ಕಲ್ಲು ಕ್ವಾರಿ ಲಾರಿ ತಡೆದು ಗ್ರಾಮಸ್ಥರ ಉಗ್ರ ಪ್ರತಿಭಟನೆ! ಜೀವ ಕೈಯಲ್ಲಿ ಹಿಡಿದು ಸಂಚಾರ ನಡೆಸ್ತಿರುವ ವಾಹನ ಸವಾರರು
ಚಾಮರಾಜನಗರ(Chamarajanagar) ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿ ಇಂದು ಜನರು ರೊಚ್ಚಿಗೆದ್ದು ಪ್ರತಿಭಟಿಸಿದ್ದಾರೆ. ಹೌದು, ತಾಲೂಕಿನ ಹುಲ್ಲೇಪರ ಗ್ರಾಮದ ಕೂಗಳತೆ ದೂರದಲ್ಲಿ ಕರಿ ಕಲ್ಲು ಕ್ವಾರಿಯಿದ್ದು, ಇಲ್ಲಿ ಬ್ಲಾಸ್ಟ್ ಮಾಡುವ ಕಲ್ಲುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತದೆ. ಇದರಿಂದ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ, ನ.10: ಚಾಮರಾಜನಗರ(Chamarajanagar) ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿ ಇಂದು ಜನರು ರೊಚ್ಚಿಗೆದ್ದು ಪ್ರತಿಭಟಿಸಿದ್ದಾರೆ. ಹೌದು, ತಾಲೂಕಿನ ಹುಲ್ಲೇಪರ ಗ್ರಾಮದ ಕೂಗಳತೆ ದೂರದಲ್ಲಿ ಕರಿ ಕಲ್ಲು ಕ್ವಾರಿಯಿದ್ದು, ಇಲ್ಲಿ ಬ್ಲಾಸ್ಟ್ ಮಾಡುವ ಕಲ್ಲುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತದೆ. ಓವರ್ ಲೋಡ್ ಹಾಕುವ ಕಾರಣ ರಸ್ತೆಗಳೆಲ್ಲ ಹಾಳಾಗಿದ್ದು, ಮಳೆ ಬಂದಾಗ ರಸ್ತೆ ಕೆರೆಗಳಂತೆ ಪರಿವರ್ತನೆಯಾಗುತ್ತದೆ. ಇದರಿಂದ ರೋಸಿ ಹೋದ ಗ್ರಾಮಸ್ಥರು ಇಂದು ಲಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಕಳೆದ ಎಂಟತ್ತು ವರ್ಷಗಳಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಮಳೆ ಬಂದಾಗ ವಾಹನಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅದರಲ್ಲೂ ಬೈಕ್ ಸವಾರರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಇಂದು ರೊಚ್ಚಿಗೆದ್ದ ಗ್ರಾಮಸ್ಥರು, ಉಗ್ರ ಹೋರಾಟವನ್ನು ನಡೆಸಿ ಕ್ವಾರಿ ಮಾಲೀಕರಿಗೆ ಬಿಸಿ ಮುಟ್ಟಿಸಿದರು. ಅಷ್ಟೇ ಅಲ್ಲ, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಮನವಿ ಕೂಡ ಮಾಡಿದ್ದಾರೆ. ಇದೇ ರೀತಿ ಓವರ್ ಲೋಡ್ ಹಾಕಿಕೊಂಡು ಲಾರಿಗಳು ಸಂಚಾರ ನಡೆಸಿದ್ರೆ, ಮುಂದಿನ ದಿನಗಳಲ್ಲಿ ಗಣಿ ಮಾಲೀಕರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ: ಕಲ್ಲು ಕ್ವಾರಿ ಮಾಫಿಯಾಕ್ಕೆ ಬಲಿಯಾದ್ರಾ ಪ್ರತಿಮಾ?
ಇನ್ನು ಇದು ಈ ಜಿಲ್ಲೆಯ ಕಥೆ ಒಂದೇ ಅಲ್ಲ, ಚಿಕ್ಕಬಳ್ಳಾಪುರದಲ್ಲೂ ಇಂತಹುದೇ ಸಮಸ್ಯೆ ಎದುರಾಗಿದೆ. ಈ ಹಿನ್ನಲೆ ಎಚ್ಚೆತ್ತ ಶಾಸಕರು 40 ಕ್ಕೂ ಹೆಚ್ಚು ಕ್ವಾರಿಗಳನ್ನು ಮುಚ್ಚಿಸಿದ್ದರು. ಅದೇನೆ ಹೇಳಿ ಇಂದು ಗ್ರಾಮಸ್ಥರು ಗಣಿ ಮಾಲೀಕರಿಗೆ ತಕ್ಕ ಶಾಸ್ತಿ ಮಾಡಿದ್ದು, ರಸ್ತೆ ಸರಿಪಡಿಹುವಂತೆ ಆಗ್ರಹಿಸಿದ್ದಾರೆ. ಗ್ರಾಮಸ್ಥರು ಹಾಗೂ ರೈತರ ಎಚ್ಚರಿಕೆಗೆ ಗಣಿ ಮಾಲೀಕರು ಕಂಗಾಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ