ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ರು ಬೇಕು: ಸಾಗರ್ ಖಂಡ್ರೆ ಬಗ್ಗೆ ಆರ್​ ಅಶೋಕ ವ್ಯಂಗ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 03, 2024 | 7:23 PM

ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅದರಂತೆ ಎರಡು ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ. ಇಂದು(ಮೇ.03)​ ಬೀದರ್‌(Bidar)ನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷನಾಯಕ ಆರ್‌.ಅಶೋಕ, ‘ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ರು ಬೇಕು: ಸಾಗರ್ ಖಂಡ್ರೆ ಬಗ್ಗೆ ಆರ್​ ಅಶೋಕ ವ್ಯಂಗ್ಯ
ಆರ್​ ಅಶೋಕ
Follow us on

ಬೀದರ್, ಮೇ.03: ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ(Sagar Khandre) ಅನುಭವ ಇಲ್ಲದ ಹುಡುಗ, ಆತ ಗೆದ್ದರೆ ಸಂಸತ್‌ಗೆ ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ಬರು ಬೇಕು ಎಂದು ವಿಪಕ್ಷನಾಯಕ ಆರ್‌.ಅಶೋಕ್‌(R Ashoka) ವ್ಯಂಗ್ಯವಾಡಿದ್ದಾರೆ. ಇಂದು (ಮೇ.03) ಬೀದರ್‌(Bidar)ನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ದೇಶದಲ್ಲಿ ಷರಿಯತ್ ಕಾನೂನು ತರುತ್ತೇವೆಂದು ಹೇಳಿದ್ದಾರೆ. ಅಂಬೇಡ್ಕರನ್ನು ಚುನಾವಣೆಯಲ್ಲಿ ‌ಸೋಲಿಸಿದವರು ಕಾಂಗ್ರೆಸ್​ನವರು, ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲೇ ಇಲ್ಲ, ಅವರಿಗೆ ಭಾರತ ರತ್ನ ಕೊಟ್ಟಿದ್ದು ಬಿಜೆಪಿಯವರು ಎಂದರು.

ರಾಹುಲ್ ಗಾಂಧಿ ದೇಶ ಬಿಡೋದು ಗ್ಯಾರಂಟಿ

ಅಂಬೇಡ್ಕರ್ ತೀರಿಕೊಂಡಾಗ ಅವರಿಗೆ ಹೂಳಲು‌ ಜಾಗವನ್ನ ಕಾಂಗ್ರೆಸ್ ಕೊಡಲಿಲ್ಲ. ನಾನು‌ ಬದುಕಿರುವವರೆಗೂ ಸಂವಿಧಾನದ ಬದಲಾಗಲು‌ ಬಿಡೋದಿಲ್ಲ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ ಮೋದಿ ಎಂದು ಕೂಗುತ್ತಾರೆ, ಯಾರಾದರೂ ರಾಹುಲ್ ಗಾಂಧಿ ಎಂದು ಕೂಗಿದ್ದಾರಾ?, 50 ವರ್ಷ ದೇಶ ಆಳಿದ ಕಾಂಗ್ರೆಸ್ ‌ಸರ್ಕಾರ, ದೇಶಕ್ಕಾಗಿ ಏನು‌ ಮಾಡಿದೆ ಹೇಳಲಿ. ಮೋದಿ ಮತ್ತೊಂದು ‌ಸಲ ಪ್ರಧಾನಿ ಆಗೋದು‌ ಗ್ಯಾರಂಟಿ, ಜೊತೆಗೆ ರಾಹುಲ್ ಗಾಂಧಿ ದೇಶ ಬಿಡುವುದು ಕೂಡ ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪಕ್ಷದವರನ್ನು ಹಾಸನಕ್ಕೆ ಕರೆದೊಯ್ದು ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಅಶೋಕ ಮಾಡಲಿ: ಡಿಕೆ ಶಿವಕುಮಾರ್

ಇದೇ ವೇಳೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಮಾತನಾಡಿದ ಅಶೋಕ, ‘ಎಲ್ಲಾ ಎಪಿಸೋಡ್‌ಗಳನ್ನ ನೋಡಿದಾಗ ಸಿದ್ದರಾಮಯ್ಯನವರೇ ವಿದೇಶಕ್ಕೆ ಕಳಿಸಿದಾರೆ ಅನಿಸುತ್ತೆ. ಕಾನೂನು ಸುವ್ಯವಸ್ತೆ ಇರುವುದು ರಾಜ್ಯ ಸರಕಾರದ ಕೈಯಲ್ಲಿ, ಪ್ರಜ್ವಲ್ ರೇವಣ್ಣ ಮತ ಹಾಕಿ ವಿದೇಶಕ್ಕೆ ಹೋಗೊದು ಸರ್ಕಾರಕ್ಕೆ ಗೊತ್ತಿರಲಿಲ್ವಾ. ದೇವೆಗೌಡರಿಗೆ ಅವಮಾ‌ನ ಮಾಡಬೇಕು ಎಂದು ಮಾಡಿರುವ ಸ್ಕಿಮ್ ಇದು. ರೇವಣ್ಣ ಮಾಡಿರೋದು ತಪ್ಪು ಅಂತಾ ಗೊತ್ತಿದ್ರೂ ಸರ್ಕಾರ ಯಾಕೇ ಸುಮ್ಮನಿತ್ತು. ಘಟನೆ ನಡೆದು 15 ದಿನ ಆದ್ರು ಪ್ರಕರಣ ದಾಖಲಿಸಲಿಲ್ವಾ. ಇಂಟಿಲೆಜೆನ್ಸ್‌ದವರು ಏನ್ ಮಾಡ್ತಾ ಇದ್ದರು. ನಿಮ್ಮ‌ ಕಾನೂನು ಸುವ್ಯವಸ್ಥೆ, ಕೇಂದ್ರ ಸರ್ಕಾರಕ್ಕೆ ಎಂದು ಬರೆದುಕೊಡಿ. ರಾಜ್ಯ ಸರ್ಕಾರದ ತಪ್ಪು ಇಟ್ಕೊಂಡು ಕೇಂದ್ರದ ಕಡೆ ಬೊಟ್ಟು ಮಾಡ್ತಾ ಇದ್ದಾರೆ‌. ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Fri, 3 May 24