AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur News: ದಿಢೀರ್ ಕುಸಿದ ಬೆಲೆ: ಬಾಡಿದ ಹೂವು ಬೆಳೆಗಾರರ ಮುಖ

ಹೂ ಬೆಳೆಯೋದ್ರಲ್ಲಿ ಆ ಜಿಲ್ಲೆ ರಾಜ್ಯಕ್ಕೆ ಪ್ರಥಮ, ಈ ಬಾರಿ ಜಿಲ್ಲೆಯಲ್ಲಿ ಹೂಗಳ ಇಳುವರಿ ದುಪ್ಪಟ್ಟಾಗಿದ್ದು, ಮಾರುಕಟ್ಟೆಯಲ್ಲಿ ಹೂ ಮಾರಾಟಕ್ಕೆ ಜಾಗ ಇಲ್ಲದಷ್ಟು ಹೂಗಳನ್ನು ರೈತ ಬೆಳೆದಿದ್ದಾರೆ. ಇದ್ರಿಂದ ಹೂಗಳನ್ನು ಕೇಳೋರಿಲ್ಲದೆ, ಹೂ ಬೆಲೆ ಪಾತಾಳಕ್ಕೆ ಕುಸಿದು ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಆ ಜಿಲ್ಲೆ ಯಾವುದು ಅಂತೀರಾ ಈ ಸ್ಟೋರಿ ನೋಡಿ.

Chikkaballapur News: ದಿಢೀರ್ ಕುಸಿದ ಬೆಲೆ: ಬಾಡಿದ ಹೂವು ಬೆಳೆಗಾರರ ಮುಖ
ಚಿಕ್ಕಬಳ್ಳಾಪುರ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: May 24, 2023 | 7:24 AM

Share

ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಜಾಗ ಇಲ್ಲದಷ್ಟು ಹೂಗಳನ್ನು ಮಾರಾಟ ಮಾಡಲು ಬಂದಿರುವ ರೈತರು, ತಂದ ಹೂ ಮಾರಾಟವಾಗದೆ ತಿಪ್ಪಗೆ ಸುರಿದು ಬಂದ ದಾರಿಗೆ ಸುಂಕವಿಲ್ಲದೆ ಬರಿಗೈಯಲ್ಲಿ ಮನೆಕಡೆ ಹೋಗುತ್ತಿರುವ ಹೂ ಬೆಳೆಗಾರರು, ಈ ದೃಶ್ಯಗಳು ಕಂಡುಬಂದ್ದಿದ್ದು ಚಿಕ್ಕಬಳ್ಳಾಪುರ (Chikkaballapur)ಹೂ ಮಾರುಕಟ್ಟೆಯಲ್ಲಿ, ಇತ್ತಿಚೇಗೆ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹೂ ಹೊಳಪು ಕಳೆದುಕೊಂಡಿದ್ರೆ, ಅತ್ತ ಜಿಲ್ಲೆಯಲ್ಲಿ ಹೂ ಇಳುವರಿ ದುಪ್ಟಟ್ಟಾಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರಪ್ತಾಗುತ್ತಿದ್ದ ಹೂಗಳನ್ನು ಮಾರುಕಟ್ಟೆಯಲ್ಲಿ ಕೇಳೋರೆ ಇಲ್ಲದೆ ಹೂಗಳು ಬೀದಿಪಾಲು ಆಗುತ್ತಿವೆ.

ಇನ್ನು ಜಿಲ್ಲೆಯಲ್ಲಿ ಬಹುತೇಕ ರೈತರು ಹೂ ಬೆಳೆಯುತ್ತಿದ್ದು, ವೆರೈಟಿ ಹೂಗಳನ್ನು ಬಳೆದು ಇಡೀ ರಾಜ್ಯಕ್ಕೆ ಸರಬರಾಜು ಮಾಡುತಿದ್ದರು. ಜಿಲ್ಲೆಯಲ್ಲಿ ನೂರಕ್ಕೆ ಶೇಕಡಾ 70 ರಷ್ಟು ರೈತರು ಹೂ ಬೆಳೆಯ ಮೇಲೆ ಅವಲಂಬಿತರಾಗಿರೋದ್ರಿಂದ ಹೂ ಬೆಳೆಯಲ್ಲಿ ದುಪ್ಪಟ್ಟಾಗಿ, ಮಾರುಕಟ್ಟೆಯಲ್ಲಿ ಜಾಗ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಹೂ ಬೆಲೆ ಪಾತಾಳಕ್ಕೆ ಕುಸಿದಿದ್ದು, ಸೆಂಟ್ ಎಲ್ಲೋ ಸೇವಂತಿ ಹೂ 200 ರೂಪಾಯಿಯಿಂದ 100 ರೂಪಾಯಿಗೆ ಕುಸಿದಿದೆ. ಮೆರಾಬುಲ್ ಹೂ ಕೇವಲ ಹತ್ತು ರೂಪಾಯಿಗೆ ಮಾರಾಟವಾಗುತ್ತಿದೆ. ಸೇವಂತಿ ಚಾಕಲೇಟ್ 120 ರಿಂದ 70 ಕ್ಕೆ ಕುಸಿದಿದ್ರೆ, ಐಶ್ವರ್ಯ್ಯ 250 ರೂಪಾಯಿಯಿಂದ ನೂರು ರೂಪಾಯಿಗೆ ಇಳಿದಿದೆ. ಇನ್ನು ಚೆಂಡು ಹೂ 70 ರಿಂದ 10 ರೂಪಾಯಿಗೆ ಕುಸಿದಿದ್ರೆ, ಗುಲಾಬಿಯನ್ನ ಕೇಳೋರೆ ಇಲ್ಲದೆ, ತಿಪ್ಪೆಗೆ ಸುರಿಯುವಂತಾಗಿದೆ.

ಇದನ್ನೂ ಓದಿ:Green Skill Training Centre: ಬಳಸಿದ ಹೂಗಳಿಂದ ರಂಗೋಲಿ, ಸಾವಯವ ಬಣ್ಣ ತಯಾರಿಸುತ್ತಿರುವ ನಿಮ್ಹಾನ್ಸ್​​​, ಇದು ವಿನೂತ ಪ್ರಯತ್ನ ಎಂದ ಶಾಸಕ

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಹೂ ಬೆಳೆಗಾರನಿಗೆ ಒಂದು ವರ್ಷದಲ್ಲಿ ಒಂದು ತಿಂಗಳಲ್ಲಿ ಮಾತ್ರ ಹೂವಿಗೆ ಬೆಲೆ ಸಿಕ್ಕರೆ ವರ್ಷವಿಡೀ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಾನೆ. ಇನ್ನು ಜಿಲ್ಲೆಯಲ್ಲಿ ಹೂ ಬೆಳೆಯುವ ರೈತರ ಸಂಖ್ಯೆಯೂ ಹೆಚ್ಚಾಗಿದ್ದು, ಮಳೆಯ ಹೊಡೆತಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್