ಕರ್ನಾಟಕದ ಮೇಲೆ ಪ್ರಭಾವ ಬೀರುತ್ತಾ ಬಿಹಾರ ಫಲಿತಾಂಶ? ಮತ್ತಷ್ಟು ಸ್ಟ್ರಾಂಗ್ ಆಗ್ತಾರಾ ಸಿದ್ದರಾಮಯ್ಯ?

ನವೆಂಬರ್ ಕ್ರಾಂತಿ. ಕರ್ನಾಟಕ ರಾಜ್ಯ ರಾಜಕೀಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಉರಿ ಎಬ್ಬಿಸಿದೆ. ಬಿಹಾರದ ಚುನಾವಣೆ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಫಲಿತಾಂಶ ಕಾಂಗ್ರೆಸ್​​ಗೆ ಹೊಸ ಚೈತನ್ಯ ಕೊಡುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದರು. ಕರ್ನಾಟಕದ ಕಾಂಗ್ರೆಸ್ ನಾಯಕತ್ವದ ಮೇಲು ಅದರ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಜೋರಾಗಿ ನಡೆದಿತ್ತು. ಆದ್ರೆ, ಎಲ್ಲ ಚರ್ಚೆಗಳಿಗೂ ಇತಿಶ್ರೀ ಹಾಕಿ ಬಿಹಾರದ ಫಲಿತಾಂಶ ಬೇರೆಯದ್ದೇ ಕಥೆ ಹೇಳುತ್ತಿದೆ.

ಕರ್ನಾಟಕದ ಮೇಲೆ ಪ್ರಭಾವ ಬೀರುತ್ತಾ ಬಿಹಾರ ಫಲಿತಾಂಶ? ಮತ್ತಷ್ಟು ಸ್ಟ್ರಾಂಗ್ ಆಗ್ತಾರಾ ಸಿದ್ದರಾಮಯ್ಯ?
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
Updated By: ರಮೇಶ್ ಬಿ. ಜವಳಗೇರಾ

Updated on: Nov 14, 2025 | 7:25 PM

ಬೆಂಗಳೂರು, (ನವೆಂಬರ್ 14): ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಜುಗಲ್‌ಬಂಧಿ ಬಿಹಾರದಲ್ಲಿ ಮಹಾಘಟಬಂಧನ್​ನನ್ನೇ ವೈಟ್‌ವಾಷ್‌ ಮಾಡಿದೆ. ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೆ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅತ್ಯುತ್ತಮ ಪ್ರದರ್ಶನ ನೀಡಿದೆ. ಇತ್ತ ಬಿಹಾರದ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ನ ಮೇಲು ಕರ್ನಾಟಕದ ಕಾಂಗ್ರೆಸ್ ನಾಯಕತ್ವದ ಮೇಲು ಅದರ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಜೋರಾಗಿ ನಡೆದಿತ್ತು. ಆದರೆ ಎಲ್ಲ ಚರ್ಚೆಗಳಿಗೂ ಇತಿಶ್ರೀ ಹಾಕಿ ಬಿಹಾರದ ಫಲಿತಾಂಶ ಬೇರೆ ಇದೆ ಕಥೆ ಹೇಳುತ್ತಿದೆ.

ಹೌದು.. ರಾಜ್ಯ ರಾಜಕಾರಣದಲ್ಲಿ ಬಿಹಾರ ಫಲಿತಾಂಶದ ಪರಿಣಾಮದ ಚರ್ಚೆ ಗರಿಗೆದರಿದೆ. ಅದರಲ್ಲೂ ಕೈ ಮನೆಯಲ್ಲಿನ ಕ್ರಾಂತಿ ಬೆಳವಣಿಗೆಗೆ ಬಿಹಾರ ಫಲಿತಾಂಶವನ್ನ ತಳಕು ಹಾಕುತ್ತಿರುವುದು ಮತ್ತೊಂದು ಕುತೂಹಲ. ವಿಷಯ ಏನಂದ್ರೆ, ಬಿಹಾರದಲ್ಲಿ ಕಾಂಗ್ರೆಸ್​ನ ಮಹಾಘಟಬಂಧನ ಗೆದ್ದಿದ್ರೆ ಹೈಕಮಾಂಡ್​ಗೆ ಹೊಸ ಎನರ್ಜಿ ಬರ್ತಿತ್ತು. ಇದೇ ಎನರ್ಜಿಯಲ್ಲಿ ವರಿಷ್ಠರು ಕರ್ನಾಟಕದಲ್ಲೂ ಸಹ ಹೊಸ ಪ್ರಯೋಗ ಮಾಡುತ್ತಿದ್ದರು ಎನ್ನುವ ಮಾತು ಇತ್ತು. ಆದ್ರೆ, ಇದೀಗ ಬಿಹಾರ ಫಲಿತಾಂಶ ಉಲ್ಟಾ ಹೊಡೆದಿದೆ.

ಇದನ್ನೂ ಓದಿ: ನವೆಂಬರ್ ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ಚುನಾವಣೆ ಫಲಿತಾಂಶ

ಕರ್ನಾಟಕದಲ್ಲಿ ಹೊಸ ಬದಲಾವಣೆ ಇಲ್ಲ?

ಬಿಹಾರದ ರಿಸಲ್ಟ್ ಕರ್ನಾಟಕದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಬಿಹಾರದ ರಾಜಕೀಯ ಲೆಕ್ಕಾಚಾರಗಳೇ ಬೇರೆ ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ಬೇರೆಯಾಗಿದೆ. ಬಿಹಾರದಲ್ಲಿ ಕಾಂಗ್ರೆಸ್​​​ಗೆ ಡಬಲ್ ಡಿಜಿಟ್ ತಲುಪುವುದಕ್ಕೂ ಸಾಧ್ಯವಾಗಿಲ್ಲ. ಆದ್ರೆ, ಕರ್ನಾಟಕದ ಕಾಂಗ್ರೆಸ್​​ನ ಪರಿಸ್ಥಿತಿ ಅಷ್ಟು ದುರ್ಬಲವಾಗಿಲ್ಲ. ಕರ್ನಾಟಕದಲ್ಲಿ ತಮ್ಮದೇ ವರ್ಚಸ್ಸನ್ನ ಹೊಂದಿರೋ ಹಲವು ನಾಯಕರಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಪವರ್ ಸೆಂಟರ್​​ಗಳ ಪ್ರಾಬಲ್ಯವೂ ಜೋರಾಗಿದೆ. ಆದ್ರೆ, 2028ರ ಚುನಾವಣೆಯ ಮೇಲೆ ಈಗಲೇ ಗಮನ ನೆಟ್ಟಿರುವ ಹೈಕಮಾಂಡ್, ಕರ್ನಾಟಕದಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡುವ ಸಾಧ್ಯತೆ ಇತ್ತು.

ಬಿಹಾರ ರಿಸಲ್ಟ್ ಬಂದ ಬಳಿಕ ಸಚಿವ ಸಂಪುಟ ಪುನರ್ ರಚನೆ ವಿಸ್ತರಣೆ, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ಹತ್ತಾರು ಬದಲಾವಣೆಗಳ ಅಜೆಂಡಾ ಎಐಸಿಸಿ ನಾಯಕರ ಮುಂದೆ ಇತ್ತು. ಆದ್ರೆ, ಬಿಹಾರದ ರಿಸಲ್ಟ್ ರಾಷ್ಟ್ರೀಯ ಕಾಂಗ್ರೆಸ್​​​​​​​​​​​​ಗೆ ಬೂಸ್ಟ್ ಆಗಿಲ್ಲ. ಎಚ್ಚರ ತಪ್ಪಿದರೆ ಎಲ್ಲವೂ ಊಸ್ಟ್ ಆಗುತ್ತೆ ಎನ್ನುವ ಮೆಸೇಜ್ ಕೊಟ್ಟಿದೆ. ಹೀಗಾಗಿ, ರಾಹುಲ್ ಗಾಂಧಿ ಅಷ್ಟೇ ಜೋಶ್​​​ನಲ್ಲಿ ಕರ್ನಾಟಕದಲ್ಲಿ ಪ್ರಯೋಗ ಮಾಡಲು ಕೈ ಹಾಕುವ ಸಾಧ್ಯತೆ ತುಂಬಾ ಕಡಿಮೆ ಕಾಣಿಸುತ್ತಿದೆ.

ಬಿಜೆಪಿಗೆ ಕೊಂಚ ನಿರಾಸೆ

ವಿಪಕ್ಷ ನಾಯಕ ಅಶೋಕ್ ವ್ಯಾಖ್ಯಾನವೊಂದನ್ನ ಮಾಡಿದ್ದಾರೆ. ಹೈಕಮಾಂಡ್ ವೀಕ್ ಆಗಿರುವುದಕ್ಕೆ ಸಿದ್ದರಾಮಯ್ಯ ಸ್ಟ್ರಾಂಗ್ ಆಗುತ್ತಿದ್ದಾರೆ ಎನ್ನುವ ಮೂಲಕ ಕ್ರಾಂತಿ ಕಿಚ್ಚಿಗೆ ಶಾಂತಿ ತಣ್ಣೀರು ಎರಚಿದ್ದಾರೆ. ಇನ್ನು ಬಿಹಾರ ಫಲಿತಾಂಶವನ್ನು ಕರ್ನಾಟಕ ಬಿಜೆಪಿ ಸಂಭ್ರಮಿಸಬಹುದು. ಆದ್ರೆ, ಕೊಂಚ ನಿರಾಸೆಯಾದಂತೂ ಸತ್ಯ. ಯಾಕಂದ್ರ ನವೆಂಬರ್ ಕ್ರಾಂತಿಯಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಅದರ ಲಾಭವನ್ನು ಪಡೆದು ಅಧಿಕಾರಕ್ಕೇರಬೇಕೆನ್ನುವ ಆಸೆಯಲ್ಲಿ ಬಿಜೆಪಿ ಇತ್ತು.  ಆದ್ರೆ, ಬಿಹಾರ ರಿಸಲ್ಟ್​ ಕೈ ಹೈಕಮಾಂಡ್​​ಗೆ ದಿಕ್ಕುತೋಚದಂತಾಗಿದ್ದು, ಈ ಪರಿಸ್ಥತಿಯಲ್ಲಿ ಕರ್ನಾಟಕದಲ್ಲಿ ಯಾವುದೇ ಹೊಸ ಬದಲಾವಣೆಗೆ ಕೈ ಹಾಕುವುದು ಅನುಮಾನ.

ಬಿಹಾರದ ರಿಸಲ್ಟ್ ಕರ್ನಾಟಕದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಬಿಹಾರದ ರಾಜಕೀಯ ಲೆಕ್ಕಾಚಾರಗಳೇ ಬೇರೆ, ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ಬೇರೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಬಿಹಾರದ ಫಲಿತಾಂಶಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಸಿಎಂ ಸಿದ್ದರಾಮಯ್ಯ.

ಕರ್ನಾಟಕ ಸರ್ಕಾರದ ಸಂಪುಟ ಪುನರ್ ರಚನೆಯನ್ನ ತಕ್ಷಣವೇ ಮಾಡಬೇಕು ಎಂಬ ಆಲೋಚನೆ ಸಿದ್ದರಾಮಯ್ಯನವರಿಗಿದೆ. ಆದರೆ ಬಿಹಾರದ ಹೊಡೆತವನ್ನ ಅನುಭವಿಸಿ ನೋವಿನಲ್ಲಿರೋ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್​ಗೆ ಮದ್ದು ಅರಿಯಲು ಇಷ್ಟು ಬೇಗ ಇಷ್ಟು ಬೇಗ ಸಿದ್ಧವಾಗುತ್ತಾ ಎಂಬ ಸಾಕಷ್ಟು ಅನುಮಾನ ಕಾಡುತ್ತಿದೆ. ಇಷ್ಟು ಮಾತ್ರವಲ್ಲ ಬಿಹಾರ ಚುನಾವಣೆ ಫಲಿತಾಂಶ ಸಾಕಷ್ಟು ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ.

ಮುಂದಿನ ವರ್ಷ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿವೆ. ಎನ್​ಡಿಎ ದೊರೆತ ಈ ಗೆಲುವು ಮುಂದಿನ ಎಲೆಕ್ಷನ್​ಗೆ ಹುಮ್ಮಸ್ಸು ಹೆಚ್ಚಿಸಿದೆ.