ಪ್ರಗತಿಪರರ ಹತ್ಯೆ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡವಿರುವ ಶಂಕೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಪ್ರಗತಿಪರರ ಹತ್ಯೆ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಾಗೇಪಲ್ಲಿಯಲ್ಲಿಯಲ್ಲಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ: ಪ್ರಗತಿಪರರ ಹತ್ಯೆ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala Chief Minister Pinarayi Vijayan) ಬಾಗೇಪಲ್ಲಿಯಲ್ಲಿಯಲ್ಲಿ ಆರೋಪಿಸಿದ್ದಾರೆ. ಬಾಗೇಪಲ್ಲಿಯ ಕೆಹಚ್ಬಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ, ಸಿಪಿಐ(ಎಂ) ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕೇರಳ ಸರ್ಕಾರದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ, ಕೇರಳ ಸರ್ಕಾರಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಕೇರಳದಂತೆ ದೇಶದ ಮತ್ತಿತರೆ ರಾಜ್ಯಗಳಿಗೂ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.
ಕೇರಳ ರಾಜ್ಯದಲ್ಲಿ ಸಿಪಿಎಂ ಸರ್ಕಾರದ ಜತೆ ಜನರು ನಿಂತಿದ್ದಾರೆ. ನಾವು ಬಿಜೆಪಿ, ಆರ್ಎಸ್ಎಸ್ ಕುತಂತ್ರಗಳಿಗೆ ಶರಣಾಗುವುದಿಲ್ಲ. ಬಿಜೆಪಿ, ಆರ್ಎಸ್ಎಸ್ ಧರ್ಮದ ಹೆಸರಿನಲ್ಲಿ ಕೋಮುವಾದ ಬೆಳೆಸುತ್ತಿದೆ. ಕೋಮುವಾದ ನೋಡಿಕೊಂಡು ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಮಂಗಳೂರು, ಉಡುಪಿಯಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳನ್ನು ವಿದ್ಯಾಭ್ಯಾಸದಿಂದ ದೂರು ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆರ್.ಎಸ್. ಎಸ್ ಸಂಕುಚಿದ ದೇಶಭಕ್ತಿ ಮಾಡುತ್ತಿದೆ. ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ದೇಶದಲ್ಲಿ ಅಘಾತಕಾರಿ ಅನ್ನಿವೇಶ ಸೃಷ್ಟಿ ಮಾಡಿದ್ದಾರೆ. ದೇಶ ಭಕ್ತಿ, ರಾಷ್ಟ್ರೀಯತೆ ಕೆಲವರ ಸ್ವತ್ತ ಎನ್ನುವಂತೆ ಮಾಡುತ್ತಿದ್ದಾರೆ. ದೇಶ ಭಕ್ತಿಗೆ ಆರ್.ಎಸ್.ಎಸ್ ಪ್ರಮಾಣ ಪತ್ರ ಬೇಕು ಎನ್ನುವ ಹಾಗೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್.ಎಸ್.ಎಸ್ ಇರಲೇ ಇಲ್ಲ ಎಂದು ಹೇಳಿದ್ದಾರೆ.
ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು ಕಪಟ ದೇಶ ಪ್ರೇಮಿಗಳು, ಬ್ರಿಟೀಷರಿಗೆ ಗುಲಾಮರಾಗಿದ್ದವರು. ಇಂದು ಕಪಟ ನಾಟಕ ದೇಶ ಭಕ್ತರಂತೆ ಪೋಸ್ ಕೊಡುತ್ತಿದ್ದಾರೆ. ಜನರು ಹೀಗೆ ಇರಬೇಕು ಎಂದು ಹೇಳುವುದಕ್ಕೆ ಆರ್.ಎಸ್.ಎಸ್ ನವರು ಯಾರು? ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಹೀಗೆ ಇರಬೇಕು ಹೀಗೆ ಬರೆಯಬೇಕು ಹೀಗೆ ಮಾತನಾಡಬೇಕು ಎನ್ನುಲು ಅವರು ಯಾರು? ಎಂದು ಪ್ರಶನ್ನಿಸಿದ್ದಾರೆ.
ಆರ್ಎಸ್ಎಸ್ನ ಸಂಸ್ತಾಪಕ ಗೋಳಾಲ್ಕರ್ ಸ್ವಾತಂತ್ರಯ ಹೋರಾಟ ವಿರೋಧ ಮಾಡಿದರು. ಆರ್ಎಸ್ಎಸ್ನಚವರು ದೇಶದ ಎಲ್ಲಾ ವಿಭಜನೆಗಳಲ್ಲಿ ಇದ್ದಾರೆ. ಆದರೆ ಇಂದು ಆರ್.ಎಸ್.ಎಸ್ ಅತಿದೇಶ ಪ್ರೇಮಿಗಳಂತೆ ವರ್ತಿಸುತ್ತಿದ್ದಾರೆ. ಆರ್ಎಸ್ಎಸ್ ಹಾಗೂ ಬಿಜೆಪಿಯವರು ನಿಗೂಢ ಹುನ್ನಾರ ಹೊಂದಿದ್ದಾರೆ. ಬೆಳೆಯುವ ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಶಾಲಾ ಕಾಲೇಜುಗಳಲ್ಲಿ ಕೋಮುವಾದದ ಬೀಜ ಬಿತ್ತುತ್ತಿದ್ದಾರೆ. ಪಾಠಗಳಲ್ಲಿ ಇಲ್ಲ ಸಲ್ಲದ ಕೋಮುವಾದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಆರ್ಎಸ್ಎಸ್ ಸಂಸ್ಥಾಪಕರ ಬಾಷಣ ಸೇರಿಸಿದ್ದಾರೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಗತಿಪರರ ಧ್ವನಿ ಅಡಗಿಸುತ್ತಿದ್ದಾರೆ. ಆರ್.ಎಸ್.ಎಸ್ ವಿರುದ್ದ ಮಾತನಾಡಿದ್ದಕ್ಕೆ ಪ್ರೋ.ಭಗವಾನ್ಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.
2014ರಲ್ಲಿ ಪ್ರೋ.ಯು.ಆರ್. ಅನಂತಮೂರ್ತಿಗೆ ಪಾಕಿಸ್ತಾನ ಪ್ಲೈಟ್ ಟಿಕೇಟ್ ಬುಕ್ ಮಾಡಿ ಅವಹೇಳನ ಮಾಡಿದರು. ಕರ್ನಾಟಕವನ್ನು ಆರ್ಎಸ್ಎಸ್ ಸಂಘ ಪರಿವಾರ ಪ್ರಯೋಗ ಶಾಲೆ ಮಾಡಿಕೊಂಡಿದೆ. ತಲೆಮಾರಿಗಾಗಿ ಕರ್ನಾಟಕದಲ್ಲಿ ಕೋಮುವಾದಿ ಸೃಷ್ಟಿ ಮಾಡುತ್ತಿದ್ದಾರೆ. ಉತ್ತರ ಭಾರತದಂತೆ ಕರ್ನಾಟಕಟದಲ್ಲೂ ಕೋಮುವಾದಿ ಸೃಷ್ಟಿಸುತ್ತಿದ್ದಾರೆ. ಪಠ್ಯ ಪುಸ್ತಕವನ್ನು ಕೇಸರಿಕರಣ ಮಾಡುತ್ತಿದ್ದಾರೆ. ಮಹಾನ್ ಸಂತರಾದ ನಾರಾಯಣ ಗುರು, ಪೆರಿಯಾರ್ ಪಾಠಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆರ್ಎಸ್ಎಸ್ ಧನ ಜನ ಬಲ ಬಳಸುತ್ತೆ ಹುಷಾರು ಆಗಿರಿ. ಕರ್ನಾಟಕದಲ್ಲಿ ನಡೆದ ರೇಸಾರ್ಟ ರಾಜಕೀಯ ಕರ್ನಾಟಕಕ್ಕೆ ಕಪ್ಪು ಚುಕ್ಕೆ. ಬಿಜೆಪಿ, ಆರ್ಎಸ್ಎಸ್ ನವರು ಮಾಡುತ್ತಿರುವ ರಾಜಕಾರಣಕ್ಕೆ ಕರ್ನಾಟಕದ ಮಣ್ಣಿಗೆ ನಾಚಿಕೆ ಆಗುತ್ತೆ. ದೇಶಾದ್ಯಂತ ಕೋಮು ವಿರೋಧಿ ಹೋರಾಟಗಳು ನಡೆಯಬೇಕು. ಕೋಮುವಾದದಿಂದ ಶಾಂತಿ ನೆಲಸಲ್ಲ, ಕೋಮುವಾದಕ್ಕೆ ಜಯ ಸಿಗಲ್ಲ. ಕೋಮುವಾದಕ್ಕೆ ಪ್ರತಿಕಾರವಾಗಿ ಕೋಮುವಾದ ಸೃಷ್ಟಿಸಬೇಡಿ ಎಂದು ಮಾತನಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ