AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಣ್ಣಗೆ ಮುಳುಗುನೀರು ತಂದಿಟ್ಟಿದ್ದ ರುದ್ರೇಶ್ ದಿಢೀರ್ ಪ್ರತ್ಯಕ್ಷ, ವಿಜಯೇಂದ್ರ ಆಪ್ತ ಮತ್ತೆ ಚಾಮರಾಜನಗರದಲ್ಲಿ ಆಕ್ಟೀವ್

ಸೋಮಣ್ಣ ರೋಷಾವೇಷದ ಮಾತುಗಳನ್ನಾಡಿದರೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತ್ಯಾಪೆ ಹಾಕುವ ಕೆಲಸಕ್ಕೆ ಮುಂದಾಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ರುದ್ರೇಶ್ ಬಾಯ್ತೆರೆದು ಮಾತನಾಡಿದ್ದಾರೆ. ನನ್ನ ಹಾಗೂ ಸೋಮಣ್ಣರ ನಡುವೆ ಏನು ಇಲ್ಲಾ, ಅವರು ನಮ್ಮ ಹಿರಿಯ ನಾಯಕರು. ನಾನೇ ಸೋಮಣ್ಣರ ಬಳಿ ಹೋಗಿ ಮಾತನಾಡಿಕೊಂಡು ಎಲ್ಲವನ್ನ ಬಗೆ ಹರಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Jan 24, 2024 | 6:03 PM

Share

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಬಿಜೆಪಿ ಮೈ ಕೊಡವಿ ನಿಂತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವ ಆತುರದಲ್ಲಿದೆ. ಅದರ ಬೆನ್ನಲ್ಲೇ ಗಡಿನಾಡು ಚಾಮರಾಜನಗರದಲ್ಲಿ ಮತ್ತೆ ಬಿವೈ ವಿಜಯೇಂದ್ರ ಆಪ್ತ ರೀ ಎಂಟ್ರಿ ಕೊಟ್ಟಿದ್ದು ರಾಜಕೀಯ ಪಡಸಾಲೆಯಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ವಿರೋಧಿ ಅಲೆ, 40 ಪರ್ಸೆಂಟ್ ಕಮಿಷನ್ ಆರೋಪದಿಂದ ಬಸವಳಿದ ಬಿಜೆಪಿ ಹೀನಾಯ ಸೋಲನ್ನ ಕಂಡಿತ್ತು. ಕೈ ನಾಯಕರ ಫ್ರೀ ಗ್ಯಾರಂಟಿಯ ಯೋಜನೆಯ ಸುನಾಮಿಗೆ ಜೆಡಿಎಸ್ ಹಾಗೂ ಬಿಜೆಪಿ ಕಂಡು ಕೇಳರಿಯದ ಸೋಲನ್ನ ಕಂಡಿತ್ತು. ಬಿಜೆಪಿಯ ಹಿರಿಯ ಮುತ್ಸದ್ಧಿ ವಿ.ಸೋಮಣ್ಣ ತಮ್ಮ ತವರು ಕ್ಷೇತ್ರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನ ತೊರೆದಿದ್ದರು.

ಸಿಎಂ ಸಿದ್ಧರಾಮಯ್ಯರ ವರುಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತು ಎರಡು ಕಡೆ ಹೀನಾಯ ಸೋಲನ್ನಪ್ಪಿದ್ರು. ಯಾವಾಗ ಸೋಮಣ್ಣ ಚುನಾವಣೆಯಲ್ಲಿ ಸೋತು ಸುಣ್ಣವಾದ್ರೊ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಂಡಿತ್ತು. ಬಹಿರಂಗವಾಗಿಯೇ ಮಾಜಿ ಸಚಿವ ಸೋಮಣ್ಣ ಅವರು ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರರ ವಿರುದ್ದ ಬಂಡಾಯದ ಸಮಯ ಸಾರಿದ್ರು. ಪರೋಕ್ಷವಾಗಿ ಬಿ.ವೈ.ವಿ ಆಪ್ತ ರುದ್ರೇಶ್ ವಿರುದ್ದ ಉರಿದುರಿದು ಬಿದ್ದಿದ್ರು. ತನ್ನ ಸೋಲಿಗೆ ರುದ್ರೇಶ್ ಕಾರಣವೆಂದು ಬಾಯಲ್ಲೆ ಬೆಂಕಿ ಉಗಿಳಿದ್ರು.

ಇದನ್ನೂ ಓದಿ: ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಸೋಮಣ್ಣ ರೋಷಾವೇಷದ ಮಾತುಗಳನ್ನಾಡಿದರೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತ್ಯಾಪೆ ಹಾಕುವ ಕೆಲಸಕ್ಕೆ ಮುಂದಾಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ರುದ್ರೇಶ್ ಬಾಯ್ತೆರೆದು ಮಾತನಾಡಿದ್ದಾರೆ. ಹೌದು ನನ್ನ ಹಾಗೂ ಮಾಜಿ ಸಚಿವ ವಿ.ಸೋಮಣ್ಣರ ನಡುವೆ ಏನು ಇಲ್ಲಾ, ಅವರು ನಮ್ಮ ಹಿರಿಯ ನಾಯಕರು. ಚುನಾವಣೆ ಸಂದರ್ಭದಲ್ಲಿ ನಾನು ಸೋಮಣ್ಣರ ವಿರುದ್ದ ಅಥವಾ ಬಿಜೆಪಿ ಪಕ್ಷದ ವಿರುದ್ದ ಯಾವುದೇ ರೀತಿಯ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನನ್ನ ಮೇಲೆ ಯಾಕೆ ಇಂತಹ ಆರೋಪ ಬರುತ್ತಿದೆ ತಿಳಿದಿಲ್ಲ, ನಾನೇ ಸೋಮಣ್ಣರ ಬಳಿ ಹೋಗಿ ಮಾತನಾಡಿಕೊಂಡು ಎಲ್ಲವನ್ನ ಬಗೆ ಹರಿಸಿಕೊಳ್ಳುತ್ತೇನೆಂದು ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಠಾರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಗಡಿ ನಾಡಿನ ಬಿಜೆಪಿ ಪಾಳಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತಿದ್ದು ಇದು ಪಾರ್ಲಿಮೆಂಟ್ ಎಲೆಕ್ಷನ್ ಮೇಲೆ ಎಷ್ಟು ಪರಿಣಾಮ ಬೀರುತ್ತೆಂಬುದನ್ನ ಕಾದು ನೋಡ್ಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ