ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಜನರಿಗೆ ಗುಡ್ ನ್ಯೂಸ್; ಜನವನ ಸಾರಿಗೆ ಮತ್ತೆ ಆರಂಭ
ಅರಣ್ಯದಲ್ಲಿನ ಜನರ ಅನುಕೂಲಕ್ಕಾಗಿ ನಾಲ್ಕು ಮಾರ್ಗಗಳಲ್ಲಿ ಜನವನ ಸಾರಿಗೆ ವಾಹನಗಳು ಸಂಚರಿಸುತ್ತಿತ್ತವೆ. ಈ ವಾಹನಗಳು ಅನಾರೋಗ್ಯ ತುತ್ತಾದವರು, ಶಾಲಾ ಮಕ್ಕಳು ಸೇರಿದಂತೆ ಸ್ಥಳೀಯ ಜನರನ್ನು ನಗರಕ್ಕೆ ಕರೆತರುತ್ತವೆ. ಇದರಿಂದ ಮಾದಪ್ಪನ ಬೆಟ್ಟದ ಜನರಿಗೆ ತಂಬಾ ಅನುಕೂಲವಾಗಿತ್ತು.

ಚಾಮರಾಜನಗರ ಅ.23: ಮಲೆ ಮಹದೇಶ್ವರ (Male Mahadeshwara) ಬೆಟ್ಟದ ಕಾಡಂಚಿನ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜನವನ ಸಾರಿಗೆ ಮತ್ತೇ ಶುರುವಾಗಲಿದೆ. ಅರಣ್ಯ ಇಲಾಖೆಯ (Forest Department) ಇಡಿಸಿ ಬದಲು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದಲೇ ಜನವನ ಸಾರಿಗೆ ಸೌಲಭ್ಯ ಆರಂಭಿಸಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಜನವನ ಸಾರಿಗೆ ಸೇವೆ ಆರಂಭಿಸಿದ್ದರು. ನಂತರ ಇಕೋ ಡೆವಲಪ್ಮೆಂಟ್ ಕಮಿಟಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು.
ನಿರ್ವಹಣೆ ಇಲ್ಲದೆ ಜನವನ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೇ ಜನವನ ಸಾರಿಗೆ ವ್ಯವಸ್ಥೆ ಆರಂಭಿಸುವಂತೆ ಸ್ಥಳೀಯರಿಂದ ಒತ್ತಾಯಿಸಿದ್ದಾರೆ. ಇದೀಗ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಜನವನ ಸೇವೆ ಆರಂಭಿಸಲು ನಿರ್ಧರಿಸಿದೆ. ಕಡಿಮೆ ದರದಲ್ಲಿ ಕಾಡಂಚಿನ ಜನರಿಗೆ ಜನವನ ಸಾರಿಗೆ ಸೌಲಭ್ಯ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!
ಏನಿದು ಜನವನ ಸಾರಿಗೆ
ಅರಣ್ಯದಲ್ಲಿನ ಜನರ ಅನುಕೂಲಕ್ಕಾಗಿ ನಾಲ್ಕು ಮಾರ್ಗಗಳಲ್ಲಿ ಜನವನ ಸಾರಿಗೆ ವಾಹನಗಳು ಸಂಚರಿಸುತ್ತಿತ್ತವೆ. ಈ ವಾಹನಗಳು ಅನಾರೋಗ್ಯ ತುತ್ತಾದವರು, ಶಾಲಾ ಮಕ್ಕಳು ಸೇರಿದಂತೆ ಸ್ಥಳೀಯ ಜನರನ್ನು ನಗರಕ್ಕೆ ಕರೆತರುತ್ತವೆ. ಇದರಿಂದ ಮಾದಪ್ಪನ ಬೆಟ್ಟದ ಜನರಿಗೆ ತಂಬಾ ಅನುಕೂಲವಾಗಿತ್ತು.
ಆದರೆ ನಿರ್ವಹಣೆ ಇಲ್ಲದೆ ವಾಹನಗಳು ನಿಂತುಹೋದ ಮೇಲೆ ಸಾರಿಗೆ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ. ಆರೋಗ್ಯ ಹದಗೆಟ್ಟರೇ ರೋಗಿಯನ್ನು ಡೋಲಿಯಲ್ಲಿ ಹೊತ್ತು ಜನರು ಆಸ್ಪತ್ರೆಗೆ ತರುವಂತಾಗಿದೆ. ಹೀಗಾಗಿ ಶೀಘ್ರದಲ್ಲೇ ಮತ್ತೆ ಜನವನ ಆರಂಭವಾಗಲಿ ಎಂಬುವುದು ಗ್ರಾಮಸ್ಥರ ಒತ್ತಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ