AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಮಲೆ ಮಹದೇಶ್ವರನಿಗೆ ತಟ್ಟಲ್ಲ ಯಾವುದೇ ಗ್ರಹಣ: ಮಾದಪ್ಪನ ರಹಸ್ಯ ತಿಳಿಯಿರಿ!

ಇಂದು ನಭೋ ಮಂಡಲದಲ್ಲಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇದ್ದು, ಈ ಗ್ರಹಣದ ಎಫೆಕ್ಟ್ ದೇವರಿಗೂ ತಟ್ಟಲಿದೆ. ತಿರುಪತಿ, ಮಂತ್ರಾಲಯ, ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ದೇವಾಲಯಗಳು ಬಹುತೇಕ ಮಧ್ಯಾಹ್ನವೇ ಬಂದ್ ಆಗಲಿವೆ. ಆದರೆ, ಈ ಗ್ರಹಣ ಮಾತ್ರ ಮಾದಪ್ಪನಿಗೆ ತಟ್ಟುವುದೇ ಇಲ್ವಂತೆ. ಬರೀ ಈ ಚಂದ್ರಗ್ರಹಣ ಅಷ್ಟೇ ಅಲ್ಲ ಯಾವ ಗ್ರಹಣ ಸಂದರ್ಭದಲ್ಲೂ ಈ ದೇವಾಲಯ ಬಂದ್ ಆಗಲ್ಲ. ಕಾರಣ ಏನು ಅಂತೀರಾ? ಇಲ್ಲಿದೆ ಮಾಹಿತಿ.

ಚಾಮರಾಜನಗರ ಮಲೆ ಮಹದೇಶ್ವರನಿಗೆ ತಟ್ಟಲ್ಲ ಯಾವುದೇ ಗ್ರಹಣ: ಮಾದಪ್ಪನ ರಹಸ್ಯ ತಿಳಿಯಿರಿ!
ಮಲೆ ಮಹದೇಶ್ವರ ಬೆಟ್ಟ
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 07, 2025 | 12:08 PM

Share

ಚಾಮರಾಜನಗರ, ಸೆಪ್ಟೆಂಬರ್​ 07: ಇಂದು ರಣ ರಣ ಕಗ್ರಾಸ ಚಂದ್ರಗ್ರಹಣ (Blood Moon Eclipse). ಈ ಗ್ರಹಣ ಹಿನ್ನಲೆ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಿಗೆ ಬೀಗ ಬೀಳಲಿದೆ. ಆದರೆ ಮಲೆ ಮಹದೇಶ್ವರನಿಗೆ (Male Mahadeshwara) ಮಾತ್ರ ಗ್ರಹಣದ ಕರಿಛಾಯೆ ಮಾತ್ರ ತಟ್ಟಲ್ಲ. ಕೇವಲ ಈ ಚಂದ್ರಗ್ರಹಣ ಅಷ್ಟೇ ಅಲ್ಲ ಯಾವ ಗ್ರಹಣಕ್ಕೂ ಈ ದೇವಾಲಯ ಬಂದ್ ಆಗುವುದಿಲ್ಲ. ಏಕೆ ಬಂದ ಆಗುವುದಿಲ್ಲ ಎಂದು ತಿಳಿಯಲು ಮುಂದೆ ಓದಿ.

ಹುಣ್ಣಿಮೆಯ ದಿನದಂದು ಚೆಂದುಳ್ಳಿ ಚೆಲುವೆ ತರ ಮಿರಮಿರ ಮಿಂಚ ಬೇಕಿದ್ದ ಚಂದಮಾಮ ಗ್ರಹಣ ಹಿನ್ನಲೆ ಕಡುಗೆಂಪು ವರ್ಣಕ್ಕೆ ತಿರುಗಲಿದ್ದಾರೆ. ಈಗಾಗಲೇ ಜ್ಯೋತಿಷಿಗಳು ಗ್ರಹಣದ ಸೈಡ್ ಎಫೆಕ್ಟ್, ಪ್ರಕೃತಿ ವಿಕೋಪ, ಜಲ ಪ್ರಳಯದ ಭವಿಷ್ಯ ನುಡಿಯುತ್ತಿದ್ದರೆ, ರಾಜ್ಯಾದ್ಯಂತ ಪ್ರಮುಖ ದೇವಾಲಯಗಳು ಗ್ರಹಣದ ಎಫೆಕ್ಟ್​ಗೆ ಬಂದ್ ಆಗಲಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಮಲೆ ಮಹದೇಶ್ವರನ ಬೆಟ್ಟದಲ್ಲಿ ಮಾತ್ರ ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿದೆ.

ಮಾದಪ್ಪನಿಗೆ ಏಕೆ ಗ್ರಹಣ ತಟ್ಟಲ್ಲಾ?

ಇನ್ನು ಮಾದಪ್ಪನಿಗೆ ಮಾತ್ರ ಏಕೆ ಈ ಗ್ರಹಣ ತಟ್ಟುವುದಿಲ್ಲ ಅಂತ ನೋಡುವುದಾದರೆ, ಮಾದಪ್ಪ ಶಿವನ ಒಂದು ಅವತಾರ, ಪವಾಡ ಪುರುಷ. ಈತನಿಗೆ ಮುಟ್ಟು-ಮೈಲಿಗೆ ಅನ್ನೋದಿಲ್ಲ, ಹಾಗಾಗಿ ಯಾವುದೇ ಗ್ರಹಣದಲ್ಲೂ ಮಲೆ ಮಹದೇಶ್ವರನ ದರ್ಶನ ಭಾಗ್ಯ ತಪ್ಪುವುದಿಲ್ಲ.

ಇದನ್ನೂ ಓದಿ: Blood Moon Eclipse: ದೇವರ ದರ್ಶನಕ್ಕೂ ‘ಗ್ರಹಣ’! ನಾಳೆ ರಾಜ್ಯದ ಪ್ರಮುಖ ದೇಗುಲಗಳು ಬಂದ್

ಈ ಚಂದ್ರಗ್ರಹಣ ಅಷ್ಟೇ ಅಲ್ಲ ಬೇರೆ ಯಾವ ಗ್ರಹಣಕ್ಕೂ ಮಾದಪ್ಪನ ಬೆಟ್ಟ ಬಂದ್ ಆಗುವುದಿಲ್ಲ. ಹಾಗಾಗಿ ಎಂದಿನಂತೆ ಇಂದು ಕೂಡ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.

ಇದನ್ನೂ ಓದಿ: ರಾಹುಗ್ರಸ್ತ ರಕ್ತ ಚಂದ್ರಗ್ರಹಣ ವಿಶೇಷತೆ ಏನು? ಬರಿಗಣ್ಣಿನಿಂದಲೇ ವೀಕ್ಷಿಸಬಹುದೇ?

ಅದೇನೆ ಹೇಳಿ ಸಾತ್ವಿಕರು ಈ ಗ್ರಹಣದ ಶುಭ-ಅಶುಭ, ಪೂಜೆ-ಪುನಸ್ಕಾರ ಅಂತ ತಲೆ ಕೆಡಿಸಿಕೊಂಡರೆ ಇನ್ನು ಕೆಲವರು ವಿಜ್ಞಾನದ ವೈಪರಿತ್ಯ ವಿಸ್ಮಯ ನೋಡಲು ಕಾದು ಕುಳಿತಿರುವುದು ಮಾತ್ರ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ