ವರ್ಷದ ಮೊದಲ ಮಳೆಗೆ ಬಂಡೀಪುರ ಫುಲ್ ಗ್ರೀನ್​; ಕೆರೆ ಕಟ್ಟೆಗಳು ಭರ್ತಿ, ವನ್ಯ ಪ್ರಾಣಿಗಳು ​ಖುಷ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: May 16, 2024 | 10:38 PM

ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗದ ಹಿನ್ನಲೆ ತೀವ್ರ ಬರದಿಂದ ಬಂಡೀಪುರ ಕಾಡು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಆದ್ರೆ, ಪೂರ್ವ ಮುಂಗಾರು ಮಳೆ ಬಿದ್ದ ಬೆನ್ನಲ್ಲೇ ಬಂಡೀಪುರ ಸಂಪೂರ್ಣ ಗ್ರೀನಿಶ್ ಆಗಿದ್ದು, ಕೆರೆ ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಕಾಡು ಪ್ರಾಣಿಗಳಿಗಿದ್ದ ಕಂಠಟ ಈಗ ದೂರವಾಗಿದೆ.

ವರ್ಷದ ಮೊದಲ ಮಳೆಗೆ ಬಂಡೀಪುರ ಫುಲ್ ಗ್ರೀನ್​; ಕೆರೆ ಕಟ್ಟೆಗಳು ಭರ್ತಿ, ವನ್ಯ ಪ್ರಾಣಿಗಳು ​ಖುಷ್​
ವರ್ಷದ ಮೊದಲ ಮಳೆಗೆ ಬಂಡೀಪುರ ಫುಲ್ ಗ್ರೀನ್
Follow us on

ಚಾಮರಾಜನಗರ, ಮೇ.16: ಚಾಮರಾಜನಗರ(Chamarajanagara) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​(Bandipur Tiger Reserve Forest)ನಲ್ಲಿ. ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗಿರಲಿಲ್ಲ, ಕಾಡೆಲ್ಲ ಬಾಡಿ ಹೋಗಿತ್ತು. ಕೆರೆ-ಕಟ್ಟೆಗಳೆಲ್ಲ ಒಣಗಿ ಜೀವ ಜಲ ಬತ್ತಿ ಹೋಗಿದ್ದು, ಕಾಡು ಪ್ರಾಣಿಗಳಿಗೆ ಸಂಕಷ್ಟ ಎದುರಾಗಿತ್ತು. ಆದ್ರೆ, ಈ ವರ್ಷದ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿದ್ದು, ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನಲೆ ಬಂಡೀಪುರ ಫುಲ್ ಗ್ರೀನಿಶ್ ಆಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಇನ್ನು ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ನ ಡೀಪ್ ಫಾರೆಸ್ಟ್ ಒಳಗೆ 400 ಕ್ಕೂ ಅಧಿಕ ಕೆರೆ ಕಟ್ಟೆಗಳಿವೆ. ಕಳೆದ ವರ್ಷ ಭಾರಿ ಬರಗಾಲ ಎದುರಾಗಿದ್ದು, ಭಾಗಶಃ 90 ಪರ್ಸೆಂಟ್ ಕೆರೆ-ಕಟ್ಟೆಗಳು ಬತ್ತಿ ಹೋಗಿತ್ತು. ಇದ್ದ ಬೆರೆಳೆಣಿಕೆಯಷ್ಟು ಸೋಲಾರ್ ಬೋರ್ ನಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನ ಅರಣ್ಯಾಧಿಕಾರಿಗಳು ಮಾಡಿದ್ದರು. ಆದ್ರೆ, ಅದು ಅಷ್ಟರ ಮಟ್ಟಿಗೆ ಯಶಸ್ವಿ ಕೂಡ ಆಗಿರಲಿಲ್ಲ.

ಇದನ್ನೂ ಓದಿ:ಚಾಮರಾಜನಗರ: ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು

ನೀರಿನ ಅಭಾವದಿಂದ ಕಾಡು ಪ್ರಾಣಿಗಳೆಲ್ಲವೂ ಕಬಿನಿ ಹಿನ್ನೀರಿನ ಕಡೆ, ಇತ್ತ ತೆಪ್ಪಕಾಡಿನೆಡೆಗೆ ನೀರನ್ನ ಅರಸಿ ಬಂಡೀಪುರ ತೊರೆದಿದ್ದವು. ಆದ್ರೆ, ವರ್ಷದ ಮೊದಲ ಮಳೆ ಉತ್ತಮವಾಗಿದ್ದು ಕೆರೆ ಕಟ್ಟೆಗಳು ತುಂಬುತ್ತಿದ್ದು ಜೀವ ಕಳೆ ಮರುಕಳಿಸಿದೆ. ಒಟ್ಟಾರೆ ಮೊದಲ ಮಳೆ ಉತ್ತಮವಾಗಿದ್ದು, ಮೂಲೆಹೊಳೆ ಸೇರಿದಂತೆ ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ಕಾಡು ಹಚ್ಚ ಹಸಿರಾಗಿ ಕಂಗೊಳಿಸುತ್ತಿದ್ದು, ಪ್ರಾಣಿಗಳಿಗಿದ್ದ ನೀರಿನ ಸಮಸ್ಯೆ ದೂರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ