ಮುಡಾ ವಿವಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ 158 ನಿವೇಶನ ರದ್ದು: ಏನಿದು ಸೂಡಾ ಹಂಚಿಕೆ ಕೇಸ್?

ಮುಡಾ ಸೈಟ್ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಮಹಾ ಕಂಪನವನ್ನೇ ಎಬ್ಬಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸೈಟ್ ಹಂಚಿಕೆ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗ ವಾಜಪೇಯಿ ಬಡಾವಣೆಯಲ್ಲಿ ಸೂಡಾ ವತಿಯಿಂದ 12 ವರ್ಷಗಳ ಹಿಂದೆ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ರದ್ದುಗೊಳಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಮುಡಾ ವಿವಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ 158 ನಿವೇಶನ ರದ್ದು: ಏನಿದು ಸೂಡಾ ಹಂಚಿಕೆ ಕೇಸ್?
ಮುಡಾ ವಿವಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ 158 ನಿವೇಶನ ರದ್ಧು: ಏನಿದು ಸೂಡಾ ಹಂಚಿಕೆ ಕೇಸ್?
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on:Jul 10, 2024 | 7:41 PM

ಶಿವಮೊಗ್ಗ, ಜುಲೈ 10: ಸಮಾನಾಂತರ ಹಾಗೂ ಪರಿಹಾರ ರೂಪದಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ಮೈಸೂರಿನ ಮೂಡಾದಲ್ಲಿ (Muda) ಹಂಚಲಾಗಿದೆ ಎಂಬ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ಶಿವಮೊಗ್ಗ ವಾಜಪೇಯಿ ಬಡಾವಣೆಯಲ್ಲಿ ಸೂಡಾ (Sudha) ವತಿಯಿಂದ 12 ವರ್ಷಗಳ ಹಿಂದೆ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ರದ್ದುಗೊಳಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ ಫಲಾನುಭವಿಗಳಿಗೆ ರದ್ದತಿ ನೋಟಿಸ್​ ಜಾರಿ ಮಾಡಿದೆ.

ಫಲಾನುಭವಿಗಳಲ್ಲಿ ತೀವ್ರ ಆತಂಕ

ಮೊದಲ ಹಂತದಲ್ಲಿ ಸುಮಾರು 158 ನಿವೇಶನಗಳನ್ನು ರದ್ದುಗೊಳಿಸಲಾಗಿದೆ. ಇನ್ನೂ ನಿವೇಶನ ರದ್ದು ನೋಟಿಸ್​ ಬರುತ್ತಿದ್ದಂತೆ ನಿವೇಶನಗಳನ್ನು ಪಡೆದಿದ್ದ ಫಲಾನುಭವಿಗಳಲ್ಲಿ ತೀವ್ರ ಆತಂಕ ಜೊತೆಗೆ ನಿರಾಶೆ ಎದುರಾಗಿದೆ. ಹಂಚಿಕೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿವೇಶನ ಪಡೆದವರು ಇರುವಂತೆ ನಿವೇಶನ ರಹಿತರು ಇದ್ದು, ಇವರನ್ನು ಈ ಘಟನೆ ವಿಚಲಿತರನ್ನಾಗಿ ಮಾಡಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ನ ಆರು ಹಿರಿಯ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ?

ಶಿವಮೊಗ್ಗ ನಗರದ ಹೊರವಲಯದ ಮಲ್ಲಿಗೇನಹಳ್ಳಿಯ ವಾಜಪೇಯಿ ಬಡಾವಣೆಯಲ್ಲಿ ಈ ನಿವೇಶನ ಹಂಚಿಕೆ ನಡೆದಿತ್ತು. 12 ವರ್ಷದ ಬಳಿಕ ವಿವೇಚನಾ ಕೋಟಾದ ನೀಡಲಾಗಿದ್ದ ನಿವೇಶನಗಳನ್ನು ಇದೀಗ ರದ್ದು ಮಾಡಲಾಗಿದೆ. ವಿಶೇಷವೆಂದರೆ ನಿವೇಶನ ಪಡೆದವರು ನಿರಾಶೆ ಅನುಭವಿಸಿದ್ದಾರೆಯೇ ಹೊರತು ನಿವೇಶನ ಹಂಚಿಕೆಯಲ್ಲಿ ಭಾಗಿದಾರಾದ ಅಧಿಕಾರಿಗಳು ಮತ್ತು ಆಗಿನ ಜನಪ್ರತಿನಿಧಿಗಳು ಮಾತ್ರ ಸದ್ಯಕ್ಕಂತು ಸೇಪ್‌ ಆಗಿದ್ದಾರೆ.

ಏನಿದು ಸೂಡಾ ಹಂಚಿಕೆ ಪ್ರಕರಣ?

2012ರಲ್ಲಿ ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಈ ನಿವೇಶನ ಹಂಚಿಕೆಯಲ್ಲಿ ಆರಂಭದಿಂದಲೂ ಅಕ್ರಮದ ಕರಿನೆರಳು ಬಿದ್ದೇ ಇತ್ತು. ರೈತರಿಂದ ಪಡೆದ ಭೂಮಿಯ ವಿಚಾರದಲ್ಲಿ, ಅವರಿಗೆ ಬದಲಾಗಿ ನೀಡಲಾದ ನಿವೇಶನಗಳ ವಿಚಾರದಲ್ಲಿ ಹಾಗೂ ವಿವೇಚನಾ ಕೋಟಾದಡಿ ನೀಡಿದ್ದ ನಿವೇಶನಗಳ ವಿಚಾರದಲ್ಲಿ ಸಾಕಷ್ಟು ಅಕ್ರಮದ ವಾಸನೆ ಬಡಿದಿತ್ತು. ಲೋಕಾಯುಕ್ತಕ್ಕೂ ದೂರು ದಾಖಲಾಗಿ ತನಿಖೆ ಆರಂಭಗೊಂಡಿತ್ತು.

ಲೋಕಾಯುಕ್ತಕ್ಕೆ ದೂರು

ಈ ಬಡಾವಣೆಯಲ್ಲಿ 1500 ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆ ಪೈಕಿ ವಿವೇಚನಾ ಕೋಟಾ 150ಕ್ಕೂ ಹೆಚ್ಚು ನಿವೇಶನ ಸೇರಿದಂತೆ 1182 ಸೈಟ್‌ಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದರಲ್ಲಿ ಗಂಡ-ಹೆಂಡತಿಗೆ ಏಕ ಕಾಲಕ್ಕೆ ಸೈಟ್ ನೀಡಲಾಗಿರುವುದು, ಅರ್ಜಿ ಹಾಕಿದ್ದಕ್ಕಿಂತ ದೊಡ್ಡ ಅಳತೆಯ ನಿವೇಶನ ನೀಡಿರುವುದು, ಒಂದೇ ಸಲ ಅರ್ಜಿ ಹಾಕಿದವರಿಗೂ ಸೈಟ್ ನೀಡಲಾಗಿದೆ ಮತ್ತು ಪ್ರಾಧಿಕಾರದ ಸಿಬ್ಬಂದಿಗೂ ಸೈಟ್ ಕೊಡಲಾಗಿದೆ ಎಂಬುದೂ ಸೇರಿದಂತೆ ಹಲವು ರೀತಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ಅರ್ಹರಿಗೆ ಸೈಟ್ ಸಿಕ್ಕಿಲ್ಲ ಎಂದು ಆರೋಪಿಸಿ ಅನೇಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ವಿವೇಚನಾ ಕೋಟಾ ಸೇರಿದಂತೆ 1182 ಸೈಟ್‌ಗಳನ್ನು ಅನರ್ಹತೆ ಆಧಾರದ ಮೇಲೆ ರದ್ದು ಮಾಡುವ ನಿಟ್ಟಿನಲ್ಲಿ ನಿಮ್ಮ ಹಂತದಲ್ಲೇ ಕ್ರಮ ತೆಗೆದುಕೊಳ್ಳಿ ಎಂದು ಸೂಡಾಕ್ಕೆ ಸೂಚಿಸಿತ್ತು. ಲೋಕಾಯುಕ್ತ ವರದಿಯಲ್ಲಿ ಅಕ್ರಮದ ಕುರಿತು ವಿವರ ಸಹ ಇತ್ತು ಎನ್ನಲಾಗಿದೆ. ಈ ನಡುವೆ ಕೆಲವರು ಹೈಕೋರ್ಟಿನ ಮೆಟ್ಟಿಲು ಏರಿದ್ದರು. ಈ ಪ್ರಕರಣದಲ್ಲಿ ನಡೆದ ವಿಚಾರಣೆಯಲ್ಲಿ ಹೈಕೋರ್ಟ್‌ ಲೋಕಾಯುಕ್ತ ಮತ್ತು ಸರ್ಕಾರದ ನಿರ್ಧಾರವನ್ನು ಬದಿಗಿಟ್ಟು ನಿಯಮದಂತೆ ಕ್ರಮ ಜರುಗಿಸುವಂತೆ ಸೂಡಾಕ್ಕೆ ಆದೇಶ ನೀಡಿತ್ತು.

ಇದನ್ನೂ ಓದಿ: ವಾಲ್ಮೀಕಿ ಹಗರಣ: ಇಡಿ ಸುಳಿಯಲ್ಲಿ ಸಿಲುಕಿರುವ ಬಸನಗೌಡ ದದ್ದಲ್, ನಾಗೇಂದ್ರಗೆ ಎಸ್​ಐಟಿ ಶಾಕ್

ಇದಕ್ಕೆ ಇನ್ನಷ್ಟು ಕಾಲವಕಾಶ ನೀಡಬೇಕೆಂಬ ಸೂಡಾ ಮನವಿಯನ್ನು ಕೂಡ ತಳ್ಳಿ ಹಾಕಿತ್ತು. ಹಲವು ದಶಕಗಳ ಹಿಂದೆಯೇ ವಿವೇಚನಾ ಕೋಟಾ ಎಂಬುದನ್ನು ಸರ್ಕಾರ ರದ್ದಗೊಳಿಸಿದ್ದರಿಂದ ವಿವೇಚನಾ ಕೋಟಾದಡಿ ನೀಡಲಾದ ನಿವೇಶನಗಳನ್ನು ರದ್ದುಗೊಳಿಸಿ ಸೂಡಾ ನಿರ್ಧಾರ ಕೈಗೊಂಡು, ಫಲಾನುಭವಿಗಳಿಗೆ ರದ್ದುಗೊಳಿಸುತ್ತಿರುವ ಆದೇಶ ಪತ್ರ ರವಾನಿಸುತ್ತಿರುವುದರಿಂದ ಸೈಟ್ ಸಿಕ್ಕೆ ಬಿಡ್ತು ಎಂಬ ಭರವಸೆಯಲ್ಲಿದ್ದ ಫಲಾನುಭವಿಗಳಿಗೆ ಆತಂಕ ಶುರುವಾಗಿದೆ.

ಒಂದು ನಿವೇಶನ ಖರೀದಿಸಿ ಅದರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸಿನೊಂದಿಗೆ ಅರ್ಜಿ ಸಲ್ಲಿಸಿ ವಿವೇಚನಾ ಕೋಟಾದಡಿ ಸೈಟ್ ಪಡೆದ ಫಲಾನುಭವಿಗಳು ಇದೀಗ ಸೈಟ್ ಕಳೆದುಕೊಳ್ಳಬೇಕಾಗಿದೆ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸರ್ಕಾರದ ಕ್ರಮ ತೆಗೆದುಕೊಂಡಿಲ್ಲ. ಅದರ ಬದಲು ವಿಚೇನಾ ಕೋಟಾದಡಿ ಸೈಟ್ ಪಡೆದವರಿಗೆ ದೊಡ್ಡ ಶಾಕ್ ಕೊಟ್ಟಿದೆ. ಮುಂದೆ ಈ ಸೈಟ್ ಹಂಚಿಕೆ ವಿವಾದವು ಮತ್ತೆ ಏನೆಲ್ಲಾ ಅವಾಂತರ ಸೃಷ್ಟಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:39 pm, Wed, 10 July 24

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ