Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿರುವುದರಿಂದ ರಾಜ್ಯ ಬಿಜೆಪಿಯ ಎಲ್ಲ ಗೊಂದಲಗಳು ಕೊನೆಯಾಗಲಿವೆ: ಬೊಮ್ಮಾಯಿ

ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿರುವುದರಿಂದ ರಾಜ್ಯ ಬಿಜೆಪಿಯ ಎಲ್ಲ ಗೊಂದಲಗಳು ಕೊನೆಯಾಗಲಿವೆ: ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 11, 2025 | 5:34 PM

ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಪೊಲೀಸ್ ಸ್ಟೇಷನೊಂದರ ಮೇಲೆ ಕಲ್ಲು ತೂರಾಟ ನಡೆಸಿದ್ದು ಮುಸ್ಲಿಮರಲ್ಲ, ಮುಸ್ಲಿಂ ವೇಷದಲ್ಲಿ ಬಂದ ಬಿಜೆಪಿ ಮತ್ತು ಅರೆಸ್ಸೆಸ್ ಕಾರ್ಯಕರ್ತರು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು ಭಂಡತನದ ಪರಮಾವಧಿ, ಕಲ್ಲು ತೂರಾಟ ಮಾಡಿದ್ದು ಯಾರು ಅಂತ ಪೊಲೀಸರು ಹೇಳಿದ್ದಾರೆ ಮತ್ತು ಇಡಿ ಜಗತ್ತೇ ವಿಡಿಯೋಗಳನ್ನು ನೋಡಿದೆ, ಕರ್ನಾಟಕದಲ್ಲಿರೋದು ಭಂಡ ಸರ್ಕಾರ ಎಂದರು.

ದೆಹಲಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ಕೊಟ್ಟಿರುವ ನೋಟೀಸ್ ಏನು, ಶಾಸಕ ಏನಂತ ಉತ್ತರಿಸಲಿದ್ದಾರೆ ಅನ್ನೋದು ತನಗೆ ಗೊತ್ತಿರದ ವಿಚಾರ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು, ಅದರೆ ಈಗ ನಡೆಯುತ್ತಿರುವುದೆಲ್ಲ ಅಂತ್ಯ ಕಾಣಲೇಬೇಕು, ಪಕ್ಷದ ವರಿಷ್ಠರು ಈಗ ಮಧ್ಯಪ್ರವೇಶ ಮಾಡಿರುವುದರಿಂದ ಆದಷ್ಟು ಬೇಗ ಗೊಂದಲವೆಲ್ಲ ಮುಗಿಯಲಿದೆ ಮತ್ತು ಎಲ್ಲರಿಗೂ ಸಮರ್ಪಕ ಉತ್ತರ ದೊರೆಯಲಿದೆ ಎಂದು ಬೊಮ್ಮಾಯಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾನೂನು ಪ್ರಕಾರ ಇದ್ದರೆ ಭಯವೇಕೆ?: ಸಿಎಂ “ತೆರಿಗೆ ಭಯೋತ್ಪಾದನೆ” ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು