ಚಾಮರಾಜನಗರ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ, ಪತಿಯನ್ನ ಬಿಟ್ಟು ಬರುವಂತೆ ಶಾಲಾ ಶಿಕ್ಷಕಿಗೆ ಧಮ್ಕಿ

ಕಳೆದ 7 ವರ್ಷಗಳಿಂದ ಶಾಲಾ ಶಿಕ್ಷಕಿ ಜೊತೆ ಸ್ನೇಹದಿಂದ ಇದ್ದ ಅಬ್ದುಲ್ ಅಸೀಮ್ ಎನ್ನುವಾತ, ಇದೀಗ ಗೆಳತಿಗೆ ಮದುವೆಯಾಗುತ್ತಿದ್ದಂತೆಯೇ ಹೊಸ ವರಸೆ ತೆಗೆದಿದ್ದಾನೆ. ಶಿಕ್ಷಕಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಪತಿಯನ್ನ ಬಿಟ್ಟು ಬರುವಂತೆ ಶಿಕ್ಷಕಿಗೆ ಧಮ್ಕಿ ಹಾಕಿದ್ದು, ಇದರಿಂದ ಬೇಸತ್ತ ಶಿಕ್ಷಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಚಾಮರಾಜನಗರ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ, ಪತಿಯನ್ನ ಬಿಟ್ಟು ಬರುವಂತೆ ಶಾಲಾ ಶಿಕ್ಷಕಿಗೆ ಧಮ್ಕಿ
ಅಬ್ದುಲ್ ಅಸೀಮ್
Edited By:

Updated on: Sep 19, 2023 | 10:46 AM

ಚಾಮರಾಜನಗರ, (ಸೆಪ್ಟೆಂಬರ್ 19): ಶಾಲಾ ಶಿಕ್ಷಕಿಯ(Teacher) ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕುವುದಲ್ಲದೇ 10 ಲಕ್ಷ ರೂಪಾಯಿ ಹಣ ನೀಡದೆ ಇದ್ರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್(blackmail)​ ಮಾಡಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಬ್ದುಲ್ ಅಸೀಮ್ ಹಾಗೂ ಮಯೂರ್  ಎನ್ನುವರ ಶಿಕ್ಷಕಿ ಬಳಿ ಹಣಕ್ಕೆ ಡಿಮ್ಯಾಂಡ್​ ಇಟ್ಟಿದ್ದಲ್ಲದೇ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಪತಿಯನ್ನು ಬಿಟ್ಟು ಬರದಿದ್ದರೆ ಹಿಂದೂ-ಮುಸ್ಲಿಂ ಗಲಾಟೆ ಮಾಡಿಸುವುದಾಗಿ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದ ಶಿಕ್ಷಕಿಗೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಬ್ದುಲ್ ಅಸೀಮ್ ಹಾಗೂ ಮಯೂರ್ ಎಂಬುವವರು ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ. ಅಬ್ಧುಲ್ ಅಸೀಮ್ ಎನ್ನುವಾತ ನೊಂದ ಸಂತ್ರಸ್ಥೆ (ಶಿಕ್ಷಕಿ) ಜೊತೆ ಕಳೆದ 7 ವರ್ಷಗಳಿಂದ ಸ್ನೇಹಿತನಾಗಿದ್ದ. ಆದ್ರೆ, ಶಿಕ್ಷಕಿ ಕಳೆದ 2 ವರ್ಷದ ಹಿಂದೆ ಬೇರೊಬ್ಬನ್ನೊಂದಿಗೆ ವಿವಾಹವಾಗಿದ್ದರು. ವಿವಾಹದ ಬಳಿಕ ಪತಿಯನ್ನ ಬಿಟ್ಟು ನನ್ನ ಜೊತೆ ಬಾ ಎಂದು ದುಂಬಾಲು ಬಿದ್ದಿದ್ದ. ಪತಿಯನ್ನ ಬಿಟ್ಟು ಬರದೆ ಇದ್ದರೆ ನಮ್ಮಿಬ್ಬರ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಕೋಲಾರ: ಒಂಬತ್ತು ಇಂಚು ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಇನ್ನು ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಬಾರದು ಅಂದ್ರೆ 10 ಲಕ್ಷ ರೂ. ಹಣ ನೀಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದಾನೆ. ಇದರಿಂದ ನೊಂದ ಸಂತ್ರಸ್ಥೆ ಶಿಕ್ಷಕಿ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದದಾರೆ.

ಮತ್ತಷ್ಟು ಚಾಮರಾಜನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us