ಗುಂಡ್ಲುಪೇಟೆ: ಕಾಂಗ್ರೆಸ್ ಶಾಸಕಗೆ ಸೆಡ್ಡು ಹೊಡೆದ ಬಿಜೆಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ -ಎರಡು ಕಡೆ ಗುದ್ದಲಿ ಪೂಜೆ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಗೋವಿಂದವಾಡಿ ಗ್ರಾ. ಪಂ. ಅಧ್ಯಕ್ಷೆ ಅಡ್ಡಿಪಡಿಸಿದ ಹಿನ್ನೆಲೆ ಗುದ್ದಲಿ ಪೂಜೆ ರಾಜಕೀಯ ತಿರುವು ಪಡೆದಿದ್ದು, ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮ ನಡೆದಿದೆ. ಅಂತೂ ಗ್ರಾ ಪಂ ಕಚೇರಿ ಕಟ್ಟಡ ಭೂಮಿಪೂಜೆ ವಿಚಾರವು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಮುಂದೇನು ತಿರುವು ಪಡೆಯಲಿದೆಯೋ ಕಾದುನೋಡಬೇಕಿದೆ.
ಚಾಮರಾಜನಗರ, ಅಕ್ಟೋಬರ್ 26: ಸ್ಥಳೀಯ ಕಾಂಗ್ರೆಸ್ ಶಾಸಕಗೆ ಸೆಡ್ಡು ಹೊಡೆದ ಬಿಜೆಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗ್ರಾಮ ಪಂಚಾಯ್ತಿಯ ಒಂದೇ ಕಟ್ಟಡಕ್ಕೆ ಎರಡು ಕಡೆ ಗುದ್ದಲಿ ಪೂಜೆ ನೆರವೇರಿಸಿರುವ ಪ್ರಸಂಗ ನಡೆದಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಗೋವಿಂದವಾಡಿಯಲ್ಲಿ ಒಂದು ಕಡೆ (Govindavadi GP) ಗುಂಡ್ಲುಪೇಟೆ ಶಾಸಕ (Gundlupet Congress MLA) ಗಣೇಶ ಪ್ರಸಾದ್ ಗುದ್ದಲಿ ಪೂಜೆ (Foundation Stone) ನೆರವೇರಿಸಿದರೆ, ಅದನ್ನು ಒಪ್ಪದ ಗ್ರಾಮ ಪಂಚಾಯ್ತಿ (Govindavadi BJP Gram Panchayat) ಅಧ್ಯಕ್ಷೆ ನಾಗಲಾಂಬಿಕೆ ಅವರು ಮತ್ತೊಂದು ಕಡೆ ಭೂಮಿ ಪೂಜೆ ಮಾಡಿದ್ದಾರೆ.
ಈ ಹಿಂದೆ ಗೀತಾ ಮಹದೇವಪ್ರಸಾದ್ ಶಾಸಕರಾಗಿದ್ದಾಗ ಭೂಮಿ ಪೂಜೆಯಾಗಿತ್ತು. ಸರ್ಕಾರಿ ಶಾಲೆಯಿಂದ ಒತ್ತುವರಿಯಾಗಿ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಶಿಕ್ಷಣ ಇಲಾಖೆಯು ಒತ್ತುವರಿ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಿಕೊಂಡಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ, ಸ್ಥಳೀಯ ಶಾಸಕ ಗಣೇಶ್ ಪ್ರಸಾದ್ ಅವರು ಈಗ ಅದೇ ಜಾಗದಲ್ಲಿ ಮತ್ತೆ ಭೂಮಿ ಪೂಜೆ ಮಾಡಿದ್ದಾರೆ.
ಆದರೆ ಇದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಡುಗೆ ಮನೆ ಒಡೆದು ಗ್ರಾ ಪಂ ಕಟ್ಟಡ ನಿರ್ಮಿಸುವುದು ಸರಿಯಿಲ್ಲ ಎಂದು ಅಧ್ಯಕ್ಷೆ ನಾಗಲಾಂಬಿಕೆ ಅಡ್ಡಿಪಡಿಸಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯ್ತಿಗೆ ಸೇರಿದ ಮತ್ತೊಂದು ಕಡೆ ಕಟ್ಟಡ ನಿರ್ಮಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಶಾಸಕ ಗಣೇಶ್ ಪ್ರಸಾದ್ ಅವರು ಇದಕ್ಕೆ ಒಪ್ಪದೆ, ಈ ಹಿಂದೆ ಗುರುತಿಸಿದ್ದ ಜಾಗದಲ್ಲೇ ಭೂಮಿ ಪೂಜೆ ಮಾಡಿದ್ದಾರೆ. ಗ್ರಾ. ಪಂ. ಅಧ್ಯಕ್ಷೆ ಅಡ್ಡಿ ಹಿನ್ನೆಲೆ ಗುದ್ದಲಿ ಪೂಜೆ ರಾಜಕೀಯ ತಿರುವು ಪಡೆದಿದ್ದು, ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮ ನಡೆದಿದೆ. ಅಂತೂ ಗ್ರಾ ಪಂ ಕಚೇರಿ ಕಟ್ಟಡ ಭೂಮಿಪೂಜೆ ವಿಚಾರವು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಮುಂದೇನು ತಿರುವು ಪಡೆಯಲಿದೆಯೋ ಕಾದುನೋಡಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ