ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ನ ಆರು ಹಿರಿಯ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ?

ಇತ್ತೀಚೆಗೆ ಯೂನಿಯನ್ ಬ್ಯಾಂಕ್‌ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ವಾಲ್ಮೀಕಿ ನಿಗಮದ 187 ಕೋಟಿ ರೂ. ಕನ್ನ ಹಾಕಿದ ಖದೀಮರಿಗೆ ಬೆವರಿಳಿಸಿದ್ದರು. ಕೇಸ್‌ನ ಮಾಹಿತಿ ಪಡೆದಿದ್ದರು. ಒಟ್ಟು ಆರು ಜನ ಯೂನಿಯನ್​ ಬ್ಯಾಂಕ್​ನ ಆಡಳಿತ ಮಂಡಳಿಯವರು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆನ್ನಲಾಗುತ್ತಿದ್ದು, ಆರೋಪಿ ಪಟ್ಟಿಯಲ್ಲಿದ್ದಾರೆ. ಆರಕ್ಕೆ ಆರು ಸಿಬ್ಬಂದಿಗಳು ಈವರೆಗೂ ನಾಪತ್ತೆ ಆಗಿದ್ದಾರೆ.

ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ನ ಆರು ಹಿರಿಯ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ?
ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ನ ಆರು ಹಿರಿಯ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ?
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2024 | 6:51 PM

ಬೆಂಗಳೂರು, ಜುಲೈ 10: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ  (Valmiki Scheduled Tribes Development Corporation) ನಡೆದಿರುವ 187 ಕೋಟಿ ರೂ. ಹಗರಣ, ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸಚಿವ ಬಿ. ನಾಗೇಂದ್ರ ತಲೆದಂಡವಾಗಿದೆ. ಇಂದು ಅವರ ಪಿಎ ಹರೀಶ್‌ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಯೂನಿಯನ್ ಬ್ಯಾಂಕ್​ನ (Union Bank) ಕೆಲ ಹಿರಿಯ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟು ಆರು ಜನ ಯೂನಿಯನ್ ಬ್ಯಾಂಕ್​ನ ಆಡಳಿತ ಮಂಡಳಿಯವರು ಆರೋಪಿ ಪಟ್ಟಿಯಲ್ಲಿದ್ದು, ಈವರೆಗೆ ಎಲ್ಲರೂ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ.

ಆರೋಪಿ ಪಟ್ಟಿಯಲ್ಲಿರುವವರು ಯಾರೆಲ್ಲ?

  • ಮನಮೆಕಲೈ: ಎಂ ಡಿ, ಸಿಇಓ
  • ನಿತೇಶ್ ರಂಜನ್: ನಿರ್ದೇಶಕ
  • ರಾಮಸುಬ್ರಮಣ್ಯ: ನಿರ್ದೇಶಕ
  • ಸಂಜಯ್ ರುದ್ರ: ನಿರ್ದೇಶಕ
  • ಪಂಕಜ್ ದ್ವಿವೇದಿ: ನಿರ್ದೇಶಕ
  • ಸುಚಿ ಸ್ಮಿತಾ: ಮ್ಯಾನೇಜರ್

ಜೊತೆಗೆ ಡೆಪ್ಯೂಟಿ ಬ್ರಾಂಚ್ ಮುಖ್ಯಸ್ಥ ದೀಪ ಹಾಗೂ ಕ್ರೆಡಿಟ್ ಆಫೀಸರ್ ಕೃಷ್ಣಮೂರ್ತಿ ಎಂಬುವವರ ಹೆಸರೂ ಕೂಡ ಸಿಬಿಐ ಎಫ್ಐಆರ್​ನಲ್ಲಿ ಉಲ್ಲೇಖವಾಗಿದೆ. ಸುಚಿಸ್ಮಿತಾ ಹೆಸರು ಸಹ ಸಿಬಿಐ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ಕೋಟಿ ಕೋಟಿ ಹಣ ಕ್ಯಾಶ್ ರೂಪಕ್ಕೆ ಬಂದಿದ್ದು ಹೇಗೆ ಗೊತ್ತಾ?

ವಾಲ್ಮೀಕಿ ನಿಗಮಕ್ಕೆ ಸರ್ಕಾರದಿಂದ ವರ್ಗಾವಣೆಗೊಂಡ ಕೋಟಿ ಕೋಟಿ ಹಣವನ್ನು ಹೇಗೆ ಅದನ್ನು ಸ್ವಂತಕ್ಕೆ ಬಳಿಸಿಕೊಂಡಿದ್ದಾರೆ ಎನ್ನುವುದನ್ನ ನೋಡುವುದಾದರೆ, ನೆಟ್ ಬ್ಯಾಂಕಿಂಗ್, ಆರ್​ಟಿಜಿಎಸ್, ಗೂಗಲ್ ಪೇ, ಪೋನ್ ಪೇ ಮುಖಾಂತರ ಹಣವನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾಗೇಂದ್ರ ಪಿಎ ಹರೀಶ್​ ಬಂಧನ, ಯಾರು ಈತ? ಇಲ್ಲಿದೆ ವಿವರ

ಹೀಗೆ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಿಂದ ಬಂದಿದ್ದ ಹಣವನ್ನು ಕಡಲೆಪುರಿಯಂತೆ ಹಂಚಿ ಕ್ಯಾಶ್ ರೂಪಕ್ಕೆ ತರಲಾಗಿತ್ತು. ಬರೋಬ್ಬರಿ 94 ಕೋಟಿ 74 ಲಕ್ಷ ರೂ. ಅನ್ನು ಹಂಚಿಕೆ ಮಾಡಿ ಕ್ಯಾಶ್ ಮಾಡಿಕೊಂಡಿದ್ದಾರೆ. ಹೀಗೆ ಹಣವನ್ನ ಕಳಿಸಿದವರಿಗೆಲ್ಲ ಪುನಃ ಕ್ಯಾಶ್ ಪಡೆಯುವಾಗ ಇಂತಿಷ್ಟು ಕಮೀಷನ್ ನೀಡಿಲಾಗಿದೆ. ಈ ಬಗ್ಗೆ A9 ಸತ್ಯನಾರಾಯಣ ಇಟಕಾರಿ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಹವಾಲಾ ಲಿಂಕ್! ಎಸ್​ಐಟಿ ತನಿಖೆಯಲ್ಲಿ ಬಯಲು

ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 26ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿನ ಬೆನ್ನಲ್ಲೇ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಹಗರಣ ಬಟಾಬಯಲಾಗಿತ್ತು. ಐಟಿ ಕಂಪನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ನ ವಿವಿಧ ಖಾತೆಗಳಿಗೆ 88.62 ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ