ಅಪಾರ ಪ್ರಮಾಣದ ಹೂಗಳನ್ನು ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು

ಭಾರಿ ಮಳೆಯಿಂದಾಗಿ ಹೂವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ತೋಟಗಳಲ್ಲಿಯೇ ಹೂವುಗಳು ಹಾಳಾಗುತ್ತಿವೆ. ಮಾರುಕಟ್ಟೆಗೆ ತಂದರೂ ಹೂಗಳನ್ನು ಖರೀದಿಸುತ್ತಿಲ್ಲ.

ಅಪಾರ ಪ್ರಮಾಣದ ಹೂಗಳನ್ನು ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು
ರೈತರು ಹೂಗಳನ್ನು ಸುರಿದಿದ್ದಾರೆ
Follow us
TV9 Web
| Updated By: sandhya thejappa

Updated on: Oct 10, 2021 | 1:17 PM

ಚಿಕ್ಕಬಳ್ಳಾಪುರ: ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೂ ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆಗೆ ಹೂಗಳು ತೋಟದಲ್ಲೇ ಕಮರಿವೆ. ಅಳಿದುಳಿದ ಹೂಗಳನ್ನು ಮಾರುಕಟ್ಟೆಗೆ ತಂದರೆ ಅಲ್ಲಿಯೂ ಮಳೆ ನೀರಿನ ಪಾಲಾಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೂವಿಗೆ ಬೆಲೆಯೂ ಸಿಗಿಲಿಲ್ಲ, ಮಳೆ ಬಂದು ಎಲ್ಲಾ ಹಾಳಾಗಿ ಹೋಯಿತು ಅಂತ ರೈತರು ಟನ್ ಗಟ್ಟಲೆ ಹೂಗಳನ್ನು ನೀರಲ್ಲೇ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹೂವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ತೋಟಗಳಲ್ಲಿಯೇ ಹೂವುಗಳು ಹಾಳಾಗುತ್ತಿವೆ. ಮಾರುಕಟ್ಟೆಗೆ ತಂದರೂ ಹೂಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ಅಪಾರ ಪ್ರಮಾಣದ ಹೂಗಳನ್ನು ರೈತರು ತಿಪ್ಪೆಗೆ ಸುರಿದಿದ್ದಾರೆ. ದಸರಾ ವೇಳೆ ಹೂವುಗಳಿಗೆ ಒಳ್ಳೆಯ ಬೆಲೆ ಸಿಗುತ್ತಿತ್ತು. ನಿರಂತರ ಮಳೆ ಹಿನ್ನೆಲೆ ತೋಟದಲ್ಲೇ ಹೂವು ಹಾಳಾಗುತ್ತಿದೆ ಅಂತ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ನೀರು ಮಯವಾಗಿರುವ ಹೂಗಳನ್ನು ಕೊಂಡುಕೊಳ್ಳಲು ವರ್ತಕರು ನಿರಾಕರಿಸುತ್ತಿದ್ದಾರೆ. ಹೀಗಾಗಿ ದಿಕ್ಕು ತೋಚದೆ ಕಷ್ಟಪಟ್ಟು ಬೆಳೆದ ಹೂಗಳನ್ನು ತಿಪ್ಪೆಗೆ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಮೀನಿನಲ್ಲಿರುವ ಹೂವುಗಳು ಮಳೆರಾಯನ ಪಾಲಾಗುತ್ತಿವೆ. ನಿರಂತರ ಮಳೆಯಿಂದ ಹೂಗಳು ಗಿಡದಲ್ಲೇ ಕೊಳೆಯುತ್ತಿವೆ.

ಇದನ್ನೂ ಓದಿ

ಪೊಲೀಸ್​ ಠಾಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ; ಪೊಲೀಸ್​ ಅಧಿಕಾರಿ ಅಮಾನತು

ರಾಹುಲ್ ಗಾಂಧಿಯ ಲಖಿಂಪುರ್ ಖೇರಿ ಭೇಟಿ ‘ರಾಜಕೀಯ ಪ್ರವಾಸೋದ್ಯಮ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್