ಬೀದರ್ನಲ್ಲಿ ಇಂದು ಇಬ್ಬರ ಬಲಿಪಡೆದ ಮಹಾಮಾರಿ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಬೀದರ್: ಕೊರೊನಾ ಮಹಾಮಾರಿಯ ಆರ್ಭಟ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿದೆ. ಇದಕ್ಕೆ ಬೀದರ್ ಜಿಲ್ಲೆ ಹೊರತೇನಲ್ಲ. ಎಲ್ಲೆಡೆ ಸಾವಿನ ರಣಕೇಕೆಯನ್ನು ಹಾಕುತ್ತಿರುವ ಕೊರೊನಾ ಇಂದು ಜಿಲ್ಲೆಯಲ್ಲಿ ಇಬ್ಬರ ಬಲಿಪಡೆದಿದೆ. ಮೃತಪಟ್ಟವರನ್ನು ಬೀದರ್ ತಾಲೂಕಿನ 70 ವರ್ಷದ ವೃದ್ದ ಹಾಗೂ 46 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ತೀವ್ರ ಜ್ವರ, ಕೆಮ್ಮು, ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತರಿಗೆ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಪ್ರಾತಿನಿಧಿಕ ಚಿತ್ರ
Follow us on
ಬೀದರ್: ಕೊರೊನಾ ಮಹಾಮಾರಿಯ ಆರ್ಭಟ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿದೆ. ಇದಕ್ಕೆ ಬೀದರ್ ಜಿಲ್ಲೆ ಹೊರತೇನಲ್ಲ. ಎಲ್ಲೆಡೆ ಸಾವಿನ ರಣಕೇಕೆಯನ್ನು ಹಾಕುತ್ತಿರುವ ಕೊರೊನಾ ಇಂದು ಜಿಲ್ಲೆಯಲ್ಲಿ ಇಬ್ಬರ ಬಲಿಪಡೆದಿದೆ. ಮೃತಪಟ್ಟವರನ್ನು ಬೀದರ್ ತಾಲೂಕಿನ 70 ವರ್ಷದ ವೃದ್ದ ಹಾಗೂ 46 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.
ತೀವ್ರ ಜ್ವರ, ಕೆಮ್ಮು, ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತರಿಗೆ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.