ಚಾಮರಾಜನಗರ: ಮತ್ತೊಂದು ಆನೆಯ ಕಳೇಬರ ಪತ್ತೆ; ಅರಣ್ಯಾಧಿಕಾರಿಗಳಲ್ಲಿ ಮೂಡಿದ ಅನುಮಾನ

ನಿನ್ನೆ(ಆ.31) ತಾನೆ ಯಳಂದೂರು ಹಾಗೂ ಬೈಲೂರು ವ್ಯಾಪ್ತಿಯಲ್ಲಿ ಎರಡು ಆನೆಗಳ ಕಳೇಬರ ಪತ್ತೆಯಾಗಿತ್ತು. ಇಂದು ಮತ್ತೊಂದು ಹೆಣ್ಣಾನೆಯ ಕಳೇಬರಹ ಬೈಲೂರು ವಲಯದ ಮಾವತ್ತೂರಿನಲ್ಲಿ ಗಸ್ತಿ​ನಲ್ಲಿರುವಾಗ ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳಲ್ಲಿ ಅನುಮಾನ ಮೂಡಿದೆ.

ಚಾಮರಾಜನಗರ: ಮತ್ತೊಂದು ಆನೆಯ ಕಳೇಬರ ಪತ್ತೆ; ಅರಣ್ಯಾಧಿಕಾರಿಗಳಲ್ಲಿ ಮೂಡಿದ ಅನುಮಾನ
ಚಾಮರಾಜನಗರ: ಮತ್ತೊಂದು ಆನೆಯ ಕಳೇಬರ ಪತ್ತೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 01, 2024 | 2:38 PM

ಚಾಮರಾಜನಗರ, ಸೆ.01: ಚಾಮರಾಜನಗರ(Chamarajanagar) ತಾಲೂಕಿನ ಬೈಲೂರು ವಲಯದ ಮಾವತ್ತೂರಿನಲ್ಲಿ ಗಸ್ತಿ​ನಲ್ಲಿರುವಾಗ ಇಂದು (ಭಾನುವಾರ) ಮತ್ತೊಂದು ಆನೆಯ ಕಳೇಬರ ಪತ್ತೆಯಾಗಿದೆ. ಸುಮಾರು 61 ವರ್ಷದ ಹೆಣ್ಣು ಆನೆಯ ಕಳೇಬರ ಇದಾಗಿದೆ. ನಿನ್ನೆ(ಆ.31) ತಾನೆ ಯಳಂದೂರು ಹಾಗೂ ಬೈಲೂರು ವ್ಯಾಪ್ತಿಯಲ್ಲಿ ಎರೆಡು ಆನೆಗಳ ಕಳೇಬರ ಪತ್ತೆಯಾಗಿತ್ತು. ಇಂದು ಮತ್ತೊಂದು ಹೆಣ್ಣಾನೆಯ ಕಳೇಬರಹ ಪತ್ತೆ ಹಿನ್ನಲೆ ಅರಣ್ಯಾಧಿಕಾರಿಗಳಲ್ಲಿ ಅನುಮಾನ ಮೂಡಿದೆ.

ಕಳೆದ ಬೇಸಿಗೆ ವೇಳೆ ಕಾಡಿನಲ್ಲಿ ಕೆರೆ, ಕಟ್ಟೆಗಳೆಲ್ಲಿ ನೀರು ಬತ್ತಿ ಹೋಗಿತ್ತು. ತೀವ್ರ ಬರ ಹಿನ್ನಲೆ ಕುಡಿಯಲು ನೀರಿಲ್ಲದೆ ಆನೆಗಳು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆನೆಯು ಸ್ವಾಭಾವಿಕವಾಗಿ 7 ರಿಂದ 8 ದಿನಗಳ ಹಿಂದೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

ಇದನ್ನೂ ಓದಿ:ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ‌ ಸಾವಿನ ಬಗ್ಗೆ ಹೈಕೋರ್ಟ್ ಕಳವಳ: ಪಿಐಎಲ್​ ದಾಖಲು, ಎಸ್ಕಾಂಗಳಿಗೆ ನೋಟಿಸ್

ಇನ್ನು ಆನೆ ಕಳೇಬರ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರರು ಕಿಡಿಕಾರಿದ್ದಾರೆ. ಇಂದು ಮತ್ತೊಂದು ಆನೆ ಅಸುನೀಗಿರುವ ಮಾಹಿತಿ ಪರಿಸರ ಪ್ರೇಮಿಗಳಲ್ಲಿ ಆತಂಕ‌ ತರಿಸಿದೆ. ಒಂದೇ ವಾರದಲ್ಲಿ ಮೂರು ಆನೆಗಳ ಮೃತಪಟ್ಟಿದ್ದರ ಬಗ್ಗೆ ಅರಣ್ಯ ಇಲಾಖೆಗೂ ಅನುಮಾನ ಮೂಡಿದ್ದು, ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಕಾದುನೋಡಬೇಕಿದೆ. ಇನ್ನು ಬೈಲೂರು ವಲಯದ ಆಳದ ಕೆರೆ ಬಳಿ 45 ರಿಂದ 50 ವರ್ಷದ ಗಂಡಾನೆ ಕಳೇಬರ ಹಾಗೂ ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ