AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಗಲಾಟೆಯಲ್ಲಿ ಜಸ್ಟ್​ ತಳ್ಳಿದಕ್ಕೆ ಬಿದ್ದು ಸತ್ತ ದೊಡ್ಡಪ್ಪ, ಅಸಲಿಗೆ ಆಗಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿ ಗ್ರಾಮದಲ್ಲಿ ಹಣಕಾಸಿನ ವಿಚಾರದಲ್ಲಿ ನಡೆದ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ನಡೆದಿದೆ. ಸದ್ಯ ಕೊಲೆ ಆರೋಪ ಕೂಡ ಕೇಳಿಬಂದಿದೆ. ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ಕೇಪ್​​ ಆಗಿರುವ ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ: ಗಲಾಟೆಯಲ್ಲಿ ಜಸ್ಟ್​ ತಳ್ಳಿದಕ್ಕೆ ಬಿದ್ದು ಸತ್ತ ದೊಡ್ಡಪ್ಪ, ಅಸಲಿಗೆ ಆಗಿದ್ದೇನು?
ಮೃತ ವ್ಯಕ್ತಿ, ಮನೆಯ ಗೇಟ್​, ಆರೋಪಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 07, 2025 | 3:10 PM

Share

ಚಿಕ್ಕಬಳ್ಳಾಪುರ, ಡಿಸೆಂಬರ್​ 07: ಹಣಕಾಸಿನ ವಿಚಾರದಲ್ಲಿ ಉಂಟಾದ ದಾಯಾದಿಗಳ ಕಲಹ ಕೊನೆಗೆ ಸಾವಿನಲ್ಲಿ (death) ಅಂತ್ಯವಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿ ಗ್ರಾಮದಲ್ಲಿ ನಡೆದಿದೆ. ತಳ್ಳಾಟ ನೂಕಾಟ ವೇಳೆ ಸಹೋದರನ ಮಗ, ತನ್ನ ದೊಡ್ಡಪ್ಪನನ್ನು ಹಿಂದೆ ತಳ್ಳಿದ್ದಾನೆ ಅಷ್ಟೇ, ಕಬ್ಬಿಣದ ಗೇಟ್​​ ತಲೆಗೆ ತಗುಲಿ ಮೃತಪಟ್ಟಿದ್ದಾರೆ. ಕೆಎಲ್​ ನಾರಾಯಣಸ್ವಾಮಿ ಮೃತ ದೊಡ್ಡಪ್ಪ,  ಮಧುಸೂದನ್​​ ಎಂಬಾತನ ವಿರುದ್ಧ ಸದ್ಯ ಕೊಲೆ ಆರೋಪ ಕೇಳಿಬಂದಿದೆ.

ಕೊಲೆ ಆರೋಪ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿ ಗ್ರಾಮದಲ್ಲಿ 66 ವರ್ಷದ ಕೆ.ಎಲ್. ನಾರಾಯಣಸ್ವಾಮಿ ಹಾಗೂ ಕೆ.ಎಲ್. ಮದ್ದಿರೆಡ್ಡಿ ಎಂಬ ಸಹೋದರರು ವಾಸವಾಗಿದ್ದರು. ಕೆಎಲ್​​​ ಮದ್ದಿರೆಡ್ಡಿ ಮಗ ಮಧುಸೂದನ್​​ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ನಡೆದದ್ದೇನು?

ಅಸಲಿಗೆ 2005ರಲ್ಲಿ ಮಧುಸೂದನ್ ತಂದೆ ಮದ್ದಿರೆಡ್ಡಿ, ತಮ್ಮ ಹಳೆಯ ಮನೆಯೊಂದನ್ನು ರತ್ನಮ್ಮ ಎನ್ನುವವರಿಗೆ ಮಾರಾಟ ಮಾಡಿದ್ದರು. ಇದೇ ವಿಚಾರವಾಗಿ ನಾರಾಯಣಸ್ವಾಮಿ ಹಾಗೂ ಮದ್ದಿರೆಡ್ಡಿ ಕುಟುಂಬಗಳ ಮಧ್ಯೆ ಹಣಕಾಸು ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ಇತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ

ಇದೆ ವಿಚಾರದಲ್ಲಿ ಮಧುಸೂದನ್​​, ತನ್ನ ದೊಡ್ಡಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಅದೊಂದು ದಿನ ಕೂಗಾಡುತ್ತಿದ್ದ. ಇದನ್ನು ಗಮನಿಸಿದ್ದ ನಾರಾಯಣಸ್ವಾಮಿ ಹಾಗೂ ಅವರ ಪುತ್ರ ರವಿಕುಮಾರ್, ಮಧುಸೂದನ್ ಮನೆ ಬಳಿ ಹೋಗಿ ಪ್ರಶ್ನಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ಉಂಟಾಗಿದೆ. ಈ ವೇಳೆ ಮಧುಸೂದನ್ ಬಲವಾಗಿ ತಮ್ಮ ದೊಡ್ಡಪ್ಪನನ್ನು ಹಿಂದಕ್ಕೆ ನೂಕಿದ್ದಾನೆ. ಆಗ ಮನೆಯ ಗೇಟ್‌ ನಾರಾಯಣಸ್ವಾಮಿ ತಲೆಗೆ ತಗುಲಿದೆ. ಗಂಭಿರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಚಿಂತಾಮಣಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಂಡ 18 ವರ್ಷದ ಯುವತಿ, ಸಾವಿನ ಹಿಂದಿದ್ಯಾ ದೆವ್ವದ ಕಾಟ?

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆರೋಪಿ ಮಧುಸೂದನ್, ಆಂಧ್ರ ಕಡೆ ಎಸ್ಕೇಪ್ ಆಗಿರುವ ಮಾಹಿತಿ ಹಿನ್ನೆಲೆ ಪೊಲೀಸರು ಬಂಧನಕ್ಕೆ ಬಲೆ ಬಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:05 pm, Sun, 7 December 25