ಸಾಲ ಕಟ್ಟಲಾಗದ ರೈತರೇ ಟಾರ್ಗೆಟ್! ಬಾಡಿಗೆಗಾಗಿ ಟ್ರ್ಯಾಕ್ಟರ್ ಪಡೆದು ವಂಚಿಸುತ್ತಿದ್ದವರ ಅರೆಸ್ಟ್ ಮಾಡಿದ ಮಂಡ್ಯ ಪೊಲೀಸರು
ರೈತರನ್ನ ವಂಚಿಸಿ ಟ್ರ್ಯಾಕ್ಟರ್ಗಳನ್ನೇ ಹೊತ್ತೊಯ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹಲವು ಗ್ರಾಮಗಳಿಗೆ ಹೋಗ್ತಿದ್ದ ಖದೀಮರು, ಟ್ರ್ಯಾಕ್ಟರ್ ತೆಗೊಂಡು ಸಾಲ ಕಟ್ಟಲಾಗದ ಒದ್ದಾಡ್ತಿದ್ದ ರೈತರನ್ನ ಹುಡುಕ್ತಿದ್ರು.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಆ ರೈತರು(Farmers) ಸಾಲಸೋಲ ಮಾಡಿ ಟ್ರ್ಯಾಕ್ಟರ್(Tractor) ಖರೀದಿಸಿದ್ರು. ಆದ್ರೆ, ಕೊರೊನಾ(Coronavirus) ಹೊಡೆತಕ್ಕೆ ಸಿಲುಕಿದ್ದ ಅವರೆಲ್ಲ, ಟ್ರ್ಯಾಕ್ಟರ್ ಲೋನ್ ತೀರಿಸಲಾಗದೆ ಪರದಾಡ್ತಿದ್ರು. ಇದನ್ನೆ ಬಂಡವಾಳ ಮಾಡ್ಕೊಂಡಿದ್ದ ಆ ಕಿರಾತಕರು, ನಿಂತಿರೋ ಟ್ರ್ಯಾಕ್ಟರ್ಗಳೆಲ್ಲವನ್ನೂ ಕದ್ದೊಯ್ದಿದ್ದರು. ಸದ್ಯ ಮಂಡ್ಯದ ರಘುನಂದನ್ ಹಾಗೂ ಚಾಮರಾಜನಗರದ ಗುರುಶಾಂತ ಎಂಬ ಇಬ್ಬರು ಕಳ್ಳರನ್ನ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೈತರನ್ನ ವಂಚಿಸಿ ಟ್ರ್ಯಾಕ್ಟರ್ಗಳನ್ನೇ ಹೊತ್ತೊಯ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹಲವು ಗ್ರಾಮಗಳಿಗೆ ಹೋಗ್ತಿದ್ದ ಖದೀಮರು, ಟ್ರ್ಯಾಕ್ಟರ್ ತೆಗೊಂಡು ಸಾಲ ಕಟ್ಟಲಾಗದ ಒದ್ದಾಡ್ತಿದ್ದ ರೈತರನ್ನ ಹುಡುಕ್ತಿದ್ರು. ಅವ್ರಿಗೆ ಮಾತಲ್ಲೇ ಮರಳು ಮಾಡಿ, ನಮಗೆ ಟ್ರ್ಯಾಕ್ಟರ್ ಕೊಡಿ, ನಿಮ್ಮ ಟ್ರಾಕ್ಟರ್ ಗಳನ್ನ ಬೇರೆ ಕಂಪನಿಗಳಿಗೋ, ಕ್ವಾರಿಯವರಿಗೋ ಬಾಡಿಗೆ ಕೊಡ್ತಿವಿ. ನಿಮಗೆ ತಿಂಗಳು ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕೊಡಿಸ್ತಿವಿ ಅಂತ ಕಥೆ ಕಟ್ತಿದ್ರು. ನಂತರ, ಟ್ರ್ಯಾಕ್ಟರ್ ಸಿಗ್ತಿದ್ದಂತೆ ನಾಟ್ ರೀಚೆಬಲ್ ಆಗಿಬಿಡ್ತಿದ್ರು.
ಅಂದಹಾಗೇ, ಚಾಮರಾಜನಗರದಿಂದ ಕದ್ದ ಟ್ರ್ಯಾಕ್ಟರ್ಗಳನ್ನ ಮಂಡ್ಯಕ್ಕೆ ತರುತ್ತಿದ್ರು. ಇಲ್ಲಿ, ಕಡಿಮೆ ರೇಟ್ಗೆ ಯಾವುದೇ ಡ್ಯಾಕ್ಯೂಮೆಂಟ್ ನೀಡದೆ ಟ್ರ್ಯಾಕ್ಟರ್ ಮಾರುತ್ತಿದ್ರು. ಆದ್ರೆ, ಚಾಮರಾಜನಗರದಲ್ಲಿ ಆರೋಪಿಗಳಿಂದ ಟ್ರ್ಯಾಕ್ಟರ್ ಕಳ್ಕೊಂಡ ವ್ಯಕ್ತಿಯೊಬ್ರು, ಇವ್ರನ್ನ ಹುಡುಕಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ. ಅಲ್ಲಿ ಪೊಲೀಸ್ರ ಮೊರೆ ಹೋಗಿದ್ದಾರೆ. ಈ ವೇಳೆ, ಟ್ರ್ಯಾಕ್ಟರ್ ಮಾರುತ್ತಿದ್ದಾಗಲೇ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 50 ಲಕ್ಷ ಮೌಲ್ಯದ 6 ಟ್ರ್ಯಾಕ್ಟರ್ ಗಳನ್ನ ಕದ್ದಿರುವುದಾಗಿ ಬಾಯಿಬಿಟ್ಟಿದ್ದಾರೆ.
ಸದ್ಯ, ಸಂಕಷ್ಟದಲ್ಲಿದ್ದ ರೈತರನ್ನ ವಂಚಿಸ್ತಿದ್ದ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಪೊಲೀಸ್ರು ಇಬ್ಬರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಮತ್ತೆ ಬೇರೆ ಪ್ರಕರಣದಲ್ಲಿ ಬಾಗಿಯಾಗಿದ್ದಾರಾ ಎಂದು ತನಿಖೆ ನಡೆಸ್ತಿದ್ದಾರೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಮಂಡ್ಯ.
ಇದನ್ನೂ ಓದಿ: ಮುಂದಿನ ಹಲವು ದಿನಗಳಲ್ಲಿ ರಷ್ಯನ್ ಸೇನೆ ಉಕ್ರೇನ್ ಮೇಲೆ ಆಕ್ರಮಣ ನಡೆಸಲಿದೆ ಎಂದು ನನ್ನ ಅಂತರಾತ್ಮ ಹೇಳುತ್ತಿದೆ: ಜೋ ಬೈಡೆನ್
ಟ್ರ್ಯಾಕ್ಟರ್ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಮೂವರ ದುರ್ಮರಣ, ಒಬ್ಬನಿಗೆ ಗಾಯ