ಚಾಮರಾಜನಗರ: ಕೋರ್ಟ್‌ಗೆ ಕರೆದೊಯ್ಯುವಾಗ ವಿಚಾರಣಾಧೀನ ಕೈದಿ ಎಸ್ಕೇಪ್
ಚಾಮರಾಜನಗರ ಉಪ ಕಾರಾಗೃಹದಿಂದ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ವಿಚಾರಣಾಧೀನ ಕೈದಿ ಎಸ್ಕೇಪ್ ಆದ ಘಟನೆ ನಡೆದಿದೆ. ಟೀ ಕುಡಿಯುವಾಗ ಚಾಮರಾಜನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಪರಾರಿಯಾಗಿದ್ದಾನೆ.
ಚಾಮರಾಜನಗರ, ಆ.4: ತಾಲೂಕಿನ ಮೇಗಲಹುಂಡಿಯ ವಿಚಾರಣಾಧೀನ ಕೈದಿ ಸುರೇಶ್ ಎಂಬಾತ ಹಲವು ಕಳ್ಳತನ ಪ್ರಕರಣಗಳ ಹಿನ್ನಲೆ ಚಾಮರಾಜನಗರ(Chamarajanagar) ಜೈಲಿನಲ್ಲಿದ್ದ. ತಮಿಳುನಾಡಿನ ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗೆಂದು ಉಪ ಕಾರಾಗೃಹದಿಂದ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಇತ ಎಸ್ಕೇಪ್ ಆಗಿದ್ದಾನೆ. ಹೌದು, ತಮಿಳುನಾಡಿನ ಹಾಸನೂರು ಬಳಿ ಟೀ ಕುಡಿಯುವಾಗ ಚಾಮರಾಜನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಪರಾರಿಯಾಗಿದ್ದಾನೆ.
ಚಾಮರಾಜನಗರದಲ್ಲಿ ಪ್ರಾಂಶುಪಾಲರಿಂದ ಕಿರುಕುಳ ಆರೋಪ; ಹೈಡ್ರೋಕ್ಲೋರಿಕ್ ಆ್ಯಸಿಡ್ ಕುಡಿದು ಲ್ಯಾಬ್ ಅಟೆಂಡರ್ ಆತ್ಮಹತ್ಯೆಗೆ ಯತ್ನ
ಚಾಮರಾಜನಗರ, ಆ.4: ತಾಲೂಕಿನ ಹೊಂಡರವಾಳು ನವೋದಯ ವಿದ್ಯಾಲಯದ ಪ್ರಾಂಶುಪಾಲರಿಂದ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಕುಡಿದು ಲ್ಯಾಬ್ ಅಟೆಂಡರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿರಂಜೀವಿ (28) ಆತಹತ್ಯೆಗೆ ಯತ್ನಿಸಿದ ನೌಕರ. ಕೂಡಲೇ ಇತನನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಂಶುಪಾಲರು ಹೆಚ್ಚುವರಿ ಕೆಲಸ ಹಾಗೂ ಮನೆಗೆಲಸ ಮಾಡಿಸುತ್ತಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇನ್ನು ಈ ಘಟನೆ ಕುರಿತು ನವೋದಯ ವಿದ್ಯಾಲಯದ ಪ್ರಾಂಶುಪಾಲ ವಿ.ಪ್ರಸಾದ್ ವಿರುದ್ದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ಕುಖ್ಯಾತ ವಿಚಾರಣಾಧೀನ ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ!
ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ 6 ಪ್ರವಾಸಿಗರ ರಕ್ಷಣೆ
ಚಾಮರಾಜನಗರ: ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ 6 ಪ್ರವಾಸಿಗರ ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿ ನಡೆದಿದೆ. ಬೆಂಗಳೂರಿನಿಂದ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ 6 ಜನರು, ಮೋಜು ಮಸ್ತಿ ಮಾಡಲು ನದಿಯ ನಡುಗಡ್ಡೆ ಬಂಡೆ ಬಳಿ ತೆರಳಿದ್ದರು. ಈ ವೇಳೆ ದಿಢೀರ್ ನೀರು ಹೆಚ್ಚಾದ ಪರಿಣಾಮ ಹೊರಬರಲಾಗದೆ ಪರದಾಟ ನಡೆಸಿದ್ದರು. ಕೂಡಲೇ ಮೂವರು ಮಹಿಳೆಯರು ಸೇರಿದಂತೆ 6 ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆ, ಮಾನವೀಯತೆಯಿಂದ ಜಲ ಕಂಟಕದಿಂದ ಕುಟುಂಬ ಪಾರಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ