AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಣ್ಣಗಿದ್ದ ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?: ಓರ್ವನ ಡೆಡ್ಲಿ ಮರ್ಡರ್​

ತುಮಕೂರಿನ ಮಂಜುನಾಥ ನಗರದಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಕೊಲೆಯಾಗಿದ್ದು, ರೌಡಿಶೀಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾಂಗು-ಮಚ್ಚುಗಳನ್ನು ಬಳಸಿ ನಡೆಸಿದ ಈ ಅಟ್ಯಾಕ್​, ತುಮಕೂರಿನಲ್ಲಿ ಗ್ಯಾಂಗ್‌ವಾರ್ ಮತ್ತೆ ಶುರುವಾಯ್ತಾ ಎಂಬ ಅನುಮಾನ ಹುಟ್ಟುಹಾಕಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ತಣ್ಣಗಿದ್ದ ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?: ಓರ್ವನ ಡೆಡ್ಲಿ ಮರ್ಡರ್​
ಕೊಲೆಯಾದ ಅಭಿಷೇಕ್​
Jagadisha B
| Edited By: |

Updated on: Nov 14, 2025 | 7:43 PM

Share

ತುಮಕೂರು, ನವೆಂಬರ್​ 14: ಹಳೆ ದ್ವೇಷಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕೊಲೆಯಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಲಾಂಗು-ಮಚ್ಚುಗಳಿಂದ ನಡೆದ ಫೈಟ್​​ನಲ್ಲಿ ಕ್ಯಾತ್ಸಂದ್ರದ ನಿವಾಸಿ ಅಭಿಷೇಕ್​ ಎಂಬಾಂತ ಮೃತಪಟ್ಟಿದ್ದು, ಎನ್​​ಇಪಿಎಸ್ ಠಾಣೆಯ ರೌಡಿಶೀಟರ್ ಮನೋಜ್​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆ ಬಗ್ಗೆ ಇನ್ನೂ ಸಿಕ್ಕಿಲ್ಲ ಸ್ಪಷ್ಟತೆ

ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ್​ ಮತ್ತು ಮನೋಜ್​ ಗುಂಪಿನ ಹುಡುಗರು ಬಾರ್​​ನಲ್ಲಿ ಕಿರಿಕ್​ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಕಳೆದ ತಿಂಗಳು ಒಂದೆರಡು ಬಾರಿ ರಾಜಿ ಸಂಧಾನದ ಯತ್ನವೂ ನಡೆದಿತ್ತು. ನಿನ್ನೆ (ನ.13) ರಾತ್ರಿಯೂ ಇದೇ ವಿಚಾರವಾಗಿ ಮಾತುಕತೆ ನಡೆದಿದ್ದು, ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಭಿಷೇಕ್ ತನ್ನ ಇಬ್ಬರು ಗೆಳೆಯರ ಜೊತೆ ಬಂದು ಮನೋಜ್ ಮೇಲೆ ಮೊದಲು ಅಟ್ಯಾಕ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಮನೋಜ್​ ತನ್ನ ಜೊತೆಗಾರರನ್ನು ಕರೆಸಿ ಅಭಿಷೇಕ್ ಮೇಲೆ ದಾಳಿ ಮಾಡಿ ಹತ್ಯೆಮಾಡಿದ್ದಾನೆ. ಮತ್ತೊಂದು ಗುಂಪಿನ ದಾಳಿಯಿಂದ ಮನೋಜ್​ಗೂ ಗಂಭೀರ ಗಾಯವಾಗಿ ಎನ್ನಲಾಗಿದೆ. ಆದರೆ ನಿಜಕ್ಕೂ ಅಲ್ಲಾಗಿದ್ದೇನು ಎಂಬುದು ಸದ್ಯಕ್ಕೆ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಭಿಷೇಕ್ ಹತ್ಯೆ ಸಂಬಂಧ ಕೊಲೆ ಪ್ರಕರಣ ಹಾಗೂ ರೌಡಿಶೀಟರ್ ಮನೋಜ್ ಮೇಲಿನ ಹಲ್ಲೆ ಸಂಬಂಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೋಟೆಲ್​​​ನಲ್ಲಿ ಮಲಗಿದ್ದಲ್ಲೇ ಹೆಣವಾದ ಯುವಕ, ಸಾವಿನ ಹಿಂದೆ ಮಹಿಳೆಯ ಕರಿನೆರಳು?

ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?

ಘಟನೆ ಬೆನ್ನಲ್ಲೇ ಇಷ್ಟು ದಿನ ತಣ್ಣಗಿದ್ದ ತುಮಕೂರಿನಲ್ಲಿ ಮತ್ತೆ ಗ್ಯಾಂಗ್​ವಾರ್​ ಆರಂಭವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಮಾರಮಾರಿಯೇ ನಡೆದಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಲಾಂಗು-ಮಚ್ಚುಗಳಿಂದ ಅಟ್ಟಹಾಸ ನಡೆದು ರಕ್ತ ಹರಿದಿದ್ದು, ರೌಡಿಗಳು ಫೀಲ್ಡ್​​ನಲ್ಲಿ ಮತ್ತೆ ಆ್ಯಕ್ಟೀವ್​​ ಆಗಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್​​ಲೈನ್
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್​​ಲೈನ್
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್
ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ
ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ
ಸತ್ತವರ ಖಾತೆಗೆ ಪಾವತಿಯಾದ ಗೃಹಲಕ್ಷ್ಮೀ ಹಣ ವಾಪಸ್ ಪಡೆಯಲು ಸರ್ಕಾರ ನಿರ್ಧಾರ
ಸತ್ತವರ ಖಾತೆಗೆ ಪಾವತಿಯಾದ ಗೃಹಲಕ್ಷ್ಮೀ ಹಣ ವಾಪಸ್ ಪಡೆಯಲು ಸರ್ಕಾರ ನಿರ್ಧಾರ
ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ
ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ
ಪಿಸ್ತೂಲ್ ಇಟ್ಟುಕೊಂಡ ಬಂದ ಜೆಡಿಎಸ್ ಕಾರ್ಯಕರ್ತ, ವಿಡಿಯೋ ವೈರಲ್
ಪಿಸ್ತೂಲ್ ಇಟ್ಟುಕೊಂಡ ಬಂದ ಜೆಡಿಎಸ್ ಕಾರ್ಯಕರ್ತ, ವಿಡಿಯೋ ವೈರಲ್