ಆರ್​ಟಿಒ ಅಧಿಕಾರಿಗಳ, ಬ್ರೋಕರ್​ಗಳ ಲಂಚಗುಳಿತನಕ್ಕೆ ಬೀಳಲಿದೆ ಬ್ರೇಕ್: ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ಎಫ್​ಸಿ

ಹಿಂದೆಲ್ಲ ಒಂದು ವಾಹನಕ್ಕೆ ಎಫ್​ಸಿ ಮಾಡಿಸಬೇಕು ಅಂದರೆ ಬ್ರೋಕರ್​ಗೆ, ಆರ್​ಟಿಒ ಅಧಿಕಾರಿಗಳಿಗೆ ದುಡ್ಡು ಕೊಡಬೇಕಿತ್ತು. ಅಷ್ಟಾದರೂ ದಿನವೆಲ್ಲ ಆರ್​ಟಿಒ ಕಚೇರಿಗೆ ಅಲೆಯಬೇಕಿತ್ತು. ಆದರೆ ಇನ್ಮುಂದೆ ಇವೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಅದ್ಹೇಗೆ? ಏನು ಬದಲಾವಣೆಯಾಗಿದೆ? ವಿವರಗಳಿಗೆ ಮುಂದೆ ಓದಿ.

ಆರ್​ಟಿಒ ಅಧಿಕಾರಿಗಳ, ಬ್ರೋಕರ್​ಗಳ ಲಂಚಗುಳಿತನಕ್ಕೆ ಬೀಳಲಿದೆ ಬ್ರೇಕ್: ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ಎಫ್​ಸಿ
ನೆಲಮಂಗಲ ಆರ್​ಟಿಒದಲ್ಲಿ ಆರಂಭಿಸಲಾಗಿರುವ ಎಟಿಎಸ್ ಸೆಂಟರ್
Follow us
Kiran Surya
| Updated By: Ganapathi Sharma

Updated on:Nov 27, 2024 | 10:13 AM

ಬೆಂಗಳೂರು, ನವೆಂಬರ್ 27: ಆರ್​ಟಿಒ ಇನ್ಸ್‌ಪೆಕ್ಟರ್​ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್​ಸಿ! ಎಫ್​ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್​ಟಿಒದಲ್ಲಿ ಎಟಿಎಸ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಈ ಸೆಂಟರ್​​ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್​ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌.

ಈ ಹಿಂದೆ ವಾಹನಗಳಿಗೆ ಎಫ್​ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್​ಸಿ ಆಗುತ್ತದೆ!

ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್​ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್​ಸಿ ಮಾಡಿಸಬೇಕು.

ಎಫ್​ಸಿ ಮಾಡುವಾಗ ನಡೆಸುವ ತಪಾಸಣೆಗಳು ಏನೇನು?

  • ಇಂಜಿನ್ ಸೌಂಡ್
  • ಹೊಗೆ ತಪಾಸಣೆ
  • ಸ್ಪೀಡ್ ಗವರ್ನರ್
  • ಹೆಡ್ ಲೈಟ್
  • ಇಂಡಿಕೇಟರ್
  • ವೈಪರ್
  • ಹಾರನ್
  • ಬ್ರೇಕ್ ಲೈಟ್ಸ್
  • ಪೇಟಿಂಗ್
  • ಬಾಡಿ ಡೆಟೋರೆಟೆಡ್
  • ಟೈರ್​ಗಳ ತಪಾಸಣೆ
  • ವೆಹಿಕಲ್ ವೈಬ್ರೇಷನ್
  • ಇಂಜಿನ್ ಆಯಿಲ್ ಫಿಟ್ನೆಸ್

ಅಕ್ರಮ ತಡೆಗೆ ಎಟಿಎಸ್ ಮಷಿನ್ ಹೇಗೆ ಸಹಕಾರಿ?

ಈ ಹಿಂದೆ ಎಫ್​ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್​ಟಿಒ ಇನ್ಸ್‌ಪೆಕ್ಟರ್​ಗಳು ಏನಾದರೂ ಕಾರಣ ಹೇಳಿ ಎಫ್​ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್​ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್​​ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್​ಸಿ ಸರ್ಟಿಫಿಕೇಟ್ ದೊರೆಯುತ್ತದೆ. ಈ ಬಗ್ಗೆ ವಾಹನ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

ಒಟ್ಟಿನಲ್ಲಿ ಹೊಸದಾಗಿ ಓಪನ್ ಆಗಿರುವ ಎಟಿಎಸ್ ಸೆಂಟರ್​ಗಳಿಂದ ವಾಹನ ಮಾಲೀಕರಿಗೆ ಕಿರಿಕಿರಿ ತಪ್ಪುವುದರ ಜತೆಗೆ ಹಣ ಉಳಿಯುವುದಂತೂ ಗ್ಯಾರಂಟಿ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:57 am, Wed, 27 November 24

Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?