ಬಿಎಂಟಿಸಿ ವೋಲ್ವೋ ಬಸ್‌ಗಳ ಯುಗ ಅಂತ್ಯ; ಇನ್ಮುಂದೆ ಏರ್‌ಪೋರ್ಟ್‌ಗೆ ಸಂಚರಿಸಲಿದೆ ಎಲೆಕ್ಟಿಕ್ ಎಸಿ ಬಸ್
ಬಿಎಂಟಿಸಿಯ ವೋಲ್ವೋ ಬಸ್ ಗಳು ಇತಿಹಾಸ ಪುಟ ಸೇರುವ ದಿನಗಳು ಹತ್ತಿರ ಬಂದಂತೆ ಕಾಣ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ದುಬಾರಿ ವೆಚ್ಚದ ಎಸಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ವೋಲ್ವೊ ಬಸ್‌ಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ.
ಬೆಂಗಳೂರು, ಜ.22: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಡಿಸೇಲ್ ರೇಟ್ ನಲ್ಲಿ, ಬಸ್ ನಿರ್ವಹಣೆಸ ಮಾಡುವುದೇ ಬಿಎಂಟಿಸಿಗೆ ಕಷ್ಟವಾಗಿದೆ. ಇದರ ಜೊತೆ ಬಿಎಂಟಿಸಿ ಪಾಲಿಗೆ ಬೀಳಿಯಾನೆಯಾದ ವೋಲ್ವೊ ಬಸ್‌ಗಳಿಂದ ಸಂಭವಿಸುತ್ತಿರುವ ನಷ್ಟದ ತಗ್ಗಿಸಲು ನಾನಾ ಸರ್ಕಸ್ ಮಾಡ್ತಿದೆ. ಈಗಾಗಲೇ ಬಿಎಂಟಿಸಿ ವೋಲ್ವೊ ಬಸ್‌ಗಳ ಸಂಖ್ಯೆಯನ್ನೇ ಕಡಿತಗೊಳಿಸಲಾರಂಭಿಸಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಏರ್ಪೋರ್ಟ್ ಗೆ ಹೋಗ್ತಿರುವ ವೋಲ್ವೋ ಬಸ್ ಗಳಿಗೂ ಗುಡ್ ಬಾಯ್ ಹೇಳಲು ಸಿದ್ಧತೆ ನಡೆಯುತ್ತಿದೆ. ಈ ಮೂಲಕ ವೋಲ್ವೋ ಬದಲು ಎಲೆಕ್ಟಿಕ್ ಎಸಿ ಬಸ್ ರಸ್ತೆಗಿಳಸಲು ತಯಾರಿ ನಡೆಯುತ್ತಿದೆ.
ಬಿಎಂಟಿಸಿಯ ವೋಲ್ವೋ ಬಸ್ ಗಳು ಇತಿಹಾಸ ಪುಟ ಸೇರುವ ದಿನಗಳು ಹತ್ತಿರ ಬಂದಂತೆ ಕಾಣ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ದುಬಾರಿ ವೆಚ್ಚದ ಎಸಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ವೋಲ್ವೊ ಬಸ್‌ಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಇದರಿಂದ ಸಂಸ್ಥೆಗೆ ಲಾಭದ ಬದಲು ದಿನದಿಂದ ದಿನಕ್ಕೆ ನಷ್ಟವಾಗ್ತಿದೆ. ಹಾಗಾಗಿ ನಷ್ಟದಿಂದ ಪಾರಾಗಲು ಟ್ರಿಪ್ ಕಡಿತಗೊಳಿಸಿದೆ. ಆದ್ರೀಗ ವೋಲ್ವೋಗೆ ಪರ್ಯಾಯವಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಎಸಿ ಬಸ್ ಕಾರ್ಯಾಚರಣೆಗೆ ತಯಾರಿ ನಡೆಸ್ತಿದೆ. ಜೊತೆಗೆ ಏರ್ಪೋರ್ಟ್ ಗೆ ವೋಲ್ವೋ ಬದಲು ಎಲೆಕ್ಟಿಕ್ ಎಸಿ ಬಸ್ ಓಡಿಸಲು ಸಿದ್ಧತೆ ನಡೆಯುತ್ತಿದೆ.
2020ರ ಮಾರ್ಚ್ನಲ್ಲಿ ವಜ್ರ ಹಾಗೂ ವಾಯುವಜ್ರ ವೋಲ್ವೋ ಬಸ್‌ಗಳ ಸಂಖ್ಯೆ 767ರಷ್ಟಿತ್ತು. ಆದರೀಗ 474ಕ್ಕೆ ಇಳಿಕೆ ಆಗಿದೆ. 644 ರಷ್ಟಿದ್ದ ವಜ್ರ ಬಸ್‌ಗಳ ಸಂಖ್ಯೆ 342ಕ್ಕೆ ಕಡಿತಗೊಂಡಿದೆ. ಜೊತೆಗೆ ವಾಯುವಜ್ರ 132 ಬಸ್ ಗಳಿದ್ದು, ಸಿಲಿಕಾನ್ ಸಿಟಿಯ ಬೇರೆ ಬೇರೆ ಭಾಗದಿಂದ ಏರ್ಪೋರ್ಟ್ ಗೆ ಸೇವೆ ನೀಡ್ತಿವೆ. ಇದರಿಂದ ದಿನಕ್ಕೆ 14 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಪ್ರಯೋಜನವಾಗ್ತಿದೆ. ಆದರೆ ಬಿಎಂಟಿಸಿಗೆ ನಿರೀಕ್ಷಿಸಿದ ಲಾಭ ಮಾತ್ರ ಬರ್ತಿಲ್ಲ. ಹೀಗಾಗಿ ವೋಲ್ವಾ ಬಸ್ ಗಳ ಸಹಾವಾಸವೇ ಬೇಡ ಅಂತ ಇವಿ ಎಸಿ ಬಸ್ ಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸ್ತಿದೆ.
ಇದನ್ನೂ ಓದಿ: ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ, ಯಾರಾಗಲಿದ್ದಾರೆ ಮುಂದಿನ ಜಯದೇವ ಆಸ್ಪತ್ರೆ ನಿರ್ದೇಶಕ?
ಬಿಎಂಟಿಸಿಯಲ್ಲಿ ಈಗಾಗಲೇ 490 ನಾನ್ ಎಸಿ ಇವಿ ಬಸ್ ಗಳು ಸಂಚಾರಿಸುತ್ತಿವೆ. ಮುಂದಿನ ದಿನದಲ್ಲಿ ಇನ್ನೂ 821 ಬಸ್‌ಗಳು ಸಂಸ್ಥೆಗೆ ಸೇರಲಿವೆ. ಆದ್ರೀಗ ಎಲೆಕ್ಟ್ರಿಕ್ ಎಸಿ ಬಸ್ ಗಳು ಸೇರ್ಪಡೆಯಾಗಲು ಸಜ್ಜಾಗ್ತಿವೆ. ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಮಾದರಿಯಲ್ಲಿ 320 ಲೋ ಫ್ಲೋರ್ ಎಸಿ ಎಲೆಕ್ಟ್ರಿಕ್ ಬಸ್ ಗೆ ಟೆಂಡರ್ ಕರೆದಿರುವ ಬಿಎಂಟಿಸಿ. ₹150 ಕೋಟಿ ಅಂದಾಜು ವೆಚ್ಚ ಆಗಲಿದ್ದು, ಬಸ್ ತಲಾ 12 ಮೀಟರ್ ಉದ್ದ ಇರಲಿವೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಬಿಎಂಟಿಸಿ ಪ್ರಯಾಣಿಕರು ಹಳೆಯ ಬಿಎಂಟಿಸಿ ಬಸ್ ಗಳಿಂದ ರೋಸಿ ಹೋಗಿದ್ದೇವೆ ಹೊಸ ಬಸ್‌ಗಳು ಬರುವುದು ನಮಗೆ ಖುಷಿ ಆಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ವಾಯು ವಜ್ರ ವೋಲ್ವೋ ಬಸ್ ಏರ್ಪೋರ್ಟ್ ಗೆ ಸಂಚರಿಸ್ತಿವೆ. ಇದರಿಂದ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ. ಜೊತೆಗೆ ನಿರ್ವಹಣೆ ವೆಚ್ಚವೂ ಅಧಿಕವಿದೆ. ಕಿಲೋ ಮೀಟರ್ ಗೆ 85 ರೂಪಾಯಿ ವೆಚ್ಚವಾಗ್ತಿದೆ. ಎಲೆಕ್ಟ್ರಿಕ್ ಎಸಿ ಬಸ್ ಗಳಿಂದ 55-60 ರೂಪಾಯಿ ಅಷ್ಟೇ ಖರ್ಚಾಗುತ್ತೆ. ಹೀಗಾಗಿ ಪರಿಸರ ಸ್ನೇಹಿ ಜೊತೆ ಆದಾಯವೂ ಹೆಚ್ಚಳವಾಗುವ ನಿರೀಕ್ಷೆಯಿಂದ ಈ ನಿರ್ಧಾರ ಕೈಗೊಳ್ಳಲಾಗ್ತಿದೆ. ಈ ಮೂಲಕ ಇನ್ಮುಂದೆ ನಗರದಲ್ಲಿ ಎಸಿ ಬಸ್ ಗಳು ಹಂತ ಹಂತವಾಗಿ ತೆರೆಗೆ ಸರಿಯುವ ಮೂಲಕ, ಬಿಎಂಟಿಸಿಯಲ್ಲಿ ವೋಲ್ವೊ ಯುಗ ಅಂತ್ಯದತ್ತ ಸಾಗಲಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ