ರಾಹುಲ್ ಗಾಂಧಿಯ ಲಖಿಂಪುರ್ ಖೇರಿ ಭೇಟಿ ‘ರಾಜಕೀಯ ಪ್ರವಾಸೋದ್ಯಮ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Giriraj Singh: ರಾಹುಲ್ ಗಾಂಧಿಯವರು ಲಖಿಂಪುರ್ ಖೇರಿಗೆ ಭೇಟಿ ನೀಡುವುದು ಕೇವಲ ರಾಜಕೀಯ ಪ್ರವಾಸೋದ್ಯಮದ ಒಂದು ಉದಾಹರಣೆಯಾಗಿದೆ. ಇದರಲ್ಲಿ ನಿಜವಾದ ಸಹಾನುಭೂತಿ ಮತ್ತು ಅನುಕಂಪ ಇಲ್ಲ ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್.

ರಾಹುಲ್ ಗಾಂಧಿಯ ಲಖಿಂಪುರ್ ಖೇರಿ ಭೇಟಿ 'ರಾಜಕೀಯ ಪ್ರವಾಸೋದ್ಯಮ': ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಲಖಿಂಪುರ್ ಖೇರಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್, ಪ್ರಿಯಾಂಕಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 10, 2021 | 12:56 PM

ಪಟನಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಅವರು ಲಖಿಂಪುರ್ ಖೇರಿಗೆ ( Lakhimpur Kheri) ಭೇಟಿ ನೀಡಿದ್ದು ಕೇವಲ ರಾಜಕೀಯ ಪ್ರವಾಸೋದ್ಯಮದ (political tourism) ಒಂದು ಉದಾಹರಣೆಯಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ (Giriraj Singh) ಹೇಳಿದ್ದಾರೆ. ಅಕ್ಟೋಬರ್ 3 ರಂದು ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದರು. ರಾಹುಲ್ ಗಾಂಧಿಯವರು ಲಖಿಂಪುರ್ ಖೇರಿಗೆ ಭೇಟಿ ನೀಡುವುದು ಕೇವಲ ರಾಜಕೀಯ ಪ್ರವಾಸೋದ್ಯಮದ ಒಂದು ಉದಾಹರಣೆಯಾಗಿದೆ. ಇದರಲ್ಲಿ ನಿಜವಾದ ಸಹಾನುಭೂತಿ ಮತ್ತು ಅನುಕಂಪ ಇಲ್ಲ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ರಾಜಕೀಯ ಪ್ರವಾಸೋದ್ಯಮವನ್ನು ಮುಂದುವರಿಸುತ್ತಾರೆ. ರಾಹುಲ್ ಗಾಂಧಿ ಆ ಘಟನೆಯಲ್ಲಿ ಹತ್ಯೆಗೀಡಾದ ಪತ್ರಕರ್ತರ ಕುಟುಂಬಕ್ಕೆ ರಾಹುಲ್ ಗಾಂಧಿ ಯಾಕೆ ಭೇಟಿ ನೀಡಲಿಲ್ಲವೇ? ಕಾಶ್ಮೀರದಲ್ಲಿ ಹತ್ಯೆಯಾದ ಜನರ ಕುಟುಂಬಗಳನ್ನು ಭೇಟಿ ಮಾಡಲು ಅವರು ಯಾಕೆ ಹೋಗಿಲ್ಲ ? ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್ ಕೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಿಯೋಗವು ಬುಧವಾರ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಮೃತ ರೈತ ಲವ್‌ಪ್ರೀತ್ ಸಿಂಗ್ ಅವರ ಕುಟುಂಬವನ್ನು ಭೇಟಿ ಮಾಡಿತು.

ಡಿಸೆಂಬರ್‌ಗೆ ಮುನ್ನ 6 ಕೋಟಿ ಲಸಿಕೆ ಡೋಸ್ ನೀಡಿದ್ದಕ್ಕಾಗಿ ಗಿರಿರಾಜ್ ಸಿಂಗ್ ಅವರು ಬಿಹಾರ ಸರ್ಕಾರವನ್ನು ಅಭಿನಂದಿಸಿದರು. ಇಂದು ಇಡೀ ವಿಶ್ವವು ಭಾರತದ ಸಾಂಕ್ರಾಮಿಕ ನಿರ್ವಹಣೆ ಮತ್ತು ಕೊವಿಡ್ ಲಸಿಕೆ ವೇಗವನ್ನು ಪ್ರಶಂಸಿಸುತ್ತಿದೆ, ಇದನ್ನು ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಧಿಸಿದ್ದೇವೆ. ನಾವು ಎದುರಿಸಿದ ಎಲ್ಲಾ ಟೀಕೆಗಳ ಹೊರತಾಗಿಯೂ, ನಾವು ನಮ್ಮ ಸ್ವಂತ ಜನರನ್ನು ರಕ್ಷಿಸುವುದಲ್ಲದೆ, ವಿವಿಧ ದೇಶಗಳಿಗೆ ಲಸಿಕೆಗಳನ್ನು ಕಳುಹಿಸುವ ಮೂಲಕ ವಿಶ್ವಾದ್ಯಂತ ಜೀವಗಳನ್ನು ಉಳಿಸಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆ ಇದೆ “ಎಂದು ಅವರು ಹೇಳಿದರು.

ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಸ್ವತಂತ್ರ ನಾಯಕನ ಪರವಾಗಿ ಪ್ರಚಾರ ಮಾಡುತ್ತಿರುವ ವಿಷಯದ ಕುರಿತು ಮಾತನಾಡಿದ ಸಿಂಗ್, “ಇದು ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದ ವಿಷಯವಾಗಿದೆ. ಯಾವ ಮಗನಿಗೆ ಪಕ್ಷದಲ್ಲಿ ಹೆಚ್ಚಿನ ಪಾಲು ಸಿಕ್ಕಿದೆ ಎಂದು ನೋಡುವುದು ನನ್ನ ಕೆಲಸವಲ್ಲ ಎಂದಿದ್ದಾರೆ.

ಆರ್‌ಜೆಡಿ ಬಿಡುಗಡೆ ಮಾಡಿದ ಬಿಹಾರದ ಉಪಚುನಾವಣೆಯ ಇತ್ತೀಚಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ, ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ಹೆಸರುಗಳನ್ನು ಒಳಗೊಂಡಿದ್ದರೂ ಸಹ ತೇಜ್ ಪ್ರತಾಪ್ ಯಾದವ್ ಅವರನ್ನು ಹೊರಗಿಡಲಾಗಿದೆ. ಬಿಹಾರದಲ್ಲಿ ಕುಶೇಶ್ವರ ಆಸ್ಥಾನ್ ಮತ್ತು ತಾರಾಪುರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಕ್ಟೋಬರ್ 30 ರಂದು ನಿಗದಿಯಾಗಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಆತಂಕದ ವಾತಾವರಣ: ಕಣಿವೆ ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತ್, ಸಿಖ್ ಸಮುದಾಯದ ಸರ್ಕಾರಿ ಸಿಬ್ಬಂದಿ

Published On - 12:55 pm, Sun, 10 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ