ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಶಾಸಕರ ಬೆಂಬಲಿಗರ ಪುಂಡಾಟ!

ಚಾಮರಾಜನಗರ: ಪರಿಸರ ಸೂಕ್ಷ್ಮ ವಲಯದಲ್ಲಿ ಕಾರು ನಿಲ್ಲಿಸಿ ಮದ್ಯದ ಅಮಲಿನಲ್ಲಿ ಶಾಸಕರ ಬೆಂಬಲಿಗರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮ್ಯುಸಿಕ್ ಹಾಕಿಕೊಂಡು ಶಾಸಕರ ಬೆಂಬಲಿಗರು ಡ್ಯಾನ್ಸ್ ಮಾಡಿದ್ದಾರೆ. ಯಳಂದೂರು ತಾಲೂಕಿನ ಬಿಆರ್​ಟಿ ಟೈಗರ್ ರಿಸರ್ವ್ ಪ್ರದೇಶದಲ್ಲಿ ಕೊಳ್ಳೇಗಾಲದ ಬಿಎಸ್​ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಬೆಂಬಲಿಗರು ನೃತ್ಯ ಮಾಡಿದ್ದಾರೆ. ಶಾಸಕರ ಬೆಂಬಲಿಗರಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಪರಿಸರವಾದಿಗಳು ಮತ್ತು ಸ್ಥಳೀಯರ ತೀವ್ರ […]

ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಶಾಸಕರ ಬೆಂಬಲಿಗರ ಪುಂಡಾಟ!

Updated on: Jan 04, 2020 | 10:47 AM

ಚಾಮರಾಜನಗರ: ಪರಿಸರ ಸೂಕ್ಷ್ಮ ವಲಯದಲ್ಲಿ ಕಾರು ನಿಲ್ಲಿಸಿ ಮದ್ಯದ ಅಮಲಿನಲ್ಲಿ ಶಾಸಕರ ಬೆಂಬಲಿಗರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮ್ಯುಸಿಕ್ ಹಾಕಿಕೊಂಡು ಶಾಸಕರ ಬೆಂಬಲಿಗರು ಡ್ಯಾನ್ಸ್ ಮಾಡಿದ್ದಾರೆ.

ಯಳಂದೂರು ತಾಲೂಕಿನ ಬಿಆರ್​ಟಿ ಟೈಗರ್ ರಿಸರ್ವ್ ಪ್ರದೇಶದಲ್ಲಿ ಕೊಳ್ಳೇಗಾಲದ ಬಿಎಸ್​ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಬೆಂಬಲಿಗರು ನೃತ್ಯ ಮಾಡಿದ್ದಾರೆ. ಶಾಸಕರ ಬೆಂಬಲಿಗರಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಪರಿಸರವಾದಿಗಳು ಮತ್ತು ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.