AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​​: ಹುಮ್ನಾಬಾದ್​ನಲ್ಲಿ ಭೂಕಂಪನ: 1.9 ರಷ್ಟು ತಿವ್ರತೆ ದಾಖಲು

ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ ಮದರಗಾಂವ್ ಗ್ರಾಮದಲ್ಲಿ ಇಂದು ಬೆಳಗಿನ‌ 4:28ರ ಸುಮಾರಿಗೆ ಭೂಕಂಪನ ಉಂಟಾಗಿದ್ದು,ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಘಟಕದಲ್ಲಿ 1.9 ರಷ್ಟು ತಿವ್ರತೆ ದಾಖಲಾಗಿದೆ. ಭೂಕಂಪ ಪ್ರಮಾಣ ಕಡಿಮೆಯಿರುವ ಕಾರಣ ಭಯಗೊಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದೆ. 

ಬೀದರ್​​​: ಹುಮ್ನಾಬಾದ್​ನಲ್ಲಿ ಭೂಕಂಪನ: 1.9 ರಷ್ಟು ತಿವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
ಸುರೇಶ ನಾಯಕ
| Edited By: |

Updated on:Nov 06, 2023 | 7:09 PM

Share

ಬೀದರ್​, ನವೆಂಬರ್​​​ 06: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ ಮದರಗಾಂವ್ ಗ್ರಾಮದಲ್ಲಿ ಇಂದು ಬೆಳಗಿನ‌ 4:28ರ ಸುಮಾರಿಗೆ ಭೂಕಂಪನ (Earthquake) ಉಂಟಾಗಿದ್ದು,ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಘಟಕದಲ್ಲಿ 1.9 ರಷ್ಟು ತಿವ್ರತೆ ದಾಖಲಾಗಿದೆ. ಭೂಕಂಪ ಪ್ರಮಾಣ ಕಡಿಮೆಯಿರುವ ಕಾರಣ ಭಯಗೊಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದೆ. ವಡ್ಡನಕೇರಾ ಗ್ರಾಮದ 1.7 ಕಿಮೀ ಎನ್‌ಎನ್‌ಇ, ಮದರಗಾಂವ್ ಜಿಪಿ, ಹುಮ್ನಾಬಾದ್ ತಾಲೂಕಿನಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆ ಆಗಿದೆ.

ಭೂಕೇಂದ್ರದಿಂದ ಮೇಲಿನ ಭೂಕಂಪಗಳ ಭೂಕಂಪಗಳ ತೀವ್ರತೆಯ ನಕ್ಷೆಯ ಪ್ರಕಾರ, ಗಮನಿಸಲಾದ ತೀವ್ರತೆಯು ತೀರಾ ಕಡಿಮೆಯಾಗಿದೆ. ಭೂಕಂಪನವು ಕೇಂದ್ರಬಿಂದುದಿಂದ 20-25 ಕಿಲೋಮೀಟರ್ ದೂರದವರೆಗೆ ಅನುಭವ ಆಗಿದೆ.

ಇದನ್ನೂ ಓದಿ: ಬೀದರ್: ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಆಕ್ರೋಶ

ಈ ರೀತಿಯ ಭೂಕಂಪಗಳು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ ಏಕೆಂದರೆ ಗಮನಿಸಿದ ತೀವ್ರತೆಗಳು ತುಂಬಾ ಕಡಿಮೆಯಾಗಿದೆ. ಆದರೂ ಸ್ಥಳೀಯ ಕಂಪನಗಳನ್ನು ಅನುಭವಿಸಬಹುದು. ಭೂಕಂಪನ ವಲಯ II ರಲ್ಲಿ ಅಧಿಕೇಂದ್ರವು ಬೀಳುತ್ತದೆ. ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶವು ಯಾವುದೇ ರಚನಾತ್ಮಕ ಸ್ಥಗಿತಗಳಿಂದ ಅನೂರ್ಜಿತವಾಗಿದೆ. ಭೂಕಂಪನದ ಪ್ರಮಾಣ ಮತ್ತು ತೀವ್ರತೆಗಳು ತುಂಬಾ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಘಟಕ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: ವರ್ಷಗಳೆ ಉರುಳಿದರು ಆರಂಭವಾಗದ 44.34 ಕೋಟಿ ರೂ. ವೆಚ್ಚದ ಸಿಇಟಿಪಿ ಘಟಕ: ವಿಷಕಾರಿ ನೀರೇ ಕುಡಿಯುತ್ತಿರುವ ಗ್ರಾಮಸ್ಥರು

ವಿಜಯಪುರ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ಭೂಕಂಪನದ ಅನುಭವವಾಗಿತ್ತು. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಜು.25ರ ಬೆಳಿಗ್ಗೆ 9:55ಕ್ಕೆ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಮನಗೂಳಿ ಪಟ್ಟಣದಿಂದ 2.9 ಕಿ.ಮೀ ದೂರದಲ್ಲಿ ಭೂಕಂಪವಾಗಿತ್ತು.

ಭೂಕಂಪನದ ‘ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್’ ಪ್ರಕಾರ, ತೀವ್ರತೆಯು ತುಂಬಾ ಕಡಿಮೆ ಇದೆ. ಭೂಮಿಯ 15 ರಿಂದ 20 ಕಿಮೀ ಆಳದಲ್ಲಿ ಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Mon, 6 November 23

Follow Us
Suresh Naik
Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More