AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಖ್ಯಾತ ಹಾಲಿವುಡ್ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್(Mary Millben) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್
ಮೇರಿ Image Credit source: India Today
ನಯನಾ ರಾಜೀವ್
|

Updated on: Jan 19, 2024 | 9:50 AM

Share

ಖ್ಯಾತ ಹಾಲಿವುಡ್ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್(Mary Millben) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

41 ವರ್ಷದ ಮಿಲ್ಬೆನ್ ಪ್ರಧಾನಿ ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿದ್ದಾರೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ, ಅಮೆರಿಕದಲ್ಲಿ ಪ್ರಧಾನಿಗೆ ಸಾಕಷ್ಟು ಬೆಂಬಲವಿದೆ. ಅನೇಕ ಮಂದಿ ಪ್ರಧಾನಿಯನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದ ನೋಡಲು ಬಯಸುತ್ತಾರೆ.

ಜನಗಣಮನ ಹಾಗೂ ಓಂ ಜೈ ಜಗದೀಶ ಹರೇ ಕಾರ್ಯಕ್ರಮದ ಬಳಿಕ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಭಾರತವು 2024ರ ಲೋಕಸಭಾ ಚುನಾವಣೆಯತ್ತ ಸಾಗುತ್ತಿದೆ, ಈ ನವೆಂಬರ್​ನಲ್ಲಿ ಅಮೆರಿಕ ಅಧ್ಯಕ್ಷಈಯ ಚುನಾವಣೆಯತ್ತ ಸಾಗುತ್ತದೆ. ಮೇರಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಬೆಂಬಲಿಸುತ್ತಾರೆ.

ಮತ್ತಷ್ಟು ಓದಿ: Narendra Modi US Visit: ಪ್ರಧಾನಿ ಮೋದಿ ಅಮೆರಿಕ ಭೇಟಿ: ಉಭಯ ದೇಶಗಳ ನಡುವೆ ಹೊಸ ಒಪ್ಪಂದಗಳ ಭರವಸೆ

ಜೂನ್​ನಲ್ಲಿ ಪ್ರಧಾನಿ ಮೋದಿ ಪ್ರವಾಸದ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇರಿ ಜನಗಣಮನ ಹಾಡಿದ್ದರು. ಇದು ರಹಸ್ಯವಲ್ಲ, ನಾನು ಪ್ರಧಾನಿ ಮೋದಿಯ ದೊಡ್ಡ ಬೆಂಬಲಿಗ ಎಂದು ಇಡೀ ಭಾರತಕ್ಕೆ ತಿಳಿದಿದೆ ಮತ್ತು ಅವರು ಭಾರತಕ್ಕೆ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ