ಬೆಂಗಳೂರಿನಲ್ಲಿ ವಿಲಕ್ಷಣ ಘಟನೆ: ದೂರು ನೀಡಲು ಹೋದ ಬಾಲಕಿಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಬೆಂಗಳೂರಲ್ಲಿ ದೂರು ಕೊಡಲು ಹೋದ ಅಪ್ರಾಪ್ತೆ ವಯಸ್ಸಿನ ಬಾಲಕಿ ಮೇಲೆ ಪೊಲೀಸ್ ಕಾನ್ಸ್ ಸ್ಟೇಬಲ್ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ನ್ಯಾಯ ಕೊಡಿಸುವಂತೆ ಪೊಲೀಸರನ್ನು ನಂಬಿ ಬಂದಿದ್ದ ಬಾಲಕಿಗೆ ನ್ಯಾಯಕೊಡಿಸುವ ನೆಪದಲ್ಲಿ ಲಾಡ್ಜ್​ಗೆ ಕರೆದೊಯ್ದು ಮಾಡಬಾರದ ಕೆಲಸ ಮಾಡಿದ್ದಾನೆಂದು ಸಂತ್ರಸ್ತೆ ತಾಯಿ ದ ದೂರು ದಾಖಿಲಿಸಿದ್ದಾರೆ. ಯಾರು ಆ ಪೊಲೀಸ್ ಪೇದೆ? ಏನಿದು ಪೊಲೀಸ್ ಪೋಕ್ಸ್ ಕೇಸ್ ಎನ್ನುವ ಡಿಟೇಲ್ಸ್ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ವಿಲಕ್ಷಣ ಘಟನೆ: ದೂರು ನೀಡಲು ಹೋದ ಬಾಲಕಿಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ
Bommanahalli Police Constable
Edited By:

Updated on: Feb 24, 2025 | 9:53 PM

ಬೆಂಗಳೂರು, (ಫೆಬ್ರವರಿ 24): ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯ. ಆದ್ರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ದೂರು ನೀಡಲು ಬಂದಿದ್ದ ಅಪ್ರಾಪ್ತೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ವಯಸ್ಸಿನ ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎಂದು ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ವಿರುದ್ಧ ಗಂಭೀರ ಆರೋಪ ಬಂದಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು, ಕಾನ್​ಸ್ಟೇಬಲ್ ಸೇರಿ ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಹೌದು… ತಮಗಾದ ಅನ್ಯಾಯ ಬಗ್ಗೆ ಬಾಲಕಿ ಹಾಗೂ ಬಾಲಕಿ ತಾಯಿ ದೂರು ನೀಡಲು ಠಾಣೆಗೆ ಹೋಗಿದ್ದು, ಬೊಮ್ಮನಹಳ್ಳಿ ಪೋಲಿಸ್ ಠಾಣಾ ಪೇದೆ ಬಾಲಕಿಯ ನಂಬರ್ ಪಡೆದು ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳಾದ ಪೇದೆ ಅರುಣ್ ಹಾಗೂ ವಿಕ್ಕಿ ಎಂಬುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

17 ವರ್ಷದ ಸಂತ್ರಸ್ಥೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ನೆರೆಮನೆ ನಿವಾಸಿ ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಬಳಿಕ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಆತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಇದರಿಂದ ನೊಂದ ಅಪ್ರಾಪ್ತೆ, ತಾಯಿ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಸಂತ್ರಸ್ತೆ ತಾಯಿ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಲು ಬಂದಿದ್ದ ಸಂತ್ರಸ್ತೆಯನ್ನ ಕಾನ್ ಸ್ಟೇಬಲ್ ಅರುಣ್ ಪರಿಚಯಿಸಿ ಕೊಂಡಿದ್ದು, ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೇ ಅಲ್ಲದೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.

ಬಳಿಕ ಕಳೆದ ಡಿಸೆಂಬರ್ ನಲ್ಲಿ ಬಿಟಿಎಂ ಲೇಔಟ್ ಲಾಡ್ಜ್ ಗೆ ಅಪ್ರಾಪ್ತೆ ಕರೆಯಿಸಿಕೊಂಡಿದ್ದ. ಮದ್ಯದ ಬಾಟಲ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಆಕೆ ಮೇಲೆ ಆತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಖಾಸಗಿ ವಿಡಿಯೊಗಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ಇದಾದ ಬಳಿಕ ಪೇದೆ ಕೆಲಸ ಮಾಡುತ್ತಿದ್ದ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ತೆಗೆದುಕೊಳ್ಳದ ಕಾರಣ ನಗರ ಪೋಲಿಸ್ ಆಯುಕ್ತರ ಬಳಿ ಆಕೆ ಪೋಷಕರು ಹೋಗಿದ್ದಾರೆ. ಬಳಿಕ ಕಮಿಷನರ್ ಸಹ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ವಹಿಸಲು ಆದೇಶಿಸಿದ್ದಾರೆ. ನಂತರ ಮೈಕೊ ಲೇಔಟ್ ಠಾಣೆಯಲ್ಲಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾಯಿಸಿದ್ದರು. ಈ ಸಂಬಂಧ ತನಿಖೆ ನಡೆಸಿ ಇಬ್ಬರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಅದೇನೆ ಇರಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ಪೊಲೀಸರೇ ಅಪ್ರಾಪ್ತೆ ಮೇಲೆರೆಗಿದ್ನಾ? ಪೊಲೀಸರ ನಿಸ್ಪಕ್ಷಪಾತ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ವರದಿ: ಶಿವಪ್ರಸಾದ್ ಟಿವಿನೈನ್ ಬೆಂಗಳೂರು

TV9 Web

TV9 Kannada

Read More
Loading...
Unable to load recommendations.
Follow Us