ಪಶ್ಚಾತಾಪದ ಬರವಣಿಗೆ ಪತ್ತೆ, ಸಾವಿಗೂ ಮುನ್ನ ಮಾವನ ಬಗ್ಗೆ ಪಶ್ಚಾತಾಪ-ಮಮಕಾರ: ಚಂದನವನದ ಮೊಗ್ಗು 9ನೇ ಬಾರಿಗೆ ನಲುಗಿತು
ನಾನು ಮದುವೆಯಾಗುತ್ತೇನೆ ಹೊಸ ಜೀವನ ನಡೆಸುತ್ತೇನೆ ಎಂದು ಹೇಳಿಕೊಂಡಿದ ಜಯಶ್ರೀ ಜನವರಿ 14 ರಂದು ಪುನರ್ವಸತಿ ಕೇಂದ್ರದಿಂದ ಹೊರಹೋಗಿದ್ದು, ಮತ್ತೆ ಜನವರಿ 20 ರಂದು ವಾಪಸ್ ಬಂದಿದ್ದರು. ಸಾವಿಗೂ ಕೆಲ ದಿನಗಳ ಮುನ್ನ ಯೋಗ, ಧ್ಯಾನ, ನೃತ್ಯಾಭ್ಯಾಸಗಳನ್ನ ಮಾಡುತ್ತಿದ್ದರು, ಆದರೂ ಸಹ ಒಂಟಿತನವನ್ನು ಬಯಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ
ನೆಲಮಂಗಲ: ಬಿಗ್ ಬಾಸ್ನಲ್ಲಿ ಮಿಂಚಿದ ತಾರೆ ಜಯಶ್ರೀ ನೇಣಿಗೆ ಶರಣಾಗಿ ಈಗಾಗಲೇ 2 ದಿನಗಳು ಕಳೆದಿದ್ದು, ಚಂದನವನದಲ್ಲಿ ಅರಳುತ್ತಿದ್ದ ಮೊಗ್ಗು ಮುದುಡಿದೆ.. ಎಲ್ಲರಿಗೂ ಬೇಸರ ಉಂಟುಮಾಡಿದೆ. ಸಾವಿಗೂ ಮುನ್ನ ತನ್ನ ಸೋದರ ಮಾವ ಗಿರೀಶ್ ಮೇಲೆ ಸಾಕಷ್ಟು ಆರೋಪಗಳ ಸುರಿಮಳೆಗೈದಿದ್ದ ನಟಿ ಕೊನೆ ದಿನಗಳಲ್ಲಿ ಪಶ್ಚಾತಾಪದ ನುಡಿಗಳನ್ನ ಆಡಿದ್ದು, ಎಲ್ಲರಲ್ಲೂ ಸದ್ಯ ಗೊಂದಲ ಸೃಷ್ಟಿಸಿದೆ.
ಬಿಗ್ ಬಾಸ್ ಸೀಸನ್ 3 ರಲ್ಲಿ ಸ್ಪರ್ಧಿಯಾಗಿ ರಾಜ್ಯದ ಮನೆ ಮನಗಳಲ್ಲಿ ಹೆಸರುವಾಸಿಯಾಗಿದ್ದ ಚಲುವೆ ಜಯಶ್ರೀ ರಾಮಯ್ಯ, ಕೆಲ ಸಿನಿಮಾಗಳಲ್ಲು ನಟಿಸಿದ್ದು, ಸದ್ಯ ಸಾವಿನ ಮನೆಗೆ ತೆರಳಿದ್ದಾರೆ.
ಬೆಂಗಳೂರಿನ ಹನುಮಂತ ನಗರದಲ್ಲಿರುವ ಆಸ್ತಿ ವಿಚಾರದಲ್ಲಿ ಜಯಶ್ರೀ ತಾಯಿ ಹಾಗೂ ಮಾವ ಗಿರೀಶ್ ನಡುವೆ ಸಣ್ಣ ವಿವಾದ ಏರ್ಪಟ್ಟಿತ್ತು, ವಿವಾದ ಬೆನ್ನಲ್ಲೇ ಜಯಶ್ರೀ ತನ್ನ ಮಾವ ಗಿರೀಶ್ ವಿರುದ್ಧ ಕೆಲ ಆರೋಪಗಳನ್ನ ಮಾಡಿದ್ದರು. ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ, ನನ್ನ ಉಡುಪುಗಳ ಬಗ್ಗೆ ಕಮೆಂಟ್ ಮಾಡುತ್ತಾರೆ. ಅಷ್ಟೇ ಅಲ್ಲ ನನ್ನನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ಅಲ್ಲದೆ ಮಾವನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಖಿನ್ನತೆಗೆ ಒಳಗಾಗಿದ್ದ ಜಯಶ್ರೀ ಕೆಲ ದಿನಗಳ ಹಿಂದೆ ಈ ಸಮಾಜದಲ್ಲಿ ನನಗೆ ಬದುಕಲು ಆಗುತ್ತಿಲ್ಲ. ನನಗೆ ದಯಾಮರಣ ಬೇಕು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ನಂತರ ಬಿಗ್‌ಬಾಸ್ ಕ್ಯಾಪ್ಟನ್ ಕಿಚ್ಚ ಸುದೀಪ್ ಖಿನ್ನತೆಗೊಳಲಾಗಿದ್ದ ಜಯಶ್ರೀಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ನಂತರ ಜಯಶ್ರೀ ಕೆಲ ದಿನಗಳ ಕಾಲ ಖಿನ್ನತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಒಳಗಾಗಿದ್ದರು.
ಖಿನ್ನತಗೆ ಒಳಗಾಗಿದ್ದ ಜಯಶ್ರೀ ಇತ್ತೀಚಿನ ದಿನಗಳಲ್ಲಿ 8 ಬಾರಿ ಆತ್ಮಹತ್ಯೆಗೆ ಯತ್ನಿಸಿ 9ನೇ ಬಾರಿಗೆ ಸಾವನ್ನಪ್ಪಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀಗೆ ಅವರ ಮಾವ ಗಿರೀಶ್ ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಗೆರೆಯಲ್ಲಿರುವ ಸಂಧ್ಯಾ ಕಿರಣ ಪುನರ್ವಸತಿ ಕೇಂದ್ರಕ್ಕೆ ವೈದ್ಯರ ಸಲಹೆ ಮೇರೆಗೆ ದಾಖಲಿಸುತ್ತಾರೆ.
ಅಲ್ಲಿ ಆಕೆಗೆ ಪ್ರತಿದಿನ ಕೌನ್ಸಿಲಿಂಗ್ ಸಹ ನಡೆಯುತ್ತಿರುತ್ತದೆ. ಕೇವಲ ಜಯಶ್ರೀ ಮಾತ್ರವಲ್ಲ ಆಕೆ ತಾಯಿ ಕೂಡ ಖಿನ್ನತೆಯಿಂದ ಮತ್ತೊಂದು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜನವರಿ 25ರಂದು ಜಯಶ್ರೀ ಸಾವಿನ ಮನೆ ಬಾಗಿಲು ತಟ್ಟಿ ತಾನಿದ್ದ ಪುನರ್ವಸತಿ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಪಶ್ಚಾತಾಪದ ಬರವಣಿಗೆಯೊಂದನ್ನ ಬರೆದುಕೊಂಡಿದ್ದು, ಜಯಶ್ರೀಗೆ ಸೇರಿದ ಪತ್ರವೊಂದರಲ್ಲಿ ಪಶ್ಚಾತಾಪದ ಬರವಣಿಗೆ ಪತ್ತೆಯಾಗಿದೆ. ಇನ್ನೂ ಜಯಶ್ರೀ ಬರೆದಿದ್ದ ಪತ್ರದಲ್ಲಿ ಏನಿತ್ತು ಎಂದು ನೋಡೋವುದಾದರೆ ನಾನು ಚಿಕ್ಕ ವಯಸ್ಸಿನಿಂದಲೂ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನ್ನ ಮಾವ ಹಾಗೂ ಕುಟುಂಬಸ್ಥರ ಸಲಹೆಗಳನ್ನ ಸ್ವೀಕರಿಸುವಲ್ಲಿ ವಿಫಲಳಾದೆ. ನನ್ನ ಮಾವನನ್ನು ನಾನು ಸಮಸ್ಯೆಗೆ ದೂಡಿದ್ದೆ. ಅವರ ವಿರುದ್ಧ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದೆ. ನಾನು ಕೋಪದ ಭಾವನೆಯಿಂದ ಅವರ ಮೇಲೆ ಸುಳ್ಳು ಆರೋಪಗಳನ್ನ ಮಾಡಿದೆ.
ಅಷ್ಟೆ ಅಲ್ಲ. ಅವರ ಹೆಸರನ್ನು ಕೆಡಿಸಲು ಪ್ರಯಯತ್ನಿಸಿ ನಾನೇ.. ನನ್ನ ಹೆಸರು ಕೆಡಿಸಿಕೊಂಡೆ, ನನ್ನ ಸಮಸ್ಯೆಗಳಿಗೆ ಅವರು ಎಂದಿಗೂ ಕಾರಣವಾಗುವುದಿಲ್ಲ. ನಾನು ಮತ್ತೆ ಸಮಸ್ಯೆಗಳಿಗೆ ಸಿಲುಕುವುದಿಲ್ಲ. ಒಳ್ಳೆಯ ರೀತಿ ಬದುಕುವುದಕ್ಕೆ ಇದು ನನಗೆ ಕೊನೆಯ ಅವಕಾಶ. ಅವರು ನನಗೆ ಮತ್ತೆ ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು. ನನ್ನ ಕೋಪ, ಹತಾಶಭಾವ, ಅತೀ ಹೆಚ್ಚು ಯೋಚಿಸುತ್ತಿದ್ದ ಕಾರಣ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದೇನೆ. ನನ್ನ ಬೆಳವಣಿಗೆ ಹಾಗೂ ವೈಫಲ್ಯಗಳಿಗೆ ನಾನೇ ಕಾರಣ ಕ್ಷಮಿಸಿ ಬಿಡಿ -ಇಂತಿ ಜಯಶ್ರೀ ಗೌಡ ಎಲ್ ಎಂದು ಒಂದು ಪತ್ರದಲ್ಲಿ ಬರೆದುಕೊಂದಿದ್ದಾರೆ.
ನಾನು ಮದುವೆಯಾಗುತ್ತೇನೆ. ಹೊಸ ಜೀವನ ನಡೆಸುತ್ತೇನೆ ಎಂದು ಹೇಳಿಕೊಂಡಿದ್ದ ಜಯಶ್ರೀ ಜನವರಿ 14 ರಂದು ಪುನರ್ವಸತಿ ಕೇಂದ್ರದಿಂದ ಹೊರಹೋಗಿದ್ದು, ಮತ್ತೆ ಜನವರಿ 20 ರಂದು ವಾಪಸ್ ಬಂದಿದ್ದರು. ಸಾವಿಗೂ ಕೆಲ ದಿನಗಳ ಮುನ್ನ ಯೋಗ ಧ್ಯಾನ ನೃತ್ಯಾಭ್ಯಾಸಗಳನ್ನ ಮಾಡುತ್ತಿದ್ದರು. ಆದರೂ ಸಹ ಖಿನ್ನತೆಯಿಂದ ಒಂಟಿತನವನ್ನು ಬಯಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಚಂದನವನದಲ್ಲಿ ಬದುಕಿ ಬಾಳಬೇಕಿದ್ದ ಸ್ಯಾಂಡಲ್‌ವುಡ್‌ನ ಚೆಲುವೆಯ ಬದುಕು ಬೆಳಗುವ ಮುನ್ನವೇ ಆರಿಹೋಗಿದೆ. ಅದೇನೆ ಇದ್ದರೂ ಸವಾಲುಗಳನ್ನ ಎದುರಿಸುವ ಬದಲು ಜೀವನ ಕಳೆದುಕೊಂಡಿರುವುದು ವಿಪರ್ಯಾಸವಾಗಿದೆ.