ಬಿ.ಎಸ್ಸಿ ಅಗ್ರಿಕಲ್ಚರ್ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಕಾಲೇಜು ಹಾಸ್ಟಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕಾರಣವೇನು?

ಮೃತಳ ತಂದೆ ಶ್ರೀನಾಥ್ ತಮ್ಮ ಮಗಳ ಸಾವಿಗೆ ಆಕೆಯ ಸ್ನೇಹಿತನ ಕಿರುಕುಳವೆ ಕಾರಣವೆಂದು ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಹಿಂದು ಮುಂದು ಏನು ಗೊತ್ತಿಲ್ಲದೆ... ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಉಸಿರು ಚೆಲ್ಲಿದ್ದು ಮಾತ್ರ ದುರಂತ.

ಬಿ.ಎಸ್ಸಿ ಅಗ್ರಿಕಲ್ಚರ್ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಕಾಲೇಜು ಹಾಸ್ಟಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕಾರಣವೇನು?
ಬಿ.ಎಸ್ಸಿ ಅಗ್ರಿಕಲ್ಚರ್ ವಿದ್ಯಾರ್ಥಿನಿ ಹಾಸ್ಟಲ್ ನಲ್ಲೆ ಆತ್ಮಹತ್ಯೆ, ಪ್ರತಿಭಾವಂತೆ ಆತ್ಮಹತ್ಯೆಗೆ ಕಾರಣವಾಯ್ತಾ ಪ್ರಿಯಕರನ ಟಾರ್ಚರ್?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 08, 2022 | 4:45 PM

ಆ ಬಾಲಕಿ ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ ಅಂತ ಸುದ್ದಿ ಮಾಡಿದ್ದಳು. ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಅಗ್ರಿಕಲ್ಚರ್ ಪದವಿಗೆ ದಾಖಲಾಗಿದ್ದ ಬಾಲಕಿ, ಇನ್ನೇನು ಒಂದು ವರ್ಷ ಆಗಿದ್ರೆ… ಕೃಷಿ ಪದವಿಯನ್ನು ಮುಗಿಸುತ್ತಿದ್ದಳು. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅವನೊಬ್ಬನ ಜೊತೆ ಮೂಡಿದ ಪ್ರೀತಿ ಈಗ ಆಕೆಯ ಬಾಳನ್ನು ಸರ್ವನಾಶ ಮಾಡಿದೆ. ಇದ್ರಿಂದ ನೊಂದ ಆಕೆ ಕಾಲೇಜಿನ ಹಾಸ್ಟಲ್ ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆ ವರದಿ ಇಲ್ಲಿದೆ.

ಬಿ. ಎಸ್ಸಿ ಕೃಷಿ ಪದವಿಗೆ ಪ್ರವೇಶ ಸಿಕ್ಕರೆ ಸಾಕು, ಜೀವನ ಸಾರ್ಥಕ ಆಯಿತು ಅನ್ನೊ ಅದೆಷ್ಟೊ ಜನ ವಿದ್ಯಾರ್ಥಿಗಳ ಮಧ್ಯೆ, ಬಿ.ಎಸ್ಸಿ ಕೃಷಿ ಪದವಿ ವಿದ್ಯಾಭ್ಯಾಸ ಮಾಡ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ನಿವಾಸಿ ಪವಿತ್ರಾ ಅನ್ನೊ ವಿದ್ಯಾರ್ಥಿನಿ, ತಾನು ವಿದ್ಯಾಭ್ಯಾಸ ಮಾಡ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುರಬೂರು ಗ್ರಾಮದ ಬಳಿ ಇರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಚಿಂತಾಮಣಿ ಕ್ಯಾಂಪಸ್ ನ ವಸತಿ ನಿಲಯದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದು ಅವನ್ನೊಬ್ಬ ಸ್ನೇಹಿತನಿಂದ… ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅವನೊಬ್ಬ ಸ್ನೇಹಿತ, ಈಗ ಪವಿತ್ರಾಳ ಜೀವನವನ್ನೆ ಕೊನೆ ಗಾಣಿಸಿದ್ದಾನೆ.

ಇಂದು ಬಿಎಸ್ಸಿ ಕೃಷಿ ಪದವಿಯ ಮೂರನೆ ವರ್ಷದ ಪ್ರಾಯೋಗಿಕ ಪರೀಕ್ಷೆ ಇತ್ತು. ಇದ್ರಿಂದ ಸಹಪಾಠಿಗಳ ಜೊತೆ ನಿನ್ನೆ ರಾತ್ರಿ ಹಾಸ್ಟಲ್ ನಲ್ಲಿ ಪವಿತ್ರಾ ವಿದ್ಯಾಭ್ಯಾಸ ಮಾಡ್ತಿದ್ದಳು. ಆದ್ರೆ ಪದೆ ಪದೆ ಸಂತೋಷ ಅನ್ನೊ ಯುವಕ ಹೈದರಾಬಾದ್ ನಿಂದ ಕರೆ ಮಾಡ್ತಿದ್ದ. ನಿರಂತರವಾಗಿ ಪೋನ್ ರಿಂಗ್ ಆಗ್ತಿತ್ತು. ಇದ್ರಿಂದ ರೋಸಿ ಹೋದ ಪವಿತ್ರಾಳ ಸ್ನೇಹಿತೆಯರು, ಪ್ರತ್ಯೇಕ ರೂಮ್ ನಲ್ಲಿ ಓದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪವಿತ್ರಾ… ಹಾಸ್ಟಲ್ ನ 19 ನೆ ರೂಮ್ ನಲ್ಲಿ ಒಬ್ಬಳೆ ಓದಲು ಹೋಗಿದ್ದಾಳೆ. ಆಗ ಕೆಲವು ಹೊತ್ತು ತನ್ನ ಸ್ನೇಹಿತ ಸಂತೋಷ ಜೊತೆ ಪೋನ್ ನಲ್ಲಿ ವಿಡಿಯೊ ಕಾಲ್ ನಲ್ಲಿ ಮಾತನಾಡಿದ್ದಾಳೆ. ಪರೀಕ್ಷೆ ಇದೆ ಸಾಕು ಸಾಕು ಅಂದ್ರೂ ಅವನು ಬಿಟ್ಟಿಲ್ಲ. ಇದ್ರಿಂದ ಮನನೊಂದು ಪವಿತ್ರಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೈನ್ ನಲ್ಲೆ ಇದ್ದ ಆಕೆಯ ಸ್ನೇಹಿತ ತಕ್ಷಣ ಆಕೆಯ ಸ್ನೇಹಿತೆಯರಿಗೆ ಮೇಸೆಜ್ ಮಾಡಿದ್ದು, ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ, ರಕ್ಷಿಸಿ ಅಂತ ತಿಳಿಸಿದ್ದಾನೆ. ಆದ್ರೆ ಅಷ್ಟೊತ್ತಿಗೆ ಪವಿತ್ರಾ ಸಾವಿನ ಮನೆ ಸೇರಿದ್ದಳು. ಇದ್ರಿಂದ ಇದ್ದೊಬ್ಬ ಮಗಳನ್ನು ಕಳೆದುಕೊಂಡು ಆಕೆಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಬಗ್ಗೆ ಚಿಂತಾಮಣಿಯ ಕುರಬೂರು ಕೃಷಿ ಮಹಾವಿದ್ಯಾಲಯದ ಡೀನ್ ಮಾತನಾಡಿದ್ದು ಯಾಕೆ ತಮ್ಮ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಗೊತ್ತಿಲ್ಲ, ಆಕೆಯ ಪೋನ್, ಡೆತ್ ನೋಟ್ ನ್ನು ಚಿಂತಾಮಣಿ ಪೊಲೀಸರು ಜಪ್ತಿ ಮಾಡಿದ್ದು, ತನಿಖೆಯ ನಂತರ ಸತ್ಯ ತಿಳಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತ ಮೃತಳ ತಂದೆ ಶ್ರೀನಾಥ್ ತಮ್ಮ ಮಗಳ ಸಾವಿಗೆ ಆಕೆಯ ಸ್ನೇಹಿತನ ಕಿರುಕುಳವೆ ಕಾರಣವೆಂದು ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಹಿಂದು ಮುಂದು ಏನು ಗೊತ್ತಿಲ್ಲದೆ… ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಉಸಿರು ಚೆಲ್ಲಿದ್ದು ಮಾತ್ರ ದುರಂತ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ