ಮಹಿಳೆ ಸಾವು: ಲಿವಿಂಗ್ ಟುಗೆದರ್​​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಿ ಮುಜುಗರಕ್ಕೀಡಾದ ಪೊಲೀಸ್ರು, ಏನಿದು ಕೇಸ್?

ಒಂದು ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸದೇ ಬೇಕಾಬಿಟ್ಟಿ ಮಾಡಿದರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಈ ಪ್ರಕರಣ ಒಂದು ಉದಾಹರಣೆಯಾಗಿದೆ. ಪ್ರಿಯತಮೆಯನ್ನ ಪ್ರಿಯಕರನೇ ಕೊಲೆ ಮಾಡಿದ್ದಾಗಿ ಬಂಧಿಸಿದ್ದ ಪೊಲೀಸರು, ಸರಿಯಾದ ಸಾಕ್ಷಿಗಳನ್ನ ಕಲೆಹಾಕದೇ ಮುಜುರಕ್ಕೀಡಾಗಿದ್ದಾರೆ. ಪೊಲೀಸರು ಬಂಧಿಸಿದ್ದ ಆರೋಪಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ. ಇದರಿಂದ ಪೊಲೀಸರ ಶೇಪ್ ಔಟ್ ಆಗಿದೆ. ಹಾಗಾದ್ರೆ, ಏನಿದು ಮರ್ಡರ್ ಕೇಸ್? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮಹಿಳೆ ಸಾವು: ಲಿವಿಂಗ್ ಟುಗೆದರ್​​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಿ ಮುಜುಗರಕ್ಕೀಡಾದ ಪೊಲೀಸ್ರು, ಏನಿದು ಕೇಸ್?
Kollegal Police
Edited By:

Updated on: Apr 19, 2026 | 9:03 PM

ಚಾಮರಾಜನಗರ, (ಏಪ್ರಿಲ್ 19): 2023ರ ಡಿಸೆಂಬರ್ 16ರಂದು ಚಾಮರಾಜನಗರ (Chamaranagar) ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದಿಂದ ಪಟ್ಟಣದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಅಗರ ಮಾಂಬಳ್ಳಿಯ ರೇಖಾ ಎಂದು ಗುರುತು ಪತ್ತೆ ಮಾಡಿದ್ದರು. ಆದ್ರೆ, ಪೊಲೀಸರು ಸರಿಯಾಗಿ ತನಿಖೆ ನಡೆಸದೆ ರೇಖಾಳ ಜೊತೆ ಲೀವಿಂಗ್ ಟು ಗೆದರ್ ನಲ್ಲಿದ್ದ ನಾಗೇಶ್​ ಎನ್ನುವರನ್ನ ಬಂಧಿಸಿ ಬಳಿಕ ಕೋರ್ಟ್​ ಮುಂದೆ ಹಾಜರು ಪಡಿಸಿದ್ದು, ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಆದ್ರೆ, ಸರಿಯಾದ ಸಾಕ್ಷಿಗಳನ್ನ ಕಲೆಹಾಕುವಲ್ಲಿ ಪೊಲೀಸರು ಎಡವಿದ್ದು, ಬಂಧಿತ ನಾಗೇಂದ್ರನನ್ನು ಇದೀಗ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ  ಬಿಡುಗಡೆಗೆ ಆದೇಶಿಸಿದೆ.  ಇದರೊಂದಿಗೆ ಒಂದು ಕೊಲೆ ಪ್ರಕರಣದಲ್ಲಿ ಎವಿಡೆನ್ಸ್ ಕಲೆಹಾಕುವಲ್ಲಿ ವಿಫಲರಾಗಿದ್ದು, ಎಲ್ಲಾ ಲೋಪ್ ಪೋಲ್ ನಿಂದ ಚಾಮರಾಜನಗರ ಪೊಲೀಸರ ಶೇಪ್ ಔಟ್ ಆದಂತಾಗಿದೆ.

ರೇಖಾಳಿಗೆ ಈಗಾಲೇ ಮದುವೆಯಾಗಿದ್ದು, ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ರೇಖಾ ಮಗಳ ಜೊತೆ ಆದರ್ಶನಗರದಲ್ಲಿ ವಾಸವಿದ್ದಳು. ಈ ವೇಳೆ ನಾಗೇಂದ್ರ ಅಲಿಯಾಸ್ ಆನಂದ ಎಂಬ ಲೈನ್ ಮ್ಯಾನ್ ಜೊತೆ ಪರಿಚಯವಾಗಿ ಇಬ್ಬರೂ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿದ್ದರು. ಹಾಗಾಗಿ ಈಕೆಯನ್ನ ಪ್ರಿಯತಮ ನಾಗೇಂದ್ರನೆ ಕೊಂದಿರಬೇಕೆಂದು ಶಂಕಿಸಿ ಬಂಧಿಸಲಾಗಿತ್ತು. ಈಗ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು ಕೊಲೆ ಪ್ರಕರಣದ ಆರೋಪಿ ನಾಗೇಂದ್ರನನ್ನ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ: ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನಿಗೆ ವಿಶಿಷ್ಟ ಶಿಕ್ಷೆ ವಿಧಿಸಿದ ಕೋರ್ಟ್: ಏನದು?

ಪ್ರಕರಣದ ಹಿನ್ನೆಲೆ

2023ರ ಡಿಸೆಂಬರ್ 16ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದಿಂದ ಪಟ್ಟಣದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರೇಖಾ ಎನ್ನುವ ಮಹಿಳೆ ಮೃತದೇಹ ಪತ್ತೆಯಾಗಿತ್ತು. ರೇಖಾಳ ಪುತ್ರಿ ಸ್ಕೂಲ್ ಬರುತ್ತಿಲ್ಲವೆಂದು ವಿಚಾರಿಸಲು ಶಿಕ್ಷಕರೊಬ್ಬರು ಮನೆಗೆ ಬಂದು ನೋಡಿದಾಗ ರೇಖಾ ಮೃತದೇಹ ಪತ್ತೆಯಾಗಿತ್ತು. ಬಳಿಕ ಶಿಕ್ಷಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದ್ರೆ, ಮಹಿಳೆಯ ಶವ ಪೂರ್ತಿ ಕೊಳೆತು ಹೋಗಿದ್ದರಿಂದ  ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಗೊತ್ತಾಗಿಲ್ಲ. ಇದರಿಂದ ತಲೆಕೆಡಿಸಿಕೊಂಡ ಪೊಲೀಸರು, ಬಳಿಕ ರೇಖಾಳ ಜೊತೆ ಸಂಬಂದ ಹೊಂದಿದ್ದ ನಾಗೇಂದ್ರನನ್ನು ಬಂಧಿಸಿದ್ದರು.

ರೇಖಾ ಸಾವಿನ ಹಿಂದೆ ಹಲವು ಗೊಂದಲ

ರೇಖಾ ಸಾವಿನ ಹಿಂದೆ ಹಲವು ಗೊಂದಗಳು ಉದ್ಭವಿಸಿವೆ. ಯಾಕಂದ್ರೆ, ರೇಖಾ ಸಾಯುವ ಎರಡೂ ದಿನ ಮುನ್ನವೇ ತನ್ನ ಹೆತ್ತ ಮಗಳನ್ನ ಸಾಂತ್ವಾನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಳು. ಅಲ್ಲದೇ ರೇಖಾ ಕಾಯಿಲೆ ಸಂಬಂಧ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಅಂದು  ಮೃತದೇಹದ ಪಕ್ಕದಲ್ಲೇ ಆ ಮಾತ್ರೆ ಪತ್ತೆಯಾಗಿತ್ತು. ಇದನ್ನೇ ನಾಗೇಂದ್ರ ಪರ ವಕೀಲ ಕೋರ್ಟ್​​​ ಗಮನಕ್ಕೆ ತಂದಿದ್ದು, ಆ ಮಾತ್ರೆಯಿಂದಲೇ ರಿಯಾಕ್ಷನ್ ಆಗಿ ರೇಖಾ ಸಾವನ್ನಪ್ಪಿರುಬಹದು ಎಂದು ವಾದಿಸಿದ್ದರು. ಹೀಗಾಗಿ ಪೊಲೀಸರು, ಈ ಪ್ರಕರಣದಲ್ಲಿ ಸರಿಯಾದ ಸಾಕ್ಷಿಗಳನ್ನ ಕಲೆಹಾಕದೇ ಬೇಕಾಬಿಟ್ಟಿ ಚಾರ್ಜ್ ಶೀಟ್ ಸಲ್ಲಿಸಿದ್ದರಿಂದ ನಾಗೇಂದ್ರನನ್ನು ಕೋರ್ಟ್ ಖುಲಾಸೆಗೊಳಿಸಿದೆ. ಹೀಗೆ ರೇಖಾ ಸಾವಿನ ಪ್ರಕರಣದಲ್ಲಿ ಹಲವು ಗೊಂದಲಗಳು ಉದ್ಭವಿಸಿದ್ದು, ಇದೊಂದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದೇ ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ.

ಇನ್ನು ಒಂದು ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಯಾರ ಮೇಲೆ ಅನುಮಾನ ಇದೆಯೋ ಆತನನ್ನ ಸರಿಯಾಗಿ ವಿಚಾರಣೆ ನಡೆಸದೆ ಬೇಕಾ ಬಿಟ್ಟಿಯಾಗಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರೆ ಸಮಾಜದ ಮುಂದೆ ಯಾವ ರೀತಿ ಮುಜುಗರಕ್ಕೆ ಒಳಗಾಗಬೇಕಾಗುತ್ತೆ ಎನ್ನುವುದಕ್ಕೆ ಈ ಪ್ರಕರಣವೇ ಒಂದು ಸೂಕ್ತ ಉದಾಹಣೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us