ರಸ್ತೆ ಅವ್ಯವಸ್ಥೆ: ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು, ರೈತ ಸ್ಥಳದಲ್ಲಿಯೇ ಸಾವು

| Updated By: ಸಾಧು ಶ್ರೀನಾಥ್​

Updated on: Nov 27, 2021 | 1:58 PM

ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುದುಪಕುಂಟೆ ಗ್ರಾಮದ ಬಳಿ ಟ್ರ್ಯಾಕ್ಟರ್ ಹರಿದು ರೈತ ಮುನಿಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೈತ ಮುನಿಸ್ವಾಮಿ ಶಿಡ್ಲಘಟ್ಟ ತಾಲೂಕಿನ ಯರ್ಯಹಳ್ಳಿ ಗ್ರಾಮದ ನಿವಾಸಿ. ಬೈಕ್ ಹಿಂಬದಿಯಲ್ಲಿ ಹೋಗುತ್ತಿದ್ದಾಗ ರೈತ ಮುನಿಸ್ವಾಮಿ ಕೆಳಗೆ ಬಿದ್ದಿದ್ದಾರೆ. ಅದೇ ವೇಳೆ ಯಮರೂಪಿ ರಸ್ತೆಯಲ್ಲಿ ಹಿಂದೆಯೇ ಬರುತ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು ಹೋಗಿದೆ.

ರಸ್ತೆ ಅವ್ಯವಸ್ಥೆ: ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು, ರೈತ ಸ್ಥಳದಲ್ಲಿಯೇ ಸಾವು
ರಸ್ತೆ ಅವ್ಯವಸ್ಥೆ: ಹಿಂದೆ ಬರ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು, ರೈತ ಸ್ಥಳದಲ್ಲಿಯೇ ಸಾವು
Follow us on

ಚಿಕ್ಕಬಳ್ಳಾಫುರ: ಇದೊಂದು ವಿರಳ ಘಟನೆ. ಆದರೆ ಈ ವಿರಳ ಘಟನೆ ನಡೆದಿರುವುದಕ್ಕೆ ಕಾರಣವಾಗಿರುವುದು ಮಾತ್ರ ವಿರಳ ಅಲ್ಲ. ಇದು ರಾಜ್ಯಾದಾದ್ಯಂತ ಎಲ್ಲೆಲ್ಲೂ ಕಂಡುಬರುವ ದೃಶ್ಯ – ಜನ ಅನುಭವಿಸುತ್ತಿರುವ ಪಡಿಪಾಟಲು. ಅದುವೇ ರಸ್ತೆ ಅವ್ಯವಸ್ಥೆ. ಹೌದು ಈ ರಸ್ತೆ ಅವ್ಯವಸ್ಥೆಯೇ ಇಂದು ಹಳ್ಳಿಗಾಡಿನ ರಸ್ತೆಯಲ್ಲಿ ರೈತರೊಬ್ಬರನ್ನು ಬಲಿ ತೆಗೆದುಕೊಂಡಿದೆ. ಮಾನ್ಯವಾಗಿ ಟ್ರ್ಯಾಕ್ಟರ್​ನಿಂದ ಅಪಘಾತವಾಗುವುದು ವಿರಳ, ಅದರಲ್ಲೂ ಟ್ರ್ಯಾಕ್ಟರ್​ ಅಪಘಾತದಿಂದ ಸಾವು ಸಂಭವಿಸುವುದು ಅಪರೂಪ. ಅಂತಹುದರಲ್ಲಿ ಇಂದು ಟ್ರ್ಯಾಕ್ಟರ್​ ಅಪಘಾತವೊಂದು ರೈತರೊಬ್ಬರನ್ನು ಬಲಿ ತೆಗೆದುಕೊಂಡಿದೆ.

ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುದುಪಕುಂಟೆ ಗ್ರಾಮದ ಬಳಿ ಟ್ರ್ಯಾಕ್ಟರ್ ಹರಿದು ರೈತ ಮುನಿಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೈತ ಮುನಿಸ್ವಾಮಿ ಶಿಡ್ಲಘಟ್ಟ ತಾಲೂಕಿನ ಯರ್ಯಹಳ್ಳಿ ಗ್ರಾಮದ ನಿವಾಸಿ. ಬೈಕ್ ಹಿಂಬದಿಯಲ್ಲಿ ಹೋಗುತ್ತಿದ್ದಾಗ ರೈತ ಮುನಿಸ್ವಾಮಿ ಕೆಳಗೆ ಬಿದ್ದಿದ್ದಾರೆ. ಅದೇ ವೇಳೆ ಯಮರೂಪಿ ರಸ್ತೆಯಲ್ಲಿ ಹಿಂದೆಯೇ ಬರುತ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು ಹೋಗಿದೆ. ಇದರಿಂದ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ರಸ್ತೆ ಅವ್ಯವಸ್ಥೆ ಖಂಡಿಸಿ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾನ್ಸ್​ಟೇಬಲ್ ಸಾವು- ಮದುವೆಗೆ 4 ದಿನ ಬಾಕಿಯಿರುವಾಗ ಶವವಾಗಿ ಪತ್ತೆ
ಕಲಬುರಗಿ: ಕಲಬುರಗಿ ಗ್ರಾಮೀಣ ಠಾಣೆ ಕಾನ್ಸ್​ಟೇಬಲ್ ಶ್ರೀನಾಥ್(25) ಕಲಬುರಗಿ ತಾಲೂಕಿನ ಸಾವಳಗಿ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ಶ್ರೀನಾಥ್ ಅವರ ವಿವಾಹ ಡಿಸೆಂಬರ್ 1ಕ್ಕೆ ನಿಶ್ಚಯವಾಗಿತ್ತು. ಮದುವೆಗೆ 4 ದಿನ ಬಾಕಿಯಿರುವಾಗಲೇ ಶವವಾಗಿ ಪತ್ತೆಯಾಗಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶ್ರೀನಾಥ್ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಮುಂಜಾನೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಡಿಸೆಂಬರ್ ಒಂದರಂದು ಕಲಬುರಗಿ ನಗರದಲ್ಲಿ ವಿವಾಹ ನಿಶ್ಚಯವಾಗಿತ್ತು.

ಹಾವಿನ ಜೊತೆ ವೃದ್ಧ ಚೆಲ್ಲಾಟ ಆಡಿರೋ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ?|Tv9 Kannada

Published On - 1:34 pm, Sat, 27 November 21