ನೆಲಮಂಗಲ: ಭಜರಂಗದಳ ಕಾರ್ಯಕರ್ತರಿಂದ ಜಾನುವಾರುಗಳ ರಕ್ಷಣೆ
ಭಜರಂಗದಳದವರು ಬೊಲೆರೊ ಅಡ್ಡಗಟ್ಟಿ ವಾಹನ ಜಪ್ತಿ ಮಾಡಿದಾಗ ಜಾನುವಾರುಗಳ ಜೊತೆ ಚಾಕು, ರಾಡ್ ಪತ್ತೆಯಾಗಿದೆ. ಇನ್ನು ರಕ್ಷಣೆ ಮಾಡಿದ 5ಹಸು, 1ಎಮ್ಮೆ, 2ಕರುವನ್ನು ದಾಬಸ್ ಪೇಟೆ ಗೋಶಾಲೆಗೆ ರವಾನೆ ಮಾಡಲಾಗಿದೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಭಜರಂಗದಳ(Bajarang Dal)ಕಾರ್ಯಕರ್ತರು ರಕ್ಷಣೆ ಮಾಡಿ ಬೊಲೆರೊ ಸಮೇತ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ಟೌನ್ ಬಳಿ ನಡೆದಿದೆ. ಹೌದು, ಭಜರಂಗದಳದವರು ಬೊಲೆರೊ ವಾಹನ ಅಡ್ಡಗಟ್ಟುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಬಳಿಕ ವಾಹನ ಜಪ್ತಿ ಮಾಡಿದಾಗ ಜಾನುವಾರುಗಳ ಜೊತೆ ಚಾಕು, ರಾಡ್ ಪತ್ತೆಯಾಗಿದೆ. ಇನ್ನು ರಕ್ಷಣೆ ಮಾಡಿದ 5ಹಸು, 1ಎಮ್ಮೆ, 2ಕರುವನ್ನು ದಾಬಸ್ ಪೇಟೆ ಗೋಶಾಲೆಗೆ ರವಾನೆ ಮಾಡಲಾಗಿದೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನೆಲಮಂಗಲ ಪೊಲೀಸರಿಂದ ಟೆಂಪೋ ಕಳ್ಳನ ಬಂಧನ
ಬೆಂಗಳೂರು ಗ್ರಾಮಾಂತರ: ಟೆಂಪೋ ಕಳ್ಳತನ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನ ಭಕ್ತನಪಾಳ್ಯ ಗ್ರಾಮದ ಇಮ್ರಾನ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಅರೋಪಿಯಿಂದ 4ಲಕ್ಷ ಬೆಲೆಬಾಳುವ 2ಟೆಂಪೋ ಜಪ್ತಿ ಮಾಡಲಾಗಿದೆ. ಶಶಿಕುಮಾರ್ ಅವರಿಗೆ ಸೇರಿದ ಟೆಂಪೋವನ್ನು ತಿಂಗಳಿಗೆ ಅಧಿಕ ಬಾಡಿಗೆ ಕೊಡುವುದಾಗಿ ನಂಬಿಸಿ ಅರೋಪಿ ವಂಚಿಸಿದ್ದ. ಪೀಣ್ಯಾ ಹಾಗೂ ತುಮಕೂರಿನಲ್ಲಿ ತಲಾ ಒಂದರಂತೆ ಡಾಕ್ಯುಮೆಂಟ್ ಕೊಡುವುದಾಗಿ ಹೇಳಿ ಮಾರಾಟ ಕೂಡ ಮಾಡಿದ್ದ. ಇನ್ನು ಮಾಲೀಕ ಬಾಡಿಗೆ ಸಲುವಾಗಿ ಪೋನ್ ಮಾಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಗದಗ: ಜಾನುವಾರು ತೊಳೆಯಲು ಹೋಗಿ ಹೊಂಡದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆ
ಕ್ಷುಲ್ಲಕ ಕಾರಣಕ್ಕೆ ಕತ್ತು ಹಿಸುಕಿ ಪತ್ನಿಯನ್ನೆ ಕೊಂದ ಪತಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ. ಪತ್ನಿ ರೂಪಾ(35) ಮೃತ ರ್ದುದೈವಿ. ಇನ್ನು ಕೊಲೆ ಮಾಡಿದ ಪತಿ ಪುರುಷೋತ್ತಮ್(40), ಮೂಲತಃ ಯಳಂದೂರು ಕೆಸ್ತೂರು ಗ್ರಾಮದ ನಿವಾಸಿ. ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜೊತೆ ವಿವಾಹವಾಗಿತ್ತು. ಗಂಡ-ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಆಗಾಗ ಗಲಾಟೆ ಆಗುತ್ತಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪುರುಷೋತ್ತಮ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 am, Fri, 22 September 23