AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಂದ್ರ ಜತೆ ಆಯೇಷಾ ಪರಾರಿ ಶಂಕೆ: ಯುವಕನ ಸಂಬಂಧಿಗೆ ಚಾಕು ಇರಿದ ದುಷ್ಕರ್ಮಿಗಳು

ಯುವತಿ ನಾಪತ್ತೆ ಹಿನ್ನಲೆ ಯುವಕನ ಸಂಬಂಧಿಗೆ ಯುವತಿ ಕಡೆಯವರಿಂದ ಚಾಕು ಇರಿದಿರುವಂತಹ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಯುವಕನೇ ಯುವತಿಯನ್ನ ಕರೆದುಕೊಂಡು ಹೋಗಿದ್ದಾನೆಂದು ಶಂಕಿಸಿ, ಪೊಲೀಸ್ ಠಾಣೆ ಬಳಿಯೇ ಹಲ್ಲೆ ಮಾಡಲಾಗಿದೆ. ಸದ್ಯ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಂದ್ರ ಜತೆ ಆಯೇಷಾ ಪರಾರಿ ಶಂಕೆ: ಯುವಕನ ಸಂಬಂಧಿಗೆ ಚಾಕು ಇರಿದ ದುಷ್ಕರ್ಮಿಗಳು
ಜಾಕೀರ್
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 05, 2025 | 4:26 PM

Share

ಚಾಮರಾಜನಗರ, ಅಕ್ಟೋಬರ್​ 05: ಯುವತಿ (girl) ನಾಪತ್ತೆಗೆ ಯುವಕನೋರ್ವ ಕಾರಣವೆಂದು ಆತನ ಸಂಬಂಧಿಗೆ ಯುವತಿ ಕಡೆಯವರು ಪೊಲೀಸರು ಠಾಣೆ ಬಳಿಯೇ ಚಾಕು ಇರಿದಿರುವಂತಹ (knife stab) ಭೀಕರ ಘಟನೆಯೊಂದು ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಆರ್ಮುಗಮ್​​ಗೆ ಚಾಕು ಇರಿಯಲಾಗಿದೆ. ಸದ್ಯ ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಕಳೆದ ಅಕ್ಟೋಬರ್​ 1 ರಿಂದ ಬೇಬಿ ಆಯೇಷಾ ಕಾಣೆಯಾಗಿದ್ದಾಳೆ. ಇದಕ್ಕೆ ಮಹೇಂದ್ರನೇ ಕಾರಣವೆಂದು ಯುವತಿಯ ಸಂಬಂಧಿಕರು ಶಂಕಿಸಿದ್ದಾರೆ. ಇತ್ತ ಗುಂಡ್ಲುಪೇಟೆ ಪಟ್ಟಣದ ಪೌರಕಾರ್ಮಿಕರ ಕಾಲೋನಿಯ ನಿವಾಸಿ, ಮಹೇಂದ್ರ ಸಂಬಂಧಿ ಆರ್ಮುಗಮ್, ಮಹೇಂದ್ರ ಕಾಣೆಯಾಗಿದ್ದಾನೆಂದು ದೂರು ಕೊಡಲು ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆ ಬಳಿಯೇ ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಚಾಕುವಿನಿಂದ ಆರ್ಮುಗಮ್​​​ ಕುತ್ತಿಗೆಗೆ ಇರಿದಿದ್ದಾರೆ. ಸದ್ಯ ನಾಪತ್ತೆ ಹಾಗೂ ಚಾಕು ಇರಿತ ಸಂಬಂಧ ಪ್ರಕರಣ ದಾಖಲಾಗಿದೆ.

ಮಾರಕಾಸ್ತ್ರ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು

ಮಾರಕಾಸ್ತ್ರ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ಅ.2ರಂದು ಶಿವಮೊಗ್ಗದ ಎನ್​.ಟಿ.ರಸ್ತೆಯಲ್ಲಿ ನಡೆದಿದೆ. ಗಾಯಾಳು ಅಮ್ಜದ್​(38) ಮೃತ ವ್ಯಕ್ತಿ. ಈಗಾಗಲೇ ಐವರನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: 5 ಕೋಟಿ ವಿಮೆ ಹಣಕ್ಕಾಗಿ ಓರ್ವನ ಮರ್ಡರ್​: ಖತರ್ನಾಕ್​ ಜಾಲ ಭೇದಿಸಿದ ಖಾಕಿ

ಅಮ್ಜದ್​ ಮೇಲೆ ಇಬ್ಬರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಾಯಗೊಂಡಿದ್ದ ಅಮ್ಜದ್​ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಮುಂದೆ ಪೋಷಕರು ಮತ್ತು ಸಂಬಂಧಿಕರು ಜಮಾಯಿಸಿದ್ದಾರೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಡಿದಮತ್ತಿನಲ್ಲಿ ಜೊತೆಗಿದ್ದವನಿಂದಲೇ ವ್ಯಕ್ತಿಯ ಕೊಲೆ

ಕುಡಿದಮತ್ತಿನಲ್ಲಿ ಜೊತೆಗಿದ್ದವನಿಂದಲೇ ಹರಿತವಾದ ಆಯುಧದಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಮಾರತ್​​​ಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ನಡೆದಿದೆ.  ರಾಯಚೂರು ಮೂಲದ ಮಹದೇವ(65) ಎಂಬಾತನ ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ: ಕೋಲಾರದಲ್ಲಿ ನಕಲಿ ವೈದ್ಯರ ಹಾವಳಿಗೆ ಹೋಯ್ತು 8 ವರ್ಷದ ಬಾಲಕಿಯ ಜೀವ!

ತಮಿಳುನಾಡಿನ ತಾಂಜಾವೂರು ಮೂಲದ ರಾಜು ಎಂಬಾತನಿಂದ ಕೃತ್ಯವೆಸಗಲಾಗಿದೆ. ಸ್ಥಳಕ್ಕೆ ವೈಟ್​​ಫೀಲ್ಡ್ ಡಿಸಿಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಆರೋಪಿ ರಾಜುನನ್ನು ವಶಕ್ಕೆ ಪಡೆದಿದ್ದು, ಮಾರತ್​​ಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ