ಬೆಂಗಳೂರಿನಲ್ಲಿ ಕಟ್ಟಡ ದುರಂತ: ಸರ್ಕಾರದ ಸೂಚನೆ ಬೆನ್ನಲ್ಲೇ ಕಟ್ಟಡಗಳ ಸ್ಯಾಟ್​​ಲೈಟ್​​ ಸರ್ವೆಗೆ ಬಿಬಿಎಂಪಿ ಚಿಂತನೆ

ಬಾಬುಸಪಾಳ್ಯದ ಕಟ್ಟಡ ಕುಸಿತದ ನಂತರ, ಬೆಂಗಳೂರಿನಲ್ಲಿನ ಅನಧಿಕೃತ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೂರು ಹಂತಗಳ ಸರ್ವೆಯನ್ನು ಯೋಜಿಸಲಾಗಿದೆ, ಇದರಲ್ಲಿ ಉಪಗ್ರಹ ಸರ್ವೆ ಮತ್ತು ಪರವಾನಗಿ ಪರಿಶೀಲನೆ ಸೇರಿವೆ. ಮೆಜೆಸ್ಟಿಕ್‌ನಲ್ಲಿ ಒಂದು ಅಕ್ರಮ ಕಟ್ಟಡವನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಕಟ್ಟಡ ದುರಂತ: ಸರ್ಕಾರದ ಸೂಚನೆ ಬೆನ್ನಲ್ಲೇ ಕಟ್ಟಡಗಳ ಸ್ಯಾಟ್​​ಲೈಟ್​​ ಸರ್ವೆಗೆ ಬಿಬಿಎಂಪಿ ಚಿಂತನೆ
ಬೆಂಗಳೂರಿನಲ್ಲಿ ಕಟ್ಟಡ ದುರಂತ: ಸರ್ಕಾರದ ಸೂಚನೆ ಬೆನ್ನಲ್ಲೇ ಕಟ್ಟಡಗಳ ಸ್ಯಾಟ್​​ಲೈಟ್​​ ಸರ್ವೆಗೆ ಬಿಬಿಎಂಪಿ ಚಿಂತನೆ
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2024 | 9:29 PM

ಬೆಂಗಳೂರು, ಅಕ್ಟೋಬರ್​ 28: ಬಾಬುಸಪಾಳ್ಯ ಕಟ್ಟಡ ಕುಸಿತ ದುರಂತದ ಬಳಿಕ ರಾಜಧಾನಿಯ ಅನಧಿಕೃತ ಕಟ್ಟಡಗಳ ಮೇಲೆ ಚಾಟಿಬಿಸುವುದಕ್ಕೆ ಬಿಬಿಎಂಪಿ (BBMP) ಸಜ್ಜಾಗಿದೆ. ಬೆಂಗಳೂರಿನ ಅನಧಿಕೃತ ಕಟ್ಟಡಗಳ ಸರ್ವೆಗೆ ಮೂರು ಹಂತದ ಪ್ಲ್ಯಾನ್ ರೂಪಿಸಿರುವ ಪಾಲಿಕೆ, ಅನಧಿಕೃತ ಕಟ್ಟಡಗಳ ಸ್ಯಾಟಲೈಟ್ ಸರ್ವೆಗೆ ಸಜ್ಜಾಗಿದೆ. ಇನ್ನು ಅನಧಿಕೃತ ಕಟ್ಟಡ ಕಟ್ಟಿದ್ದರೆ ಮಾಲೀಕರಿಂದಲೇ ಕಟ್ಟಡ ತೆರವು ಮಾಡಿಸುವುದಕ್ಕೆ ಕೂಡ ಪಾಲಿಕೆ ಸಜ್ಜಾಗಿದೆ. ಇತ್ತ ಮೆಜೆಸ್ಟಿಕ್​ನಲ್ಲಿ ಅನಧಿಕೃತ ಕಟ್ಟಡ ಕಟ್ಟಿದ್ದ ಮಾಲೀಕರಿಗೆ ಪಾಲಿಕೆ ಚಾಟಿ ಬೀಸಿದ್ದು, ಅನಧಿಕೃತ ಕಟ್ಟಡದಲ್ಲಿ ಜೆಸಿಬಿ ಘರ್ಜಿಸಿದೆ.

ಮೂರು ಹಂತದಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ

ಬಾಬುಸಪಾಳ್ಯದ ಅನಧಿಕೃತ ಕಟ್ಟಡ ಕುಸಿದು 9 ಜನರ ಸಾವಿನ ಬಳಿಕ ಅನಧಿಕೃತ ಕಟ್ಟಡಗಳ ವಿರುದ್ಧ ಪಾಲಿಕೆ ಸಮರ ಸಾರಿದೆ. ಡಿಸಿಎಂ ಡಿಕೆ ಶಿವಕುಮಾರ್​ ಸೂಚನೆಯಂತೆ ಅಖಾಡಕ್ಕಿಳಿಯುವುದಕ್ಕೆ ಸಜ್ಜಾಗಿರುವ ಪಾಲಿಕೆ, ಮೂರು ಹಂತದಲ್ಲಿ ರಾಜಧಾನಿಯ ಅನಧಿಕೃತ ಕಟ್ಟಡಗಳನ್ನ ಸರ್ವೆ ಮಾಡುವುದಕ್ಕೆ ಸಜ್ಜಾಗಿದೆ. ಫೋಟೋ, ವಿಡಿಯೋ ಸಂಗ್ರಹ, ಪರವಾನಗಿ ಪರಿಶೀಲನೆ, ಸ್ಯಾಟಲೈಟ್ ಸರ್ವೆ ಮೂಲಕ ಅನಧಿಕೃತ ಕಟ್ಟಡಗಳ ಪತ್ತೆಗೆ ಸಜ್ಜಾಗಿರುವ ಪಾಲಿಕೆ, ಆ ಮೂಲಕ ರಾಜಧಾನಿಯ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಬಿಸಿ ಮುಟ್ಟಿಸುವುದಕ್ಕೆ ಸಜ್ಜಾಗಿದೆ. ಇತ್ತ ಇಂದಿನಿಂದ ಸರ್ವೆ ಆರಂಭಿಸಬೇಕಿದ್ದ ಪಾಲಿಕೆ, ಇದೀಗ ಆ್ಯಪ್​ ಬಳಕೆಯ ಅಡೆತಡೆಯಿಂದ ನಾಳೆಯಿಂದ ಸರ್ವೆಗೆ ನಡೆಸುವುದಕ್ಕೆ ಚಿಂತನೆ ನಡೆಸಿದ್ದು, ಅನಧಿಕೃತ ಕಟ್ಟಡಗಳಿಗೆ ಕಂಟಕ ಎದುರಾಗುವ ಸೂಚನೆ ಸಿಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳ ನಿರ್ಮಾಣ: ಸ್ಥಳಕ್ಕೆ ಬುಲ್ಡೋಜರ್ ಆಗಮನ!

ಇನ್ನು ಎಂಟು ವಲಯಗಳಲ್ಲಿ ಆಯಾ ವಲಯ ಆಯುಕ್ತರ ನೇತೃತ್ವದಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ನಡೆಯಲಿದ್ದು, ಒಂದು ವೇಳೆ ಅನಧಿಕೃತ ಕಟ್ಟಡಗಳು ಪತ್ತೆಯಾದರೆ ಮಾಲೀಕರ ಖರ್ಚಿನಲ್ಲಿ ತೆರವು ಮಾಡುವುದಕ್ಕೆ ಪಾಲಿಕೆ ನೋಟಿಸ್ ಕೊಡಲಿದೆ. ನೋಟಿಸ್ ನೀಡಿದ ಬಳಿಕವೂ ಕಟ್ಟಡ ತೆರವಾಗದಿದ್ದರೆ ಬಿಬಿಎಂಪಿಯೇ ಕಟ್ಟಡ ತೆರವು ಮಾಡಿ ಅದರ ಖರ್ಚು ವೆಚ್ಚವನ್ನ ಕಟ್ಟಡದ ಮಾಲೀಕರಿಂದ ಭರಿಸೋಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್​ ಹೇಳಿದ್ದಾರೆ.

ಇತ್ತ ರಾಜಧಾನಿಯ ಅನಧಿಕೃತ ಕಟ್ಟಡಗಳ ಮೇಲೆ ಜೆಸಿಬಿ ಮೂಲಕ ಸಮರ ಸಾರುವುದಕ್ಕೆ ಪಾಲಿಕೆ, ನಗರದ ಹೃದಯ ಭಾಗ ಮೆಜೆಸ್ಟಿಕ್​ನಲ್ಲಿ ತಲೆ ಎತ್ತಿದ್ದ ಅನಧಿಕೃತ ಕಟ್ಟಡವನ್ನ ತೆರವು ಮಾಡಿದೆ. ಮೆಜೆಸ್ಟಿಕ್​ನ ಶಾಂತಲಾ ಸಿಲ್ಕ್ಸ್ ಪಕ್ಕದಲ್ಲಿ ಅನಧಿಕೃತವಾಗಿ ತಲೆಎತ್ತಿದ ದಿಲೀಪ್ ಕುಮಾರ್ ಎನ್ನುವವರ ಕಟ್ಟಡದ ಭಾಗಗಳನ್ನ ಬಿಬಿಎಂಪಿಯ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ನೇತೃತ್ವದ ತಂಡ ತೆರವು ಮಾಡಿದೆ. ನಕ್ಷೆ ನಿಯಮ ಉಲ್ಲಂಘಿಸಿದ್ದ ಕಟ್ಟಡದ ಮುಂಭಾಗ ತೆರವು ಮಾಡಿರುವ ಪಾಲಿಕೆ, ಮತ್ತೊಂದು ನೋಟಿಸ್ ನೀಡಿ ಅದಕ್ಕೂ ಉತ್ತರ ಬಾರದಿದ್ದರೆ ಕಟ್ಟಡದ ಉಳಿದ ಭಾಗಗಳ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಾಯು ಮಾಲಿನ್ಯಕ್ಕೆ ಇದುವೇ ಮುಖ್ಯ ಕಾರಣ! ಸಂಶೋಧನೆಯಲ್ಲಿ ತಿಳಿದುಬಂದಿದ್ದೇನು ನೋಡಿ

ಒಟ್ಟಿನಲ್ಲಿ ಮಳೆ ಬಂದಾಗ ಮನೆ ಮೇಲೆ ಗಮನ ಎನ್ನುವ ಹಾಗೇ ಅನಧಿಕೃತ ಕಟ್ಟಡ ಕುಸಿದು 9 ಜನರು ಅಸುನೀಗಿದ ಬಳಿಕ, ಇದೀಗ ಅನಧಿಕೃತ ಕಟ್ಟಡಗಳ ವಿರುದ್ಧ ಸವಾರಿ ಮಾಡುವುದಕ್ಕೆ ಪಾಲಿಕೆ ಸಜ್ಜಾಗಿದೆ. ಸದ್ಯ ಇಂದಿನಿಂದ ಅನಧಿಕೃತ ಕಟ್ಟಡಗಳ ಸರ್ವೆ ಮಾಡ್ತೀವೆ ಅಂದಿದ್ದ ಪಾಲಿಕೆ, ಇದೀಗ ನಾಳೆಯಿಂದ ಸರ್ವೆ ಮಾಡ್ತೀವೆ ಅಂತಾ ರಾಗ ಬದಲಿಸಿದ್ದು, ರಾಜಧಾನಿಯ ಅನಧಿಕೃತ ಕಟ್ಟಡಗಳಿಗೆ ಇನ್ನಾದ್ರೂ ಕಡಿವಾಣ ಬೀಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ