ಚಾಮರಾಜನಗರ: ಕೊನೆಗೂ ಖಾಕಿ ತೊಡಿದ ಖೆಡ್ಡಾಗೆ ಬಿದ್ದ ನಟೋರಿಯಸ್ ಜಾನುವಾರು ಕಳ್ಳರು
ಚಾಮರಾಜನಗರ ಜಿಲ್ಲೆಯಲ್ಲಿ ದನಕರುಗಳು ಹಾಗೂ ಕುರಿಗಳನ್ನ ಕಳುವು ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಕೊನೆಗೂ ಖಾಕಿ ತೊಡಿದ ಖೆಡ್ಡಾಗೆ ಬಿದ್ದಿದೆ. ಇಂದು (ಜೂ.26) ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಫೈರೋಜ್ ಪಾಷ, ಸಾದಿಕ್ ಪಾಷ, ಹಾಗೂ ಸಬೀರ್ ಎಂಬ ಆರೋಪಿಗಳನ್ನು ಕೊಳ್ಳೇಗಾಲದ ಡಿವೈಎಸ್ಪಿ ಅಪರಾಧ ಪತ್ತೆದಳದಿಂದ ಬಂಧಿಸಲಾಗಿದೆ.
ಚಾಮರಾಜನಗರ, ಜೂ.26: ಜಿಲ್ಲೆಯ ಕೊಳ್ಳೇಗಾಲ(Kollegala) ಹಾಗೂ ಹನೂರು ಭಾಗದಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು, ಈ ಕುರಿತು ಅನೇಕ ದೂರುಗಳು ದಾಖಲಾಗಿದ್ದವು. ಇದೀಗ ದನಕರುಗಳು ಹಾಗೂ ಕುರಿಗಳನ್ನ ಕಳುವು ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಕೊನೆಗೂ ಖಾಕಿ ತೊಡಿದ ಖೆಡ್ಡಾಗೆ ಬಿದ್ದಿದೆ. ಇಂದು(ಜೂ.26) ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಫೈರೋಜ್ ಪಾಷ, ಸಾದಿಕ್ ಪಾಷ, ಹಾಗೂ ಸಬೀರ್ ಎಂಬ ಆರೋಪಿಗಳನ್ನು ಕೊಳ್ಳೇಗಾಲದ ಡಿವೈಎಸ್ಪಿ ಅಪರಾಧ ಪತ್ತೆದಳದಿಂದ ಬಂಧಿಸಲಾಗಿದೆ.
ಬೊಲೆರೊ ಪಿಕಪ್ ವಾಹನಗಳನ್ನ ಟಾರ್ಗೆಟ್ ಮಾಡಿ ಕಳ್ಳತನ
ಇನ್ನು ಬಂಧಿತರ ವಿಚಾರಣೆ ವೇಳೆ ಕೇವಲ ಜಾನುವಾರು ಕಳ್ಳತನವಷ್ಟೇ ಅಲ್ಲದೆ ವಾಹನ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಬೊಲೆರೊ ಪಿಕಪ್ ವಾಹನಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದ ಆರೋಪಿಗಳು, ಕದ್ದ ವಾಹನದಲ್ಲೇ ಕುರಿ ಹಾಗೂ ಹಸುಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಡಿವೈಎಸ್ ಪಿ ಅಪರಾಧ ಪತ್ತೆದಳದವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 3 ಬೊಲೆರೋ ಪಿಕಪ್ ವಾಹನ, 1 ಪಲ್ಸರ್ ಬೈಕ್, 1 ಅಪಾಚಿ ಬೈಕ್, 2 ಹಸುಗಳು ಹಾಗೂ 15 ಸಾವಿರ ನಗದು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿದ ಖಾಕಿ ಪಡೆ, ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ
ಒಂದೇ ದಿನ ನಾಲ್ಕು ಲಾಡ್ಜ್ಗಳಲ್ಲಿ ಲೆಡ್ಜರ್ ಕಳ್ಳತನ
ಚಿಕ್ಕಮಗಳೂರು: ಶೃಂಗೇರಿಯಲ್ಲಿ ಒಂದೇ ದಿನ ನಾಲ್ಕು ಲಾಡ್ಜ್ಗಳಲ್ಲಿ ಲೆಡ್ಜರ್ ಕಳ್ಳತನವಾಗಿದ್ದು, ಅನುಮಾನ ಮೂಡಿಸಿದೆ. ಜೂನ್ 23 ರಂದು ಒಂದೇ ದಿನ ನಾಲ್ಕು ಲಾಡ್ಜ್ಗಳಲ್ಲಿ ಲೆಡ್ಜರ್ ಕಳ್ಳತನ ನಡೆದಿದ್ದು, ಸಿಸಿಕ್ಯಾಮೆರಾದಲ್ಲಿ ಕಳ್ಳತನ ದೃಶ್ಯ ಸೆರೆಯಾಗಿದೆ. ಗ್ರಾಹಕರ ಮಾಹಿತಿ ಒಳಗೊಂಡಿದ್ದ ಲೆಡ್ಜರ್ ಇದಾಗಿದ್ದು, ಉದ್ದೇಶಪೂರ್ವಕವಾಗಿ ಬುಕ್ ಅನ್ನು ಮಾತ್ರ ಹೊತ್ತೊಯ್ದಿದ್ದಾರೆ. ಯಾವುದಾದರೂ ಕ್ರೈಂ ಹಿಸ್ಟರಿ ಮುಚ್ಚಿ ಹಾಕುವ ಉದ್ದೇಶವೇ? ಅಥವಾ ಸೈಬರ್ ಸ್ಕ್ಯಾಮ್ ಗೆ ಡಾಟಾ ದುರ್ಬಳಕೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಇದೀಗ ಪೊಲೀಸರು ತನಿಖೆ ಶುರುಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Wed, 26 June 24