AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ

ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸಾಮಾನ್ಯ ಕಹಿಯಾದ ಬೇವಿನ ಮರವೊಂದು ಸಿಹಿ ದ್ರಾವಣ ಹರಿಸುತ್ತಿದೆ. ಈ ಅಚ್ಚರಿಯ ಘಟನೆ ಇಡೀ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಗ್ರಾಮಸ್ಥರು ಇದನ್ನು ಪವಾಡವೆಂದು ಭಾವಿಸಿದ್ದಾರೆ. ಈ ಸಿಹಿ ದ್ರವದ ಹಿಂದಿನ ಕಾರಣವನ್ನು ತಿಳಿಯಲು ಸಸ್ಯಶಾಸ್ತ್ರಜ್ಞರ ಪರೀಕ್ಷೆ ಅಗತ್ಯವಿದೆ. ಇದು ವಿಜ್ಞಾನಿಗಳಿಗೆ ಒಂದು ಸವಾಲಾಗಿದೆ.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ
ಸಿಹಿ ಬೇವಿನ ಮರ ಹನೂರುImage Credit source: Tv9 kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Feb 03, 2026 | 8:56 PM

Share

ಚಾಮರಾಜನಗರ, ಫೆ.3: ಬೇವಿನ ಮರ ಕಹಿಯಾಗಿರುವುದನ್ನು ಕೇಳಿರಬಹುದು, ಆದರೆ ಯಾವತ್ತಾದರೂ ಸಿಹಿಯಾಗಿರುವುದನ್ನು ಕೇಳಿದ್ದೀರಾ? ಆದರೆ ಈ ಗ್ರಾಮದಲ್ಲಿ ಒಂದು ಅಚ್ಚರಿಯೇ ನಡೆದಿದೆ. ಇದೀಗ ಈ ಘಟನೆಗೆ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರವೊಂದು ಸಿಹಿ ದ್ರಾವಣವನ್ನು ಹರಿಸುವ ಮೂಲಕ ಭಾರಿ ಅಚ್ಚರಿ ಮೂಡಿಸಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿ ಸಿದ್ದ ಎಂಬುವವರ ಜಮೀನಿನಲ್ಲಿ ಈ ಬೇವಿನ ಮರವಿದೆ. ಸಾಮಾನ್ಯವಾಗಿ ಕಹಿಯಾಗಿರುವ ಬೇವಿನ ಮರದ ರೆಂಬೆ (Sweet Neem Tree )ಕೊಂಬೆಗಳಿಂದ ಬಿಳಿ ಬಣ್ಣದ ದ್ರಾವಣ ಬರುತ್ತಿದೆ. ಈ ದ್ರಾವಣವು ಬೆಲ್ಲದ ಪಾಕ ಅಥವಾ ಸಕ್ಕರೆಯಂತೆ ಸಿಹಿಯಾಗಿದೆ ಎಂದು ಅದನ್ನು ಸೇವಿಸಿದ ಗ್ರಾಮಸ್ಥರು ತಿಳಿಸಿದ್ದಾರೆ. ಮರದಿಂದ ಜಿನಗುತ್ತಿರುವ ಈ ಸಿಹಿ ದ್ರವವನ್ನು ಕಂಡ ಗ್ರಾಮಸ್ಥರು ಇದೊಂದು ಪವಾಡ ಎಂದು ನಂಬಿದ್ದಾರೆ.

ಇನ್ನು ಮರದ ಬುಡದ ಬಳಿ ಬಂದು ಸೇರುತ್ತಿರುವ ಈ ದ್ರಾವಣವನ್ನು ನೋಡಲು ಮತ್ತು ರುಚಿ ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ. ಬೇವಿನ ಮರದಿಂದ ಬಿಳಿ ದ್ರವ ಬರುವುದು ಸಾಮಾನ್ಯವಾದರೂ, ಅದು ಸಿಹಿಯಾಗಿರುವುದು ಇದೊಂದು ವಿಚಿತ್ರ ಘಟನೆಯಾಗಿದೆ. ಈ ದ್ರಾವಣವು ಯಾವ ರಾಸಾಯನಿಕ ಬದಲಾವಣೆಯಿಂದ ಸಿಹಿಯಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸಸ್ಯ ಶಾಸ್ತ್ರಜ್ಞರು ಅಥವಾ ರಸಾಯನಶಾಸ್ತ್ರಜ್ಞರು ಈ ದ್ರಾವಣವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ ನಂತರವಷ್ಟೇ ಇದರ ಹಿಂದಿನ ಅಸಲಿ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಇನ್ನು ಸಾಮಾನ್ಯವಾಗಿ ಬೇವಿನ ಮರ ಕಹಿಯಿಂದ ಕೂಡಿರುತ್ತೆ ಬೇವಿನ ಎಲೆ ಬೇವಿನ ಕಾಯಿ ಕಹಿಯಾಗಿರುತ್ತೆ ಆದ್ರೆ ಈ ಬೇವಿನ ಮರದಲ್ಲಿ ಮಾತ್ರ ಹೇಗೆ ಸಿಹಿ ದ್ರಾವಣ ಬರುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ದೇಶದ ಹಲವೆಡೆ ಬೇವಿನ ಮರದಿಂದ ನೀರು ಬರುವುದು ಬಿಳಿ ದ್ರವ ಬರುವುದು ಕಂಡಿದ್ದೇವೆ, ಕೇಳಿದ್ದೇವೆ ಆದ್ರೆ ಈ ರೀತಿ ಸಿಹಿಯಾಗಿರುವುದು ಇದೆ ಮೊದಲಾಗಿದೆ. ಯಾವ ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಸಿಹಿ ದ್ರವ್ಯ ಸೃಷ್ಠಿಯಾಗ್ತಾಯಿದೆ ಅನ್ನೋದೆ ನಿಜಕ್ಕೂ ಅಚ್ಚರಿಗಾಗಿದೆ ಎಂದು ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಜಮೀನಿನ ಮಾಲೀಕ ಮುನಿ ಸಿದ್ದ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​