BS Yediyurappa: ಲಂಡನ್​ ಪ್ರವಾಸದಲ್ಲಿ ಥೇಮ್ಸ್​ ನದಿ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಅಪ್ಪ-ಮಗ

| Updated By: ಸಾಧು ಶ್ರೀನಾಥ್​

Updated on: Jul 02, 2022 | 7:39 PM

Jagajyothi Basaveshwara statue: ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ​ವೈ ವಿಜಯೇಂದ್ರ ಇಬ್ಬರೂ ಲ್ಯಾಂಬೆತ್​ನ ಥೇಮ್ಸ್​ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದರು.

BS Yediyurappa: ಲಂಡನ್​ ಪ್ರವಾಸದಲ್ಲಿ ಥೇಮ್ಸ್​ ನದಿ ತೀರದಲ್ಲಿರುವ ಬಸವೇಶ್ವರರ  ಪ್ರತಿಮೆಗೆ ನಮನ ಸಲ್ಲಿಸಿದ ಅಪ್ಪ-ಮಗ
ಲಂಡನ್​ ಪ್ರವಾಸದಲ್ಲಿ ಥೇಮ್ಸ್​ ನದಿ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಅಪ್ಪ-ಮಗ
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಮತ್ತು ಅವರ ಪುತ್ರ ಬಿ ​ವೈ ವಿಜಯೇಂದ್ರ (BY Vijayendra) ಕುಟುಂಬ ಸಮೇತ ಇತ್ತೀಚೆಗೆ ಲಂಡನ್​ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಅಪ್ಪ-ಮಗ ಇಬ್ಬರೂ ಲ್ಯಾಂಬೆತ್​ನ ಥೇಮ್ಸ್​ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ (Jagajyothi Basaveshwara statue) ನಮನ ಸಲ್ಲಿಸಿದರು.

ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮತ್ತು ಬಿ ​ವೈ ವಿಜಯೇಂದ್ರ ಇಬ್ಬರೂ ತಮ್ಮ ಖಾತೆಗಳಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ನವೆಂಬರ್ 14ರಂದು 12ನೇ ಶತಮಾನದ ಕ್ರಾಂತಿಕಾರಿ ಸಂತ ಬಸವೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬಿ.ಎಸ್. ಯಡಿಯೂರಪ್ಪ ಟ್ವೀಟ್ ಸಾರಾಂಶ:

ಕಳೆದ ವಾರ ಲಂಡನ್ ಪ್ರವಾಸದ ಸಂದರ್ಭದಲ್ಲಿ, ಲ್ಯಾಂಬೆತ್ ನಲ್ಲಿರುವ ವಿಶ್ವಗುರು ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನಗಳನ್ನು ಸಲ್ಲಿಸಲಾಯಿತು.

ಬಿ ​ವೈ ವಿಜಯೇಂದ್ರ ಟ್ವೀಟ್ ಸಾರಾಂಶ:

ಪೂಜ್ಯ ತಂದೆಯವರಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ, ಲಂಡನ್’ನ ಲ್ಯಾಂಬೆತ್’ನಲ್ಲಿರುವ ವಿಶ್ವಗುರು, ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನ ಸಲ್ಲಿಸಿದ ಸಂದರ್ಭ.

Also Read:

ಸಿದ್ದರಾಮಯ್ಯ ಪುಸ್ತಕ ಬರೀ ಸುಳ್ಳಿನ ಕಂತೆ ಎಂದು ಅಂಕಿಅಂಶ ಮುಂದಿಟ್ಟ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ