ಇಡೀ ಒಂದು ತಿಂಗಳು ಆ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ, ಏನಿದರ ವಿಶೇಷ?
ಛಟ್ಟಿ ಅಮಾವಾಸ್ಯೆಯಿಂದ ಆರಂಭವಾಗುವ ಈ ಜಾತ್ರೆ ಏಳ್ಳು ಅಮಾವಾಸ್ಯೆಯವರೆಗೂ ನಿರಂತರ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತೆ. ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮಲ್ಲಣ್ಣ ದೇವರ ದರ್ಶನ ಪಡೆಯುತ್ತಾರೆ. ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.

ಇಡೀ ಒಂದು ತಿಂಗಳ ಕಾಲ ಆ ದೇವಸ್ಥಾನದಲ್ಲಿ ಪೂಜೆಪುನಸ್ಕಾರಗಳು ನಡೆಯುತ್ತವೆ. ಪ್ರತಿದಿನ ಹತ್ತಾರು ಕ್ಷಿಂಟಾಲ್ ಕೊಬ್ಬರಿ ಮಿಶ್ರಿತ ಭಂಡಾರ ಎರಚಿ ಭಕ್ತರು ಹರಕೆ ತೀರಿಸುತ್ತಾರೆ. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣದಿಂದ ಅಪಾರ ಪ್ರಮಾಣದ ಭಕ್ತರು ಬಂದು ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ.
ದಕ್ಷಿಣ ಕಾಶಿ ಅಂತಲೇ ಫೇಮಸ್ ಆಗಿರುವ ಮೈಲಾರ ಮಲ್ಲಣ್ಣ ದೇವರ ಜಾತ್ರೆಯು (Sri Shiva Mailar Mallanna Temple) ಒಂದು ತಿಂಗಳ ಕಾಲ ನಡೆಯುತ್ತದೆ. ಪ್ರತಿದಿನವೂ ಕ್ಷಿಂಟಾಲ್ ಗಟ್ಟಲೇ ಭಂಡಾರ, ಕೊಬ್ಬರಿ ಹಾರಿಸಿ ಹರಿಕೆ ತಿರಿಸುತ್ತಾರೆ ಭಕ್ತರು. ಮೈಲಾರ ಮಲ್ಲಣ್ಣನಿಗೆ ಸಜ್ಜೆ ರೊಟ್ಟಿ, ಹಸಿ ಖಾರದ ಚಟ್ನಿ, ಬದನೆ ಕಾಯಿ ಭರ್ತಾ ನೈವೇದ್ಯಕ್ಕೆ ಸಮರ್ಪಣೆಯಾಗುತ್ತದೆ. ತೆಲಂಗಾಣ-ಮಹಾರಾಷ್ಟ್ರ ದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಹೌದು ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಮೈಲಾರ ಮಲ್ಲಣ್ಣ ದೇವಸ್ಥಾನವಿರುವುದು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿರುವ (Khanapur) ಈ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಇನ್ನು ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹರಾಷ್ಟ್ರ, ತೆಲಂಗಾಣ, ಆಂದ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ರಾತ್ರಿಯಿಡಿ ಕಳೆದ ಇಲ್ಲಿಯೇ ಅಡುಗೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ.
Also Read: ಗದಗದ ಲಕ್ಕುಂಡಿ ಅನೇಕ ಐತಿಹಾಸಿಕ ದೇಗುಲಗಳು, ಮೆಟ್ಟಿಲು ಬಾವಿಗಳ ತೊಟ್ಟಿಲು… ವಿಡಿಯೋ ನೋಡಿ
ಇನ್ನೂ ಮೈಲಾರ ಮಲ್ಲಣ್ಣನಿಗೆ ಸಜ್ಜೆ ರೊಟ್ಟಿ, ಬದನೆ ಕಾಯಿ ಭರ್ತಾ, ಹಸಿ ಖಾರದ ಚಟ್ನಿ, ನೈವೇದ್ಯಕ್ಕೆ ಈ ಮೂರು ಪದಾರ್ಥಗಳು ಇರಲೇ ಬೇಕು ಇಲ್ಲವಾದರೆ ಮಲ್ಲಣ್ಣನಿಗೆ ನೈವೇದ್ಯ ಪೂರ್ಣಗೊಳ್ಳುವುದಿಲ್ಲ. ಇನ್ನೂ ಕೆಲವು ಈ ಪದಾರ್ಥದ ಜೊತೆಗೆ ಹೋಳಿಗೆ ಅಂಬಲಿ ಕೂಡಾ ನೈವೇದ್ಯಕ್ಕೆ ಬಳಸುತ್ತಾರೆ. ಇನ್ನೂ ಕೆಲವರು ಮನೆಯಿಂದಲೇ ಎಲ್ಲಾ ಪದಾರ್ಥಗಳನ್ನ ತಯಾರಿ ಮಾಡುಕೊಂಡು ಬಂದು ನೈವೇದ್ಯ ಕೊಟ್ಟು ಹೋದರೆ ಇನ್ನು ಕೆಲವು ಭಕ್ತರು ದೇವಸ್ಥಾನದ ಆವರಣದಲ್ಲಿಯೇ ಅಡುಗೆ ಮಾಡಿ ಪೂಜೆ ಮಾಡಿ, ನಂತರ ಎಲ್ಲರೂ ಸೇರಿಕೊಂಡು ಊಟ ಮಾಡುತ್ತಾರೆ. ಇದು ಇಲ್ಲಿನ ಸಂಪ್ರದಾಯವಾಗಿದೆ.
ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡಾ ದೇವರಿಗೆ ಹರಕೆ ರೂಪದಲ್ಲಿ ತೆಂಗಿನ ಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ, ಇದಕ್ಕೆ ಚೋಪಡಿ ಎನ್ನುತ್ತಾರೆ. ದೇವಸ್ಥಾನದ ತುಂಬ ಅರಿಶಿಣ ಚೆಲ್ಲಿರುವ ದೃಶ್ಯ ಸಾಮಾನ್ಯವಾಗಿದ್ದು ಪ್ರತಿಯೊಬ್ಬರು ಭಂಡಾರ ಹಾರಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಭಕ್ತರು ಕೊಬ್ಬರಿ ಮಿಶ್ರಿತ ಭಂಡಾರ ಹಾರಿಸುವಾಗ ಏಳು ಕೋಟಿ, ಏಳು ಕೋಟಿಗೆ ಎಂದು ಕೂಗಿ ಭಂಡಾರ ಹಾರಿಸುತ್ತಾರೆ.
ಛಟ್ಟಿ ಅಮಾವಾಸ್ಯೆಯಿಂದ ಆರಂಭವಾಗುವ ಈ ಜಾತ್ರೆ ಏಳ್ಳು ಅಮಾವಾಸ್ಯೆಯವರೆಗೂ ನಿರಂತರ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತೆ. ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮಲ್ಲಣ್ಣ ದೇವರ ದರ್ಶನ ಪಡೆಯುತ್ತಾರೆ. ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ. ಜನರಿಗೆ ಎಲ್ಲಿಲ್ಲದ ತೊಂದರೆ ಕೊಡುತ್ತಿದ್ದ ಮಣಿಕಂಠ ಹಾಗೂ ಮಲ್ಲ ಎನ್ನುವ ಅಸುರರನ್ನು ಸಂಹರಿಸಲು ಮಾರ್ತಾಂಡ ಭೈರವನ ರೂಪ ತಳೆದ ಶಿವ (ಮಲ್ಲಣ್ಣ) ನಂತರ ಇಲ್ಲಿ ನೆಲೆಸಿದ ಎನ್ನುವ ಉಲ್ಲೇಖ ಪುರಾಣಗಳಲ್ಲಿ ಇದೆ. ದ್ವಾಪರ ಯುಗದಲ್ಲಿ ಈ ಘಟನೆ ನಡೆದಿದೆ ಎಂದು ಮರಾಠಿಯ ಮಲ್ಹಾರಿ ಮಹಾತ್ಮೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಿರುಪತಿಯ ತಿಮ್ಮಪ್ಪನಿಗೆ ಮಲ್ಲಣ್ಣ ದೇವರು ಸಾಲ ನೀಡಿದ್ದರು. ಏಳು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದ ತಿಮ್ಮಪ್ಪ ಅದನ್ನು ಮರಳಿ ಪಾವತಿಸಲೇ ಇಲ್ಲ. ಹೀಗಾಗಿ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಏಳು ಕೋಟಿ- ಏಳಕೋಟ್ಗೆ ಎನ್ನುತ್ತಾರೆ ಎಂಬುದು ಪ್ರತೀತಿ.
Also read: ಮದ್ದೂರಿನಲ್ಲಿ 550 ವರ್ಷ ಹಳೆಯ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸ್ಥಾಪಿಸಿದವರು ಯಾರು ಗೊತ್ತಾ?
ಶತಮಾದಷ್ಟು ಪುರಾತನವಾದ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಮೂರು ರಾಜ್ಯದಿಂದ ಭಕ್ತರು ಬರುತ್ತಾರೆ. ಜಾತ್ರೆಗೆ ಬರುತ್ತಿರುವ ಭಕ್ತರಿಗೆ ಜಿಲ್ಲಾಡಳಿತದಿಂದ ಶುದ್ಧ ಕುಡಿಯುವ ನೀರು ಸ್ನಾನಕ್ಕೆ ನೀರು ಕೊಡುತ್ತಿದ್ದಾರಾದರೂ ಅಷ್ಟೂಂದು ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇನ್ನು ಅನೂಕೂಲ ಕಲ್ಪಿಸಿದರೆ ಭಕ್ತರು ಖುಷಿಯಾಗಿ ದೇವರ ದರ್ಶನ ಮಾಡಿಕೊಂಡು ಹೋಗಬಹುದೆಂದು ಇಲ್ಲಿನ ಭಕ್ತರ ಆಸೆಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:32 pm, Mon, 8 January 24