ಯಡಿಯೂರಪ್ಪ ನಮ್ಮ ನಾಯಕ; ಸಚಿವ ಸ್ಥಾನ ಸಿಗದಿದ್ರೆ ರಾಜಕೀಯ ನಿವೃತ್ತಿ ಕೈಗೊಳ್ತೀನಿ‌: ಆಪ್ತರ ಬಳಿ ರಮೇಶ್ ಜಾರಕಿಹೊಳಿ‌ ಅಳಲು

Ramesh Jarkiholi: ಮತ್ತೆ ಸಂಪುಟ ಸೇರಲು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ‌ ಸರ್ಕಸ್ಸಿನ ಮುಂದುವರಿದ ಭಾಗವಾಗಿ, ಮುಂಬೈ ಭೇಟಿಯ ಬಳಿಕ, ಇಂದು ಸುತ್ತೂರು ಮಠಕ್ಕೆ ಗೋಕಾಕ್ ಶಾಸಕ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಇತ್ತೀಚಿನ ತಲ್ಲಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ರಮೇಶ್ ಜಾರಕಿಹೊಳಿ‌ ಸುತ್ತೂರು ಶ್ರೀಗಳ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. 

ಯಡಿಯೂರಪ್ಪ ನಮ್ಮ ನಾಯಕ; ಸಚಿವ ಸ್ಥಾನ ಸಿಗದಿದ್ರೆ ರಾಜಕೀಯ ನಿವೃತ್ತಿ ಕೈಗೊಳ್ತೀನಿ‌: ಆಪ್ತರ ಬಳಿ ರಮೇಶ್ ಜಾರಕಿಹೊಳಿ‌ ಅಳಲು
ಯಡಿಯೂರಪ್ಪ ನಮ್ಮ ನಾಯಕ; ಸಚಿವ ಸ್ಥಾನ ಸಿಗದಿದ್ರೆ ರಾಜಕೀಯ ನಿವೃತ್ತಿ ಕೈಗೊಳ್ತೀನಿ‌: ಆಪ್ತರ ಬಳಿ ರಮೇಶ್ ಜಾರಕಿಹೊಳಿ‌ ಅಳಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 25, 2021 | 1:23 PM

ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ‌ ತಮ್ಮ ಕುಟುಂಬದ ಆಪ್ತರನ್ನು ಜೊತೆಯಾಗಿಸಿಕೊಂಡು ವಿಶೇಷ ವಿಮಾನದಲ್ಲಿ ಮೈಸೂರು ತಲುಪಿದ್ದಾರೆ.  ಹೀಗೆ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ‘ಮೇಲ್ನೋಟಕ್ಕೆ’ ಇದು ಮತ್ತೆ ಸಂಪುಟ ಸೇರುವುದಕ್ಕೆ ಗೋಕಾಕ್ ಶಾಸಕ ನಡೆಸಿರುವ ಸರ್ಕಸ್ ಎಂಬುದು ವೇದ್ಯವಾಗುತ್ತದೆ. ಆದರೆ ಮಾರ್ಗಮಧ್ಯೆ ಯಡಿಯೂರಪ್ಪ ನಮ್ಮ ನಾಯಕ ಎಂದು ಬ್ಯಾಟ್​ ಬೀಸುತ್ತಾ, ಸಚಿವ ಸ್ಥಾನ ಸಿಗದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಕೈಗೊಳ್ಳುವುದಕ್ಕೂ ಹಿಂಜರಿಯುವುದಿಲ್ಲ  ಎಂದು ಆಪ್ತರ ಬಳಿ ರಮೇಶ್ ಜಾರಕಿಹೊಳಿ‌ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮತ್ತೆ ಸಂಪುಟ ಸೇರಲು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ‌ ಸರ್ಕಸ್ಸಿನ ಮುಂದುವರಿದ ಭಾಗವಾಗಿ, ಮುಂಬೈ ಭೇಟಿಯ ಬಳಿಕ, ಇಂದು ಸುತ್ತೂರು ಮಠಕ್ಕೆ ಗೋಕಾಕ್ ಶಾಸಕ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಇತ್ತೀಚಿನ ತಲ್ಲಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ರಮೇಶ್ ಜಾರಕಿಹೊಳಿ‌ ಸುತ್ತೂರು ಶ್ರೀಗಳ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಕೊನೆಗೆ, ಸಚಿವ ಸ್ಥಾನ ಸಿಗದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ ಎಂದು ಆಪ್ತರ ಬಳಿ ರಮೇಶ್ ಜಾರಕಿಹೊಳಿ‌ ಹೇಳಿಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳ ಬಳಿ ಯಡಿಯೂರಪ್ಪ ಪರ ಬ್ಯಾಟ್ ಬೀಸಲು ಗೋಕಾಕ್ ಶಾಸಕ ರಮೇಶ್​ ನಿರ್ಧರಿಸಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಬಿಎಸ್‌ವೈ ಬೆಂಬಲಕ್ಕೆ ಸದಾ ಇರ್ತೀವಿ, ಆದ್ರೆ ಪಕ್ಷದಲ್ಲಿ ಕೆಲ ನಾಯಕರಿಂದ ಬೆನ್ನಿಗೆ ಚೂರಿ ಬಿದ್ದಿದೆ. ತಮ್ಮ ಏಳ್ಗೆ ಸಹಿಸಲಾಗದೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಘಟನೆಯಿಂದ ನನಗೆ ತುಂಬಾ ನೋವಾಗಿದೆ, ಸಚಿವ ಸ್ಥಾನ ಸಿಗದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಒಗೆಯುವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ.. ರಾಜಕೀಯ ನಿವೃತ್ತಿ ಕೈಗೊಳ್ತೀನಿ‌ ಎಂದು ಆಪ್ತರ ಬಳಿ ರಮೇಶ್ ಹೇಳಿಕೊಂಡಿದ್ದಾರಂತೆ.

ಶ್ರೀಗಳ ಬಳಿ ಈ ಮಾತನ್ನೇ ರಮೇಶ್ ಜಾರಕಿಹೊಳಿ‌ ಪ್ರಸ್ತಾಪಿಸಲಿದ್ದಾರಂತೆ. ಶ್ರೀಗಳ ಬಳಿ ಸದ್ಯದ ರಾಜಕೀಯ ಪರಿಸ್ಥಿತಿ ವಿವರಿಸಿ ತಮಗೆ ಸಚಿವ ಸ್ಥಾನ ಕೊಡಿಸುವಂತೆ ಲಾಬಿ ಮಾಡಲಿದ್ದಾರೆ. ಸಚಿವ ಸ್ಥಾನ ದೊರೆತರೆ ಯಡಿಯೂರಪ್ಪ ಬೆನ್ನಿಗೆ ನಾವಿರ್ತೇವಿ ಅನ್ನುವ ಸಂದೇಶ ರವಾನಿಸಲು ಸ್ವಾಮೀಜಿ ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗ್ತಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

(BS Yediyurappa my leader if not given ministership will take political retirement hints gokak mla ramesh jarkiholi)