ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಬಾಲ್ಯವಿವಾಹ ಮಾಡಿಕೊಂಡಿದ್ದ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಷಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಯುವಕ ಮದುವೆಯಾಗಿದ್ದ. ಹೀಗಾಗಿ ಚೇಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು
ಮೃತ ಯುವಕ
Edited By:

Updated on: Feb 02, 2026 | 4:35 PM

ಚಿಕ್ಕಬಳ್ಳಾಪುರ, ಫೆಬ್ರವರಿ 02: ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೋ ಕೇಸ್ (POCSO Case) ದಾಖಲು ಹಿನ್ನೆಲೆ ಆತ್ಮಹತ್ಯೆಗೆ (suicide) ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(19) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಚೇಳೂರು ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.

ನಡೆದಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ್​ ಇನ್ಸ್ಟಾಗ್ರಾಮ್​ನಲ್ಲಿ​ ಸಾತನೂರು ಮೂಲದ ಹುಡುಗಿಯನ್ನು ಪರಿಚಯ ಮಾಡಿಕೊಂಡು ಬಳಿಕ 2025ರಲ್ಲಿ ಮದುವೆಯಾಗಿದ್ದರು. ಮಂಜುನಾಥ್ 18 ವರ್ಷದವನಿದ್ದಾಗ 16 ವರ್ಷದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ.

ಇದನ್ನೂ ಓದಿ: ಸಂಸಾರ ಹಾಳು ಮಾಡಿದವನ ಸಂಹಾರ: ಕೊಲೆ ಮಾಡಿ ಫೇಸ್ಬುಕ್​​ನಲ್ಲಿ ತಪ್ಪೊಪ್ಪಿಕೊಂಡ ಖದೀಮರು

ಹುಷಾರಿಲ್ಲ ಎಂದು ಬಾಗೇಪಲ್ಲಿ ಆಸ್ಪತ್ರೆಗೆ ಬಂದಿದ್ದಾರೆ. ಬಾಲಕಿ ವಯಸ್ಸು ಕಡಿಮೆ ಎಂದು ತಿಳಿದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖಾ ಅಧಿಕಾರಿಗಳು ಈ ವೇಳೆ ಆಗಮಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಪರಿಶೀಲನೆ ವೇಳೆ ಇದೀಗ ಅಪ್ರಾಪ್ತ ಬಾಲಕಿ 8 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಸದ್ಯ ಬಾಲಕಿಯನ್ನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಇರಿಸಲಾಗಿದೆ. ಹೀಗಿರುವಾಗ ತನಗೆ ಏನಾದರೂ ಮಾಡಿದರೆ ಎಂಬ ಭಯದಲ್ಲಿ ಮಂಜುನಾಥ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಬಿದ್ದು ಯುವಕ ಸಾವು: 

ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಬಂಧಿಕರ ಮನೆಗೆ ಬಂದಾಗ ದುರಂತ ಸಂಭವಿಸಿದೆ.

ಇದನ್ನೂ ಓದಿ: ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಇರ್ಫಾನ್ ಮುಲ್ಲಾನಿ(26) ಮೃತ ಯುವಕ. ಮನೆ ಮೇಲಿಂದ ಯುವಕ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ‌ ಸಾವು ಎಂದು ಕೇಸ್ ದಾಖಲಾಗಿದೆ.

ಸಂಪ್​ಗೆ ಬಿದ್ದು ಬಾಲಕ ಸಾವು

ಜಲಮಂಡಳಿ ಪೈಪ್​ಲೈನ್ ಸಂಪ್​ಗೆ ಬಿದ್ದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ನಡೆದಿದೆ. ಚಾಮರಾಜನಗರ ಮೂಲದ ರಮೇಶ್​ ಎಂಬುವರ ಪುತ್ರ ಪ್ರೀತಂ(14) ಮೃತ ಬಾಲಕ. ಜನವರಿ 29ರಂದು ನಾಪತ್ತೆಯಾಗಿದ್ದ. ನಿನ್ನೆ ಸಂಜೆ ಜಲಮಂಡಳಿ ಪೈಪ್​ಲೈನ್ ಸಂಪ್​ನಲ್ಲಿ ಬಾಲಕನ ಶವ ಪತ್ತೆ ಆಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಆರ್‌.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಕಗ್ಗಲಿಪುರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:32 pm, Mon, 2 February 26