ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಕೆರೆಗಳು ಭರ್ತಿ, ರಾಷ್ಟ್ರೀಯ ಹೆದ್ದಾರಿ 234ರ ರಸ್ತೆ ಮೇಲೆ ಹರಿಯುತ್ತಿದೆ ನೀರು
ಮಳೆಯಿಂದ ಚಿಕ್ಕಬಳ್ಳಾಪುರ ನಗರದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಂದ ನೀರು ಹೊರಹಾಕಲು ನಿವಾಸಿಗಳು ಪರದಾಡುತ್ತಿದ್ದಾರೆ. ನಿಮ್ಮಾಕಲಕುಂಟೆ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ರಂಗಧಾಮ ಕೆರೆ ಕೋಡಿ ಬಿದ್ದು ರಾಷ್ಟ್ರೀಯ ಹೆದ್ದಾರಿ 234ರಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ರಾತ್ರಿಯಿಡಿ ಧಾರಾಕಾರ ಮಳೆ ಸುರಿದಿದ್ದು ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿನಲ್ಲಿ ಮಳೆಯಿಂದ ಭಾರಿ ಅವಾಂತರ ಎದುರಾಗಿದೆ. ಮಳೆಯಿಂದ ಕೆರೆ ಕುಂಟೆ, ನದಿಗಳು, ನಾಲೆಗಳು ತುಂಬಿ ಹರಿದಿವೆ. ಜಿಲ್ಲೆಯ ಹಲವೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಜಲಾವೃತಗೊಂಡಿದೆ.
ಮಳೆಯಿಂದ ಚಿಕ್ಕಬಳ್ಳಾಪುರ ನಗರದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಂದ ನೀರು ಹೊರಹಾಕಲು ನಿವಾಸಿಗಳು ಪರದಾಡುತ್ತಿದ್ದಾರೆ. ನಿಮ್ಮಾಕಲಕುಂಟೆ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ರಂಗಧಾಮ ಕೆರೆ ಕೋಡಿ ಬಿದ್ದು ರಾಷ್ಟ್ರೀಯ ಹೆದ್ದಾರಿ 234ರಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮತ್ತೊಂದೆಡೆ ಡಿವೈನಿ ಸಿಟಿ ಬಡಾವಣೆಗೆ ಕೆರೆ ನೀರು ನುಗ್ಗಿದೆ. ಮಿಣಕನಗುರ್ಕಿ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿ ಮನೆ ಜಲಾವೃತಗೊಂಡಿದೆ. ಗುಡಿಬಂಡೆ ಪಟ್ಟಣದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಮನೆಯಿಂದ ನೀರು ಹೊರಹಾಕಲು ನಿವಾಸಿಗಳ ತೀವ್ರ ಪರದಾಟ.
ಇನ್ನು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಇರುವ 200ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಹಲವು ಕೆರೆ ಕಟ್ಟೆಗಳು ಬಿರುಕು ಬಿಟ್ಟ ಹಿನ್ನೆಲೆ ರೈತರಲ್ಲಿ ಆತಂಕ ಹೆಚ್ಚಾಗಿದೆ. ಕೆರೆ ಏರಿ ಒಡೆಯುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ 5ಕ್ಕೂ ಹೆಚ್ಚು ಕೆರೆಗಳ ಏರಿ ಒಡೆದು ಅವಾಂತರವಾಗಿದೆ. ಈಗ ಬೆಳೆ ಹಾಳಾಗುವ ಭೀತಿ ಎದುರಾಗಿದೆ. ಮಳೆಗೆ ನಿಮ್ಮಾಕಲಕುಂಟೆಯ ಹೆಚ್ಪಿ ಪೆಟ್ರೋಲ್ ಬಂಕ್ ಜಲಾವೃತಗೊಂಡಿದೆ. ಪೆಟ್ರೋಲ್ ಟ್ಯಾಂಕ್ಗೆ ನೀರು ಮಿಶ್ರಣವಾಗುವ ಆತಂಕ ಎದುರಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಾಲೀಕ ಪೆಟ್ರೋಲ್ ಬಂಕ್ ಮುಚ್ಚಿದ್ದಾನೆ.
ಹಗ್ಗದ ಮೂಲಕ ಯುವಕನನ್ನ ರಕ್ಷಣೆ ಮಾಡಿದ ರೈತರು ಭಾರಿ ಮಳೆಯಿಂದ ಆವುಲಬೆಟ್ಟದ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರೈತರು ರಕ್ಷಣೆ ಮಾಡಿದ್ದಾರೆ. ಟ್ರಾಕ್ಟರ್ ಮೂಲಕ ಆಶ್ಚರ್ಯಕರ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ. ರೈತರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಯಾಮಾರಿದ್ರೆ ಯುವಕ ನೀರು ಪಾಲಾಗುತ್ತಿದ್ದ.
ಕೊಪ್ಪಳದಲ್ಲಿ ಆಲಿಕಲ್ಲು ಮಳೆ ಕೊಪ್ಪಳ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ ಸುರಿಯುತ್ತಿದೆ. ಯಲಬುರ್ಗಾ ತಾಲೂಕಿನ ಮದ್ಲೂರು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು ಭಾರಿ ಗಾತ್ರದ ಆಲಿಕಲ್ಲುಗಳನ್ನು ಕಂಡು ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಆಲಿಕಲ್ಲು ಸಹಿತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ: Karnataka Weather Today: ಬೆಂಗಳೂರು ಸೇರಿ ಬಹುತೇಕ ಕಡೆ ಇಂದಿನಿಂದ ಗುಡುಗು ಸಹಿತ ಭಾರೀ ಮಳೆ
Published On - 8:34 am, Sun, 24 October 21