ಮುಸ್ಮಿಂ ಮತದಿಂದ ನಿಮ್ಮಜ್ಜ ಸಿಎಂ- ಪ್ರಧಾನಿ, ಸಾಬ್ರ ಓಟಿನಿಂದಲೇ ನಿಮ್ಮಪ್ಪ ಗೆದ್ದಿದ್ದು: ಇಬ್ರಾಹಿಂ ತಿರುಗೇಟು

| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2024 | 6:07 PM

ಆ ಒಂದು ಸಮುದಾಯ ನಮ್ಮನ್ನು ಕೈ ಹಿಡಿಯಲಿಲ್ಲ ಎಂದು ಪರೋಕ್ಷವಾಗಿ ತಮ್ಮ ಸೋಲಿಗೆ ಮುಸ್ಲಿಂ ಸಮುದಾಯದ ಮತಗಳು ಬರದಿರುವುದೇ ಕಾರಣವೆಂದು ನಿಖಿಲ್​ ಕುಮಾರಸ್ವಾಮಿ ಆರೋಪಿಸಿದ್ದು, ಇದಕ್ಕೆ ಇದೀಗ ಸಿ.ಎಂ. ಇಬ್ರಾಹಿಂ ತಿರುಗೇಟು ನೀಡಿದ್ದಾರೆ.

ಮುಸ್ಮಿಂ ಮತದಿಂದ ನಿಮ್ಮಜ್ಜ ಸಿಎಂ- ಪ್ರಧಾನಿ, ಸಾಬ್ರ ಓಟಿನಿಂದಲೇ ನಿಮ್ಮಪ್ಪ ಗೆದ್ದಿದ್ದು: ಇಬ್ರಾಹಿಂ ತಿರುಗೇಟು
ನಿಖಿಲ್, ಇಬ್ರಾಹಿಂ
Follow us on

ಬೆಂಗಳೂರು, (ನವೆಂಬರ್ 24): ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಮತಗಳಿಂದ ನನ್ನ ಸೋಲಿಕೆ ಕಾರಣವೆಂದು ದೂರಿದ್ದ ನಿಖಿಲ್ ಕುಮಾರಸ್ವಾಮಿಗೆ ಸಿ.ಎಂ ಇಬ್ರಾಹಿಂದ ತಿರುಗೇಟು ನೀಡಿದ್ದಾರೆ. ಇಂದು(ನವೆಂಬರ್ 24) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇಬ್ರಾಹಿಂ, ಅಪ್ಪಾ ನಿಖಿಲಾ, ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ರಾಮನಗರದಲ್ಲಿ ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು. ಪ್ರಧಾನಿಯಾಗಿದ್ದಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ. ಅಷ್ಟೇ ಅಲ್ಲ ನಿಮ್ಮಪ್ಪ(ಕುಮಾರಸ್ವಾಮಿ) ಸಾಬ್ರ ಮತಗಳಿಂದಲೇ ಗೆದ್ದಿದ್ದು ಎಂದು ಟಾಂಗ್ ಕೊಟ್ಟಿದ್ದಾರೆ.

ನಿಮ್ಮಜ್ಜ ಮುಸ್ಲಿಂ ಮತಗಳಿಂದಲೇ ಸಿಎಂ ಆಗಿದ್ದು

ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದಾಗಲೇ ನಾನು ಹೇಳಿದ್ದೆ, ಚನ್ನಪಟ್ಟಣ ಚುನಾವಣೆನ ನನ್ನ ಬಿಟ್ಟು ನಡೆಸಿ ಎಂದಿದ್ದೆ. ನಾನಿದ್ದಾಗ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ರು, ಈಗ ನಿಖಿಲ್ ಕುಮಾರಸ್ವಾಮಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ಸುದ್ದಿಗೋಷ್ಠಿ ನೋಡಿ ಅಯ್ಯೋ ಅನಿಸಿತು, ಚಿಕ್ಕವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ನಿಖಿಲ್​ಗೆ ತಿವಿದರು.

ಇದನ್ನೂ ಓದಿ: ಎಲ್ಲಿ ಕಳೆದುಕೊಂಡಿದ್ದೇನೋ..ಅಲ್ಲೇ ಹುಡುಕುತ್ತೇನೆ: ಶಪಥ ಮಾಡಿದ ನಿಖಿಲ್ ಕುಮಾರಸ್ವಾಮಿ

ನಿಮ್ಮಜ್ಜ, ನಿಮ್ಮಪ್ಪನ ಶಾ ಹತ್ತಿರ ಕರೆದುಕೊಂಡು ಹೋಗಿದ್ದು ನೀನೆ ಅಲ್ವೇನಪ್ಪಾ?

ನಿಮ್ಮಜ್ಜ, ನಿಮ್ಮಪ್ಪನ ಅಮಿತ್ ಶಾ ಹತ್ತಿರ ಕರೆದುಕೊಂಡು ಹೋಗಿದ್ದು ನೀನೆ ಅಲ್ವೇನಪ್ಪಾ? ನಾನು ಅಧ್ಯಕ್ಷ ಇದ್ದಾಗ ನನಗೆ ಹೇಳದೇ ಹೋದ್ರಿ. ಈಗಲೂ ನಾನೇ ಅಧ್ಯಕ್ಷ ಇದ್ದೀನಿ. ಯೋಗೇಶ್ವರ್ ಲೊಕಲ್ ಅಭ್ಯರ್ಥಿ. ಆತನು ಒಕ್ಕಲಿಗ ಜನಾಂಗದವರಾಗಿದ್ದಾರೆ. ನಿನಗೆ ಇರೋ ಬಂಡವಾಳ ನಿಮ್ಮಜ್ಜ. ನಿಮ್ಮಜ್ಜನವರಿಗೆ ಇದ್ದಿದ್ದು ಸಿದ್ದಾಂತ ಅದನ್ನ ಬಲಿಕೊಡಿಸಿದ್ರಿ. ಅಹಿಂದ ದಲಿತ ಮತ ಇಲ್ವಾ ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡುತ್ತೀರಾ ಎಂದು ಕಿಡಿಕಾರಿದರು.

ಜಿಟಿ ದೇವೇಗೌಡರು ಇವತ್ತು ಸತ್ಯವನ್ನ ನುಡಿದಿದ್ದಾರೆ. ಜಿಟಿಡಿ ನಮ್ಮ ಪಾರ್ಟಿಗೆ ಬಂದಿರಲಿಲ್ಲ ನಾನೇ ಅವರ ಮನೆಗೆ ನಿಮ್ಮಜ್ಜನ ಕರ್ಕೊಂಡು ಹೋಗಿದ್ದು. ಇನ್ನು ಚುನಾವಣೆಯಲ್ಲಿ 60 ಬರಬೇಕಿದ್ದ ಸೀಟು, 19 ಬಂತು. ನಿಮ್ಮಪ್ಪ ಚುನಾವಣಾ ಪೂರ್ವದಲ್ಲಿ ಅಮಿತ್ ಶಾ ಜೊತೆ ಮಾತಾಡಿದ್ದು ಗೊತ್ತಾಗಿ ಕಡಿಮೆ ಬಂತು. ಅದು ಸಾಬ್ರು ಓಟಿಂದ ಗೆದ್ದಿದ್ದು ಎಂದರು.

ಬೊಮ್ಮಾಯಿಗೂ ಟಾಂಗ್ ಕೊಟ್ಟ ಇಬ್ರಾಹಿಂ

ಬೊಮ್ಮಾಯಿಗೂ ಮಗನನ್ನ ನಿಲ್ಲಿಸಬೇಡ ಎಂದು ಹೇಳಿದ್ದೆ. ಬಿಜೆಪಿಯಲ್ಲಿ ಕೊನೆಗೆ ಬಾಗಿಲುಗಳೇ ಇರಲ್ಲ. ಎಲೆಕ್ಷನ್ ಬಂದಾಗ ಯತ್ನಾಳ್ ಏನ್ ಮಾಡ್ತಾರೋ ಅಂತಾ ನೋಡಬೇಕು. ಬಸವರಾಜ್ ಬೊಮ್ಮಾಯಿಗೂ ಹೇಳಿದೆ ಕೇಳಿಲ್ಲ. ಬಾಂಬೆ ಕರ್ನಾಟಕದಲ್ಲಿ ಬಸವ ಜನ್ಮಭೂಮಿಯಲ್ಲಿ ನಡೆಯಲಿಲ್ಲ. ಹಿಂದೂ ಮುಸ್ಲಿಂ ಅಂತೆಲ್ಲ ಮಾಡಿದ್ರಿ. ಏನ್ ಆಯ್ತು? ಈಗ ನಿಮ್ಮಪ್ಪನ ಸಮಾಧಿ ಮುಂದೆ ಕೂತ್ಕೋ. ಹಣ, ಅಧಿಕಾರದ ಆಸೆಗೆ ನಿಮ್ಮ ಮಗನನ್ನು ಬಲಿಕೊಟ್ರಿ. ನಾನು ವಿಡಿಯೋ ಹಾಕಿದ್ದೆ ಅಷ್ಟೆೇ, ಒಂದು ವೇಳೆ ನಾನೇ ಶಿಗ್ಗಾವಿಗೆ ಬಂದಿದ್ರೆ ಇನ್ನೂ ಕಡಿಮೆ ವೋಟು ಪಡೆಯುತ್ತಿದ್ದೆ ಎಂದು ಬೊಮ್ಮಾಯಿ ಪುತ್ರ ಭರತ್​ಗೆ ಟಾಂಗ್ ಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.