ಬಿಯರ್ ಮೇಲೆ ಮುನಿಸಿಕೊಂಡ ಮದ್ಯ ಪ್ರಿಯರು: ಹಾಟ್ ಡ್ರಿಂಕ್ಸ್ಗೆ ಮೊರೆ
ಕರ್ನಾಟಕ ಸರ್ಕಾರ ಬಿಯರ್ ಬೆಲೆ ಏರಿಕೆಯಿಂದಾಗಿ ಬಿಯರ್ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಜನವರಿ 20, 2025ರಿಂದ ಜಾರಿಗೆ ಬಂದ ಹೊಸ ಅಬಕಾರಿ ನಿಯಮಗಳಿಂದ ಬಿಯರ್ ಬೆಲೆ ಶೇಕಡ 12 ರಿಂದ 20ರಷ್ಟು ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಬಿಯರ್ ಪ್ರಿಯರು ಹೆಚ್ಚು ದುಬಾರಿಯಾದ ಬಿಯರ್ ಬದಲಿಗೆ ಹಾಟ್ ಡ್ರಿಂಕ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 10: ಕರ್ನಾಟಕ ಸರ್ಕಾರ ಬಿಯರ್ (Beer) ಬೆಲೆ ಹೆಚ್ಚಳ ಮಾಡಿದ ಹಿನ್ನಲೆ ದುಬಾರಿ ಹಣ ತೆತ್ತು ಬಿಯರ್ ಕುಡಿಯುವುದರ ಬದಲು, ಮದ್ಯ ಪ್ರಿಯರು ಹಾಟ್ ಡ್ರಿಂಕ್ಸ್ ಮೊರೆ ಹೋಗಿದ್ದಾರೆ. ಇದರಿಂದ ಬಿಯರ್ ಮಾರಾಟ ಹಾಗೂ ಬೇಡಿಕೆಯಲ್ಲಿ ಗಣನೀಯವಾಗಿ ಕುಂಠಿತವಾಗಿದ್ದು, ಹಾಟ್ ಡ್ರಿಂಕ್ಸ್ ಬೇಡಿಕೆ ಹೆಚ್ಚಳವಾಗಿದೆ.
ಜನವರಿ 20, 2025ರಂದು ರಾಜ್ಯ ಸರ್ಕಾರ ಕರ್ನಾಟಕ ಅಬಕಾರಿ ನಿಯಮಗಳಲ್ಲಿ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಹೊಸ ಅಬಕಾರಿ ನಿಯಮಗಳ ಪ್ರಕಾರ ಲೀಟರ್ ಬಿಯರ್ ಮೇಲೆ ಶೇ 12 ರಿಂದ ಶೇ 20ರಷ್ಟು ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ಬಿಯರ್ ಪ್ರಿಯರು ದುಬಾರಿ ಬಿಯರ್ ಕುಡಿಯುವುದರ ಬದಲು, ಹಾಟ್ ಡ್ರಿಂಕ್ಸ್ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಒಂದು ತಿಂಗಳಲ್ಲಿ ಶೇಕಡ 30 ರಷ್ಟು ಬಿಯರ್ ಬೇಡಿಕೆ ಕುಂಠಿತವಾಗಿದೆ.
ಇದನ್ನೂ ಓದಿ: Beer Price Hike: ಬಿಯರ್ ಪ್ರಿಯರಿಗೆ ಕಹಿ ಸುದ್ದಿ: ಜ. 20ರಿಂದಲೇ ದರ ಏರಿಕೆ
ಇನ್ನೂ ಹೊಸ ಗ್ರಾಹಕರು, ಮೊದಲು ಬಿಯರ್ ಅಭ್ಯಾಸ ಮಾಡಿಕೊಂಡು ನಂತರ ಹಾಟ್ ಡ್ರಿಂಕ್ಸ್ ಸೇವನೆ ಸರ್ವೆ ಸಾಮಾನ್ಯವಾಗಿತ್ತು. ಆದರೆ ಬಿಯರ್ ಖರೀದಿಗೆ ಹೋದ ಅದೇಷ್ಟೊ ಗ್ರಾಹಕರು ಬಿಯರ್ ಬೆಲೆ ಕೇಳಿ ಶಾಕ್ ಆಗುತ್ತಿದ್ದು, ಹಾಟ್ ಡ್ರಿಂಕ್ಸ್ ಖರೀದಿ ಮಾಡ್ತಿರುವ ದೃಶ್ಯಗಳು ಕಂಡು ಬಂತು.
ಸ್ವತಃ ಸರ್ಕಾರಿ ಸ್ವಾಮ್ಯದ ಸಿ.ಎಲ್-11ಸಿ ಲೈಸೇನ್ಸ್ ದಾರ ಎಂ.ಎಸ್.ಐ.ಎಲ್ ಬಾರ್ನಲ್ಲಿ ಒಂದು ಬಾಟಲ್ ಕೆ.ಪ್ ಬಿಯರ್ ಬೆಲೆ 185 ರೂಪಾಯಿ, ಹಾಗೆ ಟೂಬೊರ್ಗೊ 195 ರೂಪಾಯಿ, ಯು.ಬಿ 160 ರೂಪಾಯಿ, ಬುಲೇಟ್ 150 ರೂಪಾಯಿ, ಬಡ್ ವೈಜರ್245 ರೂಪಾಯಿ, ಕಾಲ್ಸ್ ಬರ್ಗ್ 250 ರೂಪಾಯಿ ಸೇರಿದಂತೆ ಯಾವುದೆ ಬಿಯರ್ ಕೇಳಿದರೂ 150 ರೂಪಾಯಿ ಮೇಲಿದೆ. ಇದಿರಂದ ಬಿಯರ್ ಪ್ರಿಯರು ಬಿಯರ್ ಬಾಟಲ್ ಸಹವಾಸ ಬಿಟ್ಟು ನೈಂಟಿ ಹಾಟ್ ಡ್ರಿಂಕ್ಸ್ ಮೊರೆ ಹೊಗುತ್ತಿದ್ದಾರೆ.
ಇದನ್ನೂ ಓದಿ: ಐದು ತಿಂಗಳುಗಳಿಂದ ಬಿಡುಗಡೆಯಾಗದ ಕ್ಷೀರಸಿರಿ ಯೋಜನೆ ಪ್ರೋತ್ಸಾಹಧನ: ಧರಣಿಗೆ ಮುಂದಾದ ರೈತರು
ಒಟ್ಟಿನಲ್ಲಿ ಬಿಯರ್ ಬೇಡಿಕೆ ಗಮನಿಸಿದ ರಾಜ್ಯ ಸರ್ಕಾರ, ಸ್ವತಃ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಇದರಿಂದ ಬಿಯರ್ ಪ್ರಿಯರು, ಬಿಯರ್ ಮೇಲೆ ಮುನಿಸಿಕೊಳ್ಳುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.