AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಬೆಂಗಳೂರಲ್ಲಿ ಸೇಫ್ಟಿ: ಬ್ಯಾಟರಿಗಳ ಕಳವು

ಬೆಂಗಳೂರಿನ ಸೇಫ್ ಸಿಟಿ ಯೋಜನೆ ಅಡಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ಬ್ಯಾಟರಿ ಕಳವು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ನಡೆದ ಈ ಘಟನೆ ಯೋಜನೆಯ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳ್ಳತನದ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಬೆಂಗಳೂರಲ್ಲಿ ಸೇಫ್ಟಿ: ಬ್ಯಾಟರಿಗಳ ಕಳವು
ಸಾಂದರ್ಭಿಕ ಚಿತ್ರImage Credit source: vice.com
ಪ್ರಸನ್ನ ಹೆಗಡೆ
|

Updated on:May 19, 2026 | 3:42 PM

Share

ಬೆಂಗಳೂರು, ಮೇ 19: ಮಹಿಳೆಯರ ಸುರಕ್ಷತೆಗೆ ನಗರದಾದ್ಯಂತ ಅಳವಡಿಸಲಾಗಿರುವ ‘ಸೇಫ್ ಸಿಟಿ’ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿಗಳನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಸಿಸಿಟಿವಿ ಜಂಕ್ಷನ್ ಬಾಕ್ಸ್‌ಗಳೊಳಗಿನ ಎರಡು ಬ್ಯಾಟರಿಗಳನ್ನು ಮೇ 16ರಂದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಸೇಫ್ ಸಿಟಿ ಯೋಜನೆಯ ಸಿಸಿಟಿವಿ ಕ್ಯಾಮೆರಾಗಳಿಗೇ ಇಲ್ಲ ಭದ್ರತೆ
  • ಕ್ಯಾಮರಾಗಳಿಗೆ ಸಂಪರ್ಕಿಸಲಾದ ಬ್ಯಾಟರಿ ಕದ್ದೊಯ್ದ ಕಳ್ಳರು
  • ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಂಬಂಧ ದೂರು

ಮಹಿಳೆಯರ ಸುರಕ್ಷತೆ ಮತ್ತು ನಗರದಲ್ಲಿ ನಿಗಾವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ‘ಸೇಫ್ ಸಿಟಿ’ ಯೋಜನೆಯಡಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಜಂಕ್ಷನ್ ಬಾಕ್ಸ್‌ಗಳಲ್ಲಿ ಬ್ಯಾಟರಿಗಳನ್ನು ಇರಿಸಲಾಗಿತ್ತು. ಪೊಲೀಸರ ಪ್ರಕಾರ, ಕಳ್ಳರು ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿದ್ದ ಎರಡು ಜಂಕ್ಷನ್ ಬಾಕ್ಸ್‌ಗಳನ್ನು ಗುರಿಯಾಗಿಸಿಕೊಂಡು ಅವುಗಳೊಳಗಿನ ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಸರ್ವೆಲೆನ್ಸ್ ವ್ಯವಸ್ಥೆಯ ನಿರ್ವಹಣೆಯ ಹೊಣೆ ಹೊತ್ತಿರುವ ಹನಿವೆಲ್ ಕಂಪನಿಯ ಯೋಜನಾ ನಿರ್ದೇಶಕ ರಾಜೀವ್ ನಾಯ್ಕರ್ ದೂರು ನೀಡಿದ್ದಾರೆ. ಕಳುವಾದ ಬ್ಯಾಟರಿಗಳ ಮೌಲ್ಯ ಸುಮಾರು 46,000 ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಗುರುತಿಸಿ ಬಂಧಿಸಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಅರ್ಧ ಗಂಟೆಯ ಭಾರಿ ಮಳೆಗೇ ನಲುಗಿದ ಬೆಂಗಳೂರು, ಅವಾಂತರಗಳ ಸರಮಾಲೆ

ಏನಿದು ಸೇಫ್ ಸಿಟಿ ಪ್ರಾಜೆಕ್ಟ್?

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವತಿಯಿಂದ ನಿರ್ಭಯಾ ನಿಧಿಯ ಅಡಿಯಲ್ಲಿ ಜಾರಿಗೆ ತರಲಾದ ಪ್ರಮುಖ ಮಹಿಳಾ ಸುರಕ್ಷತಾ ಯೋಜನೆಗಳ ಪೈಕಿ ಸೇಫ್ ಸಿಟಿ ಪ್ರಾಜೆಕ್ಟ್ ಕೂಡ ಒಂದು. ದೇಶದ ಪ್ರಮುಖ ಮಹಾನಗರಗಳಲ್ಲಿ ಅಪರಾಧಗಳನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಈ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ವವಸ್ಥೆಯನ್ನು ಅಳವಡಿಸಲಾಗುತ್ತದೆ. ಯೋಜನೆಯಡಿ ಬೆಂಗಳೂರು ನಗರಾದ್ಯಂತ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:39 pm, Tue, 19 May 26

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More