ಗುಂಡ್ಲುಪೇಟೆ ರಸ್ತೆಯಲ್ಲಿ ನೂರೆಂಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ ಅಪಘಾತದ ವಿಡಿಯೋ
Chamarajanagar Police: ಲಾರಿ ಹರಿದಿದ್ರೆ ವ್ಯಕ್ತಿಯ ದೇಹ ನಜ್ಜುಗುಜ್ಜಾಗಬೇಕಿತ್ತು. ಆದ್ರೆ ಕೇವಲ ಮರ್ಮಾಂಗಕ್ಕೆ ಮಾತ್ರ ಪೆಟ್ಟಾಗಿರುವುದು ಹೇಗೆ ಎಂಬುದು ದಲಿತ ಮುಖಂಡರ ಪ್ರಶ್ನೆಯಾಗಿದೆ. ಕೊಲೆಗೈದು ಇದನ್ನ ಅಪಘಾತವೆಂದು ಬಿಂಬಿಸಿರುವುದಾಗಿ ಆರೋಪ ಮಾಡುತ್ತಿದ್ದಾರೆ. ಪೊಲೀಸರು ಸದ್ಯಕ್ಕೆ ರಮೇಶ್ ಮರಣೋತ್ತರ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ.
ಚಾಮರಾಜನಗರ, ಸೆಪ್ಟೆಂಬರ್ 5: ಕಳೆದೊಂದು ವಾರದ ಹಿಂದೆ ನಡೆದಿದ್ದ ಅಪಘಾತ (accident) ಪ್ರಕರಣಕ್ಕೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅಪಘಾತದ ದೃಶ್ಯಗಳು ದಾಖಲಾಗಿರುವ ಆ ವಿಡಿಯೋ ನೂರೆಂಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಲಾರಿ ಹರಿದು ಮೃತ ಪಟ್ಟಿದ್ದ ವ್ಯಕ್ತಿಯ ವಿಡಿಯೋ (video) ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಅದು ಅಪಘಾತವಲ್ಲ; ಬದಲಿಗೆ ಅದೊಂದು ಪ್ರಿ ಪ್ಲಾನ್ಡ್ ಮರ್ಡರ್ ಎಂದು ದಲಿತ ಮುಖಂಡರು ಈಗ ಆರೋಪಿಸುತ್ತಿದ್ದಾರೆ (chamarajanagar police).
ಕಳೆದ ವಾರದ ಹಿಂದೆ ಚಾಮರಾಜನಗರ ಗುಂಡ್ಲುಪೇಟೆ ರಸ್ತೆಯಲ್ಲಿ ಅಪಘಾತ ನಡೆದಿತ್ತು. ರಸ್ತೆಯಲ್ಲಿ ನಿಂತಿದ್ದ ರಮೇಶ್ ಎಂಬಾತನ ಮೇಲೆ ಲಾರಿ ಹರಿದಿತ್ತು. ಲಾರಿ ಹರಿದ ಪರಿಣಾಮ ರಸ್ತೆಯಲ್ಲೆ ಬಿದ್ದು ವಿಲ ವಿಲ ಒದ್ದಾಡಿ ಉಸಿರು ಚೆಲ್ಲಿದ್ದ ರಮೇಶ್. ಇದು ಅಪಘಾತವಲ್ಲ; ಮರ್ಮಾಂಗ ಕತ್ತರಿಸಿ ಕೊಲೆ ಮಾಡಲಾಗಿದೆ ಎಂದು ದಲಿತ ಮುಖಂಡರು ಆರೋಪಿಸುತ್ತಿದ್ದಾರೆ.
ಲಾರಿ ಹರಿದಿದ್ರೆ ವ್ಯಕ್ತಿಯ ದೇಹ ನಜ್ಜುಗುಜ್ಜಾಗಬೇಕಿತ್ತು. ಆದ್ರೆ ಕೇವಲ ಮರ್ಮಾಂಗಕ್ಕೆ ಮಾತ್ರ ಪೆಟ್ಟಾಗಿರುವುದು ಹೇಗೆ ಎಂಬುದು ದಲಿತ ಮುಖಂಡರ ಪ್ರಶ್ನೆಯಾಗಿದೆ. ಕೊಲೆಗೈದು ಇದನ್ನ ಅಪಘಾತವೆಂದು ಬಿಂಬಿಸಿರುವುದಾಗಿ ಆರೋಪ ಮಾಡುತ್ತಿದ್ದಾರೆ. ಮೃತನ ಕುಟುಂಬಸ್ಥರ ಮೇಲೆ ಒತ್ತಡ ಹಾಕಿ ಫೇಕ್ ಕಂಪ್ಲೆಂಟ್ ನೀಡಿರುವ ಆರೋಪ ಕೇಳಿಬಂದಿದೆ. ಪೊಲೀಸರು ಸದ್ಯಕ್ಕೆ ರಮೇಶ್ ಮರಣೋತ್ತರ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ. ಮರಣೋತ್ತರ ಪರೀಕ್ಷೆಯಿಂದಷ್ಟೇ ಪ್ರಕರಣದಲ್ಲಿನ ಸತ್ಯಾಸತ್ಯತೆ ಆಚೆ ಬರಬೇಕಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಚಾಮರಾಜನಗರ ಟೌನ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:08 am, Tue, 5 September 23