಳದಲ್ಲಿ ಕೆಐಡಿಬಿಯವರು ಒಂದಿಲ್ಲೊಂದು ಕಾಮಗಾರಿಯನ್ನ ಮಾಡುತ್ತಲೇ ಬಂದಿದ್ದಾರೆ. ವನ್ಯಜೀವಿಗಳು ವಾಸಿಸುವ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಕೊಡಬೇಡಿ ಎಂದು ಪ್ರಾಣಿಪ್ರಿಯರು ಸಾಕಷ್ಟು ಸಲ ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಕೇಳಿದರೆ ಅವರು ಜಿಲ್ಲಾಡಳಿತದ ಮೇಲೆಯೂ… ಜಿಲ್ಲಾಡಳಿತದವರನ್ನ ಕೇಳಿದರೆ ಅವರು ಕೆಐಡಿಬಿ ಅಧಿಕಾರಿಗಳ ಮೇಲೆಯೂ ಹೀಗೆ ಒಬ್ಬರ ಮೇಲೊಬ್ಬರು ಹಾಕುತ್ತಾ ಕಾಲ ಕಳೆಯುತ್ತಿದ್ದಾರೆ.
ಬೀದರ್ ಜಿಲ್ಲೆಯ ಜನರು ಕೈಗಾರಿಕರಣದ ವಿರೋಧಿಗಳಲ್ಲದ್ದಿದ್ದರೂ, ಅಮೂಲ್ಯ ಪ್ರಾಣಿ ಮತ್ತು ಅರಣ್ಯ ಸಂಪತ್ತಿನ ಅಳಿವಿಗೆ ಕೆಐಡಿಬಿ ಯೋಜನೆಗಳು ಕಾರಣವಾಗುತ್ತಿವೆ. ಸರಕಾರ ಕೂಡಲೇ ಇತ್ತ ಚಿತ್ತ ಹರಿಸಿ ಸಂರಕ್ಷಣಾ ಕಾಯ್ದೆಯಲ್ಲಿ ಶೆಡ್ಯೂಲ್ ಒಂದರ ಅಡಿ ಬರುವ ಕೃಷ್ಣ ಮೃಗದ ಸಂರಕ್ಷಣೆ ಮತ್ತು ಅದರ ವಾಸ ಸ್ಥಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sat, 16 March 24